ಬೆಳಗಾವಿ: ಕೊರೊನಾ ವೈರಸ್ ಎಫೆಕ್ಟ್ನಿಂದ ಗೋವಿನ ಜೋಳದ ದರ ದಿಢೀರ್ ಕುಸಿತಗೊಂಡಿದ್ದು, ಅನ್ನದಾತರು ಆತಂಕಗೊಂಡಿದ್ದಾರೆ.
ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ರೈತರು ಈ ಬಾರಿ ಗೋವಿನಜೋಳವನ್ನು ಬೆಳೆದಿದ್ದು, ಕೊರೊನಾ ಹೊಡೆತಕ್ಕೆ 1800 ರಿಂದ 2000 ಸಾವಿರ ರೂವರೆಗಿದ್ದ ಜೋಳದ ಮಾರುಕಟ್ಟೆ ದರ ಪ್ರತಿ ಕ್ವಿಂಟಾಲ್‌ಗೆ 1000 ರೂಪಾಯಿಗೆ ಕುಸಿತವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಕುಕ್ಕುಟೋದ್ಯಮ ನಡೆಸುವವರು ಫಾರಂ ಕೋಳಿಗಳಿಗೆ ಆಹಾರಕ್ಕಾಗಿ ಗೋವಿನ ಜೋಳ ಖರೀದಿಸುತ್ತಿದ್ದರು. ಕೊರೊನಾ ಎಫೆಕ್ಟ್‌ಗೆ ಕುಕ್ಕಟ್ಟೋದ್ಯಮವೂ ಲಾಸ್ ಆಗಿದ್ದು, ರೈತರು ಕಂಗಾಲಾಗಿದ್ದಾರೆ. ಇನ್ನು ನಮ್ಮ ನೆರವಿಗೆ ಧಾವಿಸುವಂತೆ ನೊಂದ ರೈತನಿಂದ ಮನವಿ ಮಾಡಿದ್ದು, ತಕ್ಷಣವೇ ಸರ್ಕಾರ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿದ್ದಾರೆ.