ETV Bharat / state

ಜ್ವಲಂತ ಸಮಸ್ಯೆ ಚರ್ಚೆಗೆ ಆದ್ಯತೆ: ಧರಣಿ ಹಿಂಪಡೆದ ಕಾಂಗ್ರೆಸ್​​.. ವರುಣ್​​ ಸಿಂಗ್​ಗೆ ಸಂತಾಪ ಸೂಚಿಸಿದ ಸದನ - ಧರಣಿ ಹಿಂಪಡೆದ ಕಾಂಗ್ರೆಸ್​​

ರಾಜ್ಯದ ಸಚಿವ ಮತ್ತು ಶಾಸಕರೊಬ್ಬರು ಬೆಂಗಳೂರಿನಲ್ಲಿ ಬಹುಕೋಟಿ ಮೌಲ್ಯದ ಭೂ ಕಬಳಿಕೆ ಮಾಡಿರುವ ಪ್ರಕರಣದ ತನಿಖೆಗೆ ಆಗ್ರಹಿಸಿ ಸದನದಲ್ಲಿ ನಡೆಸುತ್ತಿದ್ದ ಧರಣಿಯನ್ನು ಕಾಂಗ್ರೆಸ್ ಸದಸ್ಯರು ಹಿಂಪಡೆದಿದ್ದಾರೆ.

Congress withdraw protest
ಧರಣಿ ಹಿಂಪಡೆದ ಕಾಂಗ್ರೆಸ್​​
author img

By

Published : Dec 16, 2021, 5:28 PM IST

ಬೆಳಗಾವಿ: ವಿಧಾನ ಪರಿಷತ್ತಿನಲ್ಲಿ ನಿನ್ನೆಯಿಂದ ನಡೆಸುತ್ತಿದ್ದ ಧರಣಿಯನ್ನು ಕಾಂಗ್ರೆಸ್ ಪಕ್ಷ ಕೈ ಬಿಟ್ಟಿದ್ದು, ಜ್ವಲಂತ ಸಮಸ್ಯೆ ಚರ್ಚೆಗೆ ಸಮಯ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದೆ.

ಧರಣಿ ಹಿಂಪಡೆದ ಕಾಂಗ್ರೆಸ್​​

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸಚಿವ ಭೈರತಿ ಬಸವರಾಜ್ ವಜಾಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ನಿನ್ನೆ ಇಡಿ ದಿನ ಧರಣಿ ನಡೆಸಿದ್ದರು. ಅಂತಿಮವಾಗಿ ಕಾಂಗ್ರೆಸ್​​​ 14 ಸದಸ್ಯರನ್ನು ಸಭಾಪತಿಗಳು ಒಂದು ದಿನದ ಅವಧಿಗೆ ಅಮಾನತುಗೊಳಿಸಿದ್ದರು. ಆದಾಗ್ಯೂ ಧರಣಿ ನಿಲ್ಲಿಸದಿದ್ದಾಗ ಕಲಾಪವನ್ನು ಮುಂದೂಡಲಾಗಿತ್ತು.

ಕೋರಂ ಕೊರತೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಲಾಪ ನಡೆಯಲಿಲ್ಲ. ಭೋಜನ ವಿರಾಮದ ಬಳಿಕ ಕಲಾಪ ಸಮಾವೇಶಗೊಂಡಾಗ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಕುರಿತು ಸುದೀರ್ಘ ಚರ್ಚೆ ನಡೆಸಬೇಕಿದೆ. ಜ್ವಲಂತ ಸಮಸ್ಯೆಗಳ ನಿವಾರಣೆಗೆ ಚರ್ಚಿಸಬೇಕಿದೆ. ಇದರಿಂದ ಧರಣಿ ಕೈಬಿಟ್ಟು ಕಲಾಪದಲ್ಲಿ ಪಾಲ್ಗೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯರಿಗೆ ಮನವಿ ಮಾಡಿದರು. ಕಾಂಗ್ರೆಸ್ ಸದಸ್ಯರು ಮನವಿಗೆ ಸ್ಪಂದಿಸಿ ಧರಣಿ ಕೈಬಿಟ್ಟರು.

ಸಂತಾಪ:

ಕಲಾಪ ಆರಂಭದಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಭಾರತದ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನರಾದುದನ್ನು ಈ ಸದನಕ್ಕೆ ತಿಳಿಸಲು ವಿಷಾದಿಸುತ್ತೇನೆ. ಡಿ.8ರಂದು ನೀಲಗಿರಿ ಕಾನನದಲ್ಲಿ ಘಟಿಸಿದ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಗಾಯಗೊಂಡು ಬದುಕುಳಿದಿದ್ದ ಭಾರತದ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಡಿ.15ರಂದು ನಿಧನ ಹೊಂದಿರುತ್ತಾರೆ.

ಉತ್ತರ ಪ್ರದೇಶದ ಕನೋಳಿ ಗ್ರಾಮದಲ್ಲಿ ಜನಿಸಿದ್ದ ಇವರು, ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಚಂಡೀಗಢದಲ್ಲಿ ಪೂರೈಸಿದ ನಂತರ 2004ರಲ್ಲಿ ಎನ್​​ಡಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಟೆಸ್ಟ್ ಪೈಲಟ್ ಆಗಿ ವಾಯುಪಡೆಗೆ ನೇಮಕಗೊಂಡಿದ್ದರು. 2017ರಲ್ಲಿ ವಿಂಗ್ ಕಮಾಂಡರ್ ಆಗಿ ತಮಿಳುನಾಡಿನ ಡಿಫೆನ್ಸ್ ಸರ್ವೀಸ್ ಸ್ಟಾಪ್ ಕಾಲೇಜಿನಲ್ಲಿ ಡೈರೆಕ್ಟಿಂಗ್ ಸ್ಟಾಫ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ದೇಶಕ್ಕೆ ಹೆಮ್ಮೆಯ, ಶೌರ್ಯದ ಮತ್ತು ಪರಮೋನ್ನತ ವೃತ್ತಿಪರತೆಯ ಸೇವೆ ಸಲ್ಲಿಸಿದ್ದ ವರುಣ್ ಸಿಂಗ್ ಶೌರ್ಯ ಚಕ್ರ ಪ್ರಶಸ್ತಿಗೆ ಭಾಜನರಾಗಿದ್ದರು.

ಹೆಲಿಕಾಪ್ಟರ್‌ ದುರಂತದಲ್ಲಿ ಬದುಕುಳಿದಿದ್ದ ಏಕೈಕ ವೀರ ಯೋಧ ಗ್ರೂಪ್ ಕ್ಯಾಪ್ಟನ್ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿರುವುದು ದುಃಖಕರ ಸಂಗತಿ. ರಾಷ್ಟ್ರವು ಹಿರಿಯ ವೀರ ಯೋಧರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದರು. ಈ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ, ಸಭಾ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮತ್ತಿತರರು ಸದನದಲ್ಲಿ ಸಂತಾಪ ಸೂಚಿಸಿದರು.

ಇದನ್ನೂ ಓದಿ: ಪರಿಷತ್​ನಲ್ಲಿ ಕಾಂಗ್ರೆಸ್ ಸದಸ್ಯರ ಧರಣಿಗೆ ತೆರೆ ಎಳೆದ ಸಭಾಪತಿ ಹೊರಟ್ಟಿ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.