ETV Bharat / state

ಅಥಣಿ ತಲುಪಿದ ಕೋವ್ಯಾಕ್ಸಿನ್, ಲಸಿಕೆ ಹೊತ್ತು ತಂದ ವಾಹನಕ್ಕೆ ಪೂಜೆ ಸಲ್ಲಿಸಿದ ಆರೋಗ್ಯ ಇಲಾಖೆ! - ಆರೋಗ್ಯ ಇಲಾಖೆಯ ಸಿಬ್ಬಂದಿ

ಜಿಲ್ಲಾ ಆಸ್ಪತ್ರೆಯಿಂದ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ಮೊದಲ ಹಂತವಾಗಿ 260 ಡೋಸ್ ವ್ಯಾಕ್ಸಿನ್ ಸರಬರಾಜು ಮಾಡಲಾಗಿದ್ದು, ನಾಳೆ 10:30ಕ್ಕೆ ಮೊದಲ ಹಂತವಾಗಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ.

corona vacsin reached Athani
ಅಥಣಿ ತಲುಪಿದ ಕೋವ್ಯಾಕ್ಸಿನ್
author img

By

Published : Jan 15, 2021, 8:30 PM IST

ಅಥಣಿ: ಬಹುನಿರೀಕ್ಷಿತ ಸ್ವದೇಶಿ ಕೊರೊನಾ ವ್ಯಾಕ್ಸಿನ್ ಅಥಣಿಗೆ ಆಗಮನವಾಗಿದ್ದು, ಸ್ಥಳೀಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಲಸಿಕೆ ತಂದ ವಾಹನಕ್ಕೆ ಪೂಜೆ ಸಲ್ಲಿಸಿ ಬರಮಾಡಿಕೊಂಡರು.

ಅಥಣಿ ತಲುಪಿದ ಕೋವ್ಯಾಕ್ಸಿನ್

ಓದಿ: ಬೈಕ್‌ ಸವಾರಿ ವೇಳೆ ಅಡ್ಡಬಂದ ಒಂಟೆ; ಬೆಂಗಳೂರಿನ ಬೈಕ್‌ ಕಿಂಗ್‌ ರಿಚರ್ಡ್‌ ಶ್ರೀನಿವಾಸ್ ದುರ್ಮರಣ

ಬೆಳಗಾವಿ ಜಿಲ್ಲಾ ಆರೋಗ್ಯ ಕೇಂದ್ರದಿಂದ ಜಿಲ್ಲೆಯ 12 ತಾಲೂಕಿಗೆ ಕೊರೊನಾ ವ್ಯಾಕ್ಸಿನ್ ಸರಬರಾಜು ಮಾಡಲಾಯಿತು. ಅದರಲ್ಲಿ ಅಥಣಿ ಸಮುದಾಯದ ಆಸ್ಪತ್ರೆಗೂ ವೈದ್ಯಕೀಯ ನಿಯಮಾನುಸಾರ ಕೊರೊನಾ ಲಸಿಕೆಯನ್ನು ವಿತರಣೆ ಮಾಡಲಾಗಿದೆ.

ಇದೆ ಸಂದರ್ಭ ಅಥಣಿ ತಾಲೂಕು ವೈದ್ಯಾಧಿಕಾರಿ ಬಸವರಾಜ ಕಾಗೆ ಮಾತನಾಡಿ, ಜಿಲ್ಲಾ ಆಸ್ಪತ್ರೆಯಿಂದ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ಮೊದಲ ಹಂತವಾಗಿ 260 ಡೋಸ್ ವ್ಯಾಕ್ಸಿನ್ ಸರಬರಾಜು ಮಾಡಲಾಗಿದೆ. ನಾಳೆ 10:30ಕ್ಕೆ ಮೊದಲ ಹಂತವಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಸ್ಥಳೀಯ ಶಾಸಕ ಮಹೇಶ್ ಕುಮಟಳ್ಳಿ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.