ಬೆಳಗಾವಿ: ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿ ಜಿಲ್ಲೆಯಲ್ಲಿ 4 ಜನರ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 145 ಕ್ಕೆ ಏರಿದೆ.
ಇಂದಿನ 4 ಪ್ರಕರಣಗಳಲ್ಲಿ ಮಹಾರಾಷ್ಟ್ರದಿಂದ ಬಂದಿದ್ದ 32 ವರ್ಷದ ವ್ಯಕ್ತಿ ಹಾಗೂ 37 ವರ್ಷದ ಮಹಿಳೆ ಸೇರಿದಂತೆ ದೆಹಲಿಯಿಂದ ಹಿಂದಿರುಗಿದ್ದ 28 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಕೇರಳದಿಂದ ಆಗಮಿಸಿದ ಎರಡು ವರ್ಷದ ಮಗುವಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.