ETV Bharat / state

ಕೊರೊನಾ: ಕುಡಚಿ ಪಟ್ಟಣದಲ್ಲಿ 3 ಕಿ.ಮೀ.​​ ನಿಷೇಧಿತ ಪ್ರದೇಶ ಎಂದು ಘೋಷಣೆ! - ಕರ್ನಾಟಕ ಕೊರೊನಾ ನ್ಯೂಸ್​

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆ ಚಿಕ್ಕೋಡಿಯಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್​ ವರದಿಯಾಗಿದೆ. ಈ ಹಿನ್ನೆಲೆ ಇಲ್ಲಿನ ಕುಡಚಿ ಗ್ರಾಮದ ಸುಮಾರು 3 ಕಿ.ಮೀ. ಪ್ರದೇಶವನ್ನು ಆಯಕಟ್ಟಿನ ಪ್ರದೇಶ ಎಂದು ಗುರುತಿಸಿ ನಿಷೇಧ ಹೇರಲಾಗಿದೆ.

Corona: Declared 3km restricted area in Kudachi town
ಕೊರೊನಾ: ಕುಡಚಿ ಪಟ್ಟಣದಲ್ಲಿ 3 ಕಿ.ಮೀಟರ್​​ ನಿಷೇಧಿತ ಪ್ರದೇಶ ಎಂದು ಘೋಷಣೆ
author img

By

Published : Apr 7, 2020, 9:32 PM IST

ಚಿಕ್ಕೋಡಿ (ಬೆಳಗಾವಿ): ಕುಡಚಿಯಲ್ಲಿ ನಾಲ್ಕು ಜನರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕುಡಚಿ ಪಟ್ಟಣದ 3 ಕಿ.ಮೀ. ನಿಷೇಧಿತ ಪ್ರದೇಶ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಕೊರೊನಾ ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದ 44 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. 44 ಜನರನ್ನು ಪಟ್ಟಣದ ಸರ್ಕಾರಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ಗೆ ಮಾಡಲಾಗಿದೆ.

ರಾಯಬಾಗ ತಹಶೀಲ್ದಾರ್​​​ ಚಂದ್ರಕಾಂತ್ ಭಜಂತ್ರಿ, ಪುರಸಭೆ ಮುಖ್ಯಾಧಿಕಾರಿ ಎಸ್.ಎ.ಮಹಾಜನ ನೇತೃತ್ವದಲ್ಲಿ ಶಿಫ್ಟ್ ಮಾಡಲಾಗಿದ್ದು, ಯಾರೂ ಮನೆ ಬಿಟ್ಟು ಹೊರಗೆ ಹೋಗದಂತೆ ಪೊಲೀಸ್ ಇಖಾಲೆಯಿಂದ ಕಟ್ಟುನಿಟ್ಟಿನ‌ ಆದೇಶ ಹೊರಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪುರಸಭೆಯಿಂದ ಪಟ್ಟಣದಲ್ಲೆಡೆ ಕ್ರಿಮಿನಾಶಕ ಸಿಂಪಡಣೆ ಕಾರ್ಯ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.