ETV Bharat / state

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಬಸ್ ಸಮಸ್ಯೆ.. ಆಡಳಿತ-ಪ್ರತಿಪಕ್ಷದ ಸದಸ್ಯರ ನಡುವೆ ಗದ್ದಲ, ವಾಕ್ಸಮರ - ಸದನದಿಂದ ಅಮಾನತು ಮಾಡಿ

ರಾಜ್ಯದಲ್ಲಿ ಉಂಟಾಗಿರುವ ಬಸ್​ ಸಮಸ್ಯೆಯನ್ನು ನಿವಾರಿಸಲು ಕಾಂಗ್ರೆಸ್​​ ಸದಸ್ಯರು ವಿಧಾನಸಭೆಯಲ್ಲಿ ಧರಣಿ ನಡೆಸಿದರು. ಈ ಸಂದರ್ಭ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಏಕವಚನದಲ್ಲೇ ಪರಸ್ಪರ ವಾಗ್ದಾಳಿ ನಡೆಸಿದರು.

congress-protest-in-assembly
ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಬಸ್ ಸಮಸ್ಯೆ : ಆಡಳಿತ-ಪ್ರತಿಪಕ್ಷದ ಸದಸ್ಯರ ನಡುವೆ ಗದ್ದಲ, ವಾಕ್ಸಮರವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಬಸ್ ಸಮಸ್ಯೆ : ಆಡಳಿತ-ಪ್ರತಿಪಕ್ಷದ ಸದಸ್ಯರ ನಡುವೆ ಗದ್ದಲ, ವಾಕ್ಸಮರ
author img

By

Published : Dec 21, 2022, 3:54 PM IST

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಬಸ್ ಸಮಸ್ಯೆ.. ಆಡಳಿತ-ಪ್ರತಿಪಕ್ಷದ ಸದಸ್ಯರ ನಡುವೆ ಗದ್ದಲ, ವಾಕ್ಸಮರ

ಬೆಳಗಾವಿ/ಬೆಂಗಳೂರು : ರಾಜ್ಯದಲ್ಲಿ ಬಸ್ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆಗೆ ಒತ್ತಾಯಿಸಿ, ವಿಧಾನಸಭೆಯಲ್ಲಿ ಇಂದು ಕಾಂಗ್ರೆಸ್ ಸದಸ್ಯರು ನಡೆಸಿದ ಧರಣಿ ನಡೆಸಿದ್ದು ಕೋಲಾಹಲಕ್ಕೆ ಕಾರಣವಾಯಿತು.

ಬಿಜೆಪಿ ಸದಸ್ಯ ಸಿದ್ದು ಸವದಿ ಅವರು ಕೇಳಿದ ಪ್ರಶ್ನೆಗೆ ಸಾರಿಗೆ ಸಚಿವ ಶ್ರೀರಾಮಲು ಉತ್ತರ ನೀಡಿದರು. ಇದಕ್ಕೆ ಕೆಲ ಶಾಸಕರು ವಿರೋಧ ವ್ಯಕ್ತಪಡಿಸಿದರು. ಶಾಲೆಗಳಿಗೆ ಹೊಗಲು ಮಕ್ಕಳು ಬಸ್ ಇಲ್ಲದೆ ಪರದಾಡುತ್ತಿದ್ದಾರೆ. ಹಾಗಾಗಿ, ಬಸ್ ಒದಗಿಸಲು ಸದನದಲ್ಲಿ ಕೆಲ ಸದಸ್ಯರು ಆಗ್ರಹಿಸಿದರು. ಆಗ ಸಚಿವ ಶ್ರೀರಾಮುಲು, ಕೊರೊನಾ ಮುನ್ನ ಬಸ್​ ಸೌಲಭ್ಯ ಇತ್ತು. ಕೊರೊನಾ ನಂತರ ಕೆಲ ಕಡೆ ಇನ್ನೂ ಬಸ್ ಆರಂಭವಾಗಿಲ್ಲ. ಕೆಲವೊಂದು ಕಡೆ ರಸ್ತೆಗಳು ಸರಿ ಇಲ್ಲವೆಂದು ಬಸ್ ಆರಂಭವಾಗಿಲ್ಲ ಎಂದರು. ಇದಕ್ಕೆ ಸದನದಲ್ಲಿ ಪ್ರತಿಪಕ್ಷದ ನಾಯಕರು ಹಾಗೂ ಶಾಸಕರು ಆಕ್ರೋಶ ಹೊರ ಹಾಕಿ ರಸ್ತೆ ಸರಿಯಿಲ್ಲವೆಂದರೆ ಹೇಗೆ?. ನಿಮ್ಮದೆ ಸರ್ಕಾರ, ಇದು ಸರ್ಕಾರದ ವೈಫಲ್ಯ ಎಂದು ಕಿಡಿಕಾರಿದರು.

ಸದನದ ಬಾವಿಗಿಳಿದು ಕಾಂಗ್ರೆಸ್​ ಧರಣಿ : ಈ ವೇಳೆ ಕಾಂಗ್ರೆಸ್ ಸದಸ್ಯ ಡಾ. ರಂಗನಾಥ್ ಸರಿಯಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಬಾವಿಗಿಳಿದು ಧರಣಿ ನಡೆಸಿದರು. ಆಗ ಸಚಿವರಾದ ಗೋವಿಂದ ಕಾರಜೋಳ ಹಾಗೂ ಜೆ.ಸಿ.ಮಾಧುಸ್ವಾಮಿ ಅವರು ಧರಣಿ ಕೈಬಿಟ್ಟು ಹೊರ ನಡೆಯಿರಿ. ಇದೇನು ನಿಮ್ಮ ವರ್ತನೆ ಎಂದು ಸಿಟ್ಟಿನಿಂದ ಹೇಳಿದರು. ಇದರಿಂದ ಕೆರಳಿದ ಕಾಂಗ್ರೆಸ್ ನ ಇತರ ಸದಸ್ಯರು ಧರಣಿ ನಡೆಸಿದರು. ಆಗ ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಸಚಿವರಗಳ ನಡವಳಿಕೆ ಸರಿಯಿಲ್ಲ. ಅವರು ಕ್ಷಮಾಪಣೆ ಕೇಳಬೇಕೆಂದು ಸದಸ್ಯರು ಪಟ್ಟು ಹಿಡಿದರು.

ಏಕವಚನದಲ್ಲೇ ಪರಸ್ಪರ ವಾಗ್ದಾಳಿ : ಧರಣಿ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ಏಕ ವಚನದಲ್ಲೇ ಪರಸ್ಪರ ನಿಂದಿಸಿಕೊಂಡರು. ಈ ಗದ್ದಲದ ನಡುವೆ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಕೇಳಲಿಲ್ಲ. ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಕುಮಾರ್ ಬಂಗಾರಪ್ಪ ಅವರು ಮಾಡಿದ ಮನವಿಗೂ ಸದಸ್ಯರು ಸ್ಪಂದಿಸದೆ ಮಾತಿನ ವಾಕ್ಸಮರಕ್ಕೆ ಮುಂದಾದರು. ಆಗ ಸ್ಪೀಕರ್ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.

ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಸಿದ್ದು ಸವದಿ ಅವರು ತಮ್ಮ ಕ್ಷೇತ್ರದಲ್ಲಿ ಶಾಲಾ ಮಕ್ಕಳಿಗೆ ಸಮರ್ಪಕ ಸಾರಿಗೆ ಬಸ್ ಸೌಲಭ್ಯ ಸರಿಯಾಗಿ ಕಲ್ಪಿಸುವಂತೆ ಸರ್ಕಾರವನ್ನು ಆಗ್ರಹಿಸಿದರು. ಆಗ ಅದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್-ಜೆಡಿಎಸ್ ನ ಹಲವು ಸದಸ್ಯರು, ರಾಜ್ಯದ ಎಲ್ಲೆಡೆ ಈ ಸಮಸ್ಯೆ ಇದೆ. ಸಮರ್ಪಕ ಸಾರಿಗೆ ಒದಗಿಸಬೇಕು ಎಂದು ಆಗ್ರಹಿಸಿ ಧರಣಿ ನಡೆಸಿದರು. ಆಗ ಮಧ್ಯ ಪ್ರವೇಶಿಸಿದ ಸಚಿವ ಶ್ರೀರಾಮಲು ಅವರು, ವಿಭಾಗವಾರು ಶಾಸಕರ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇನೆ. ಧರಣಿ ಕೈ ಬಿಡುವಂತೆ ಮನವಿ ಮಾಡಿದರು. ನಂತರ ಸ್ಪೀಕರ್ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ ಅವರು ಈ ಬಗ್ಗೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುತ್ತೇನೆ ಎಂದು ಹೇಳಿದರು. ಇದಕ್ಕೆ ಸ್ಪಂದಿಸಿದ ಕಾಂಗ್ರೆಸ್ ಸದಸ್ಯರು ತಮ್ಮ ಸ್ಥಾನಗಳಿಗೆ ತೆರಳಿದರು.

ಆದರೆ, ಕಾಂಗ್ರೆಸ್ ಸದಸ್ಯ ಡಾ. ರಂಗನಾಥ್ ಅವರು ಧರಣಿ ಕೈ ಬಿಡದೆ ಸದನದ ಬಾವಿಯಲ್ಲೇ ಉಳಿದರು. ಆಗ ಎದ್ದು ನಿಂತ ಗೋವಿಂದ ಕಾರಜೋಳ ಅವರು ಸಿಟ್ಟಿನಿಂದ, ಏನಿದು. ನೀವು ಬಾವಿಯಿಂದ ಹೊರ ನಡೆಯಿರಿ. ಇದೇನು ಹುಡುಗಾಟಿಕೆ ಆಡುತ್ತಿದ್ದೀರಾ ಎಂದು ಹೇಳಿದರು. ಇದು ಕಾಂಗ್ರೆಸ್ ಸದಸ್ಯರನ್ನು ಕೆರಳಿಸಿತು. ಏನು ಸದಸ್ಯರ ಜೊತೆ ಹೀಗೆ ಮಾತನಾಡುತ್ತಿರಿ, ಗೂಂಡಾಗಿರಿ ಸರಿಯಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ತಮ್ಮ ಸದಸ್ಯರ ಜೊತೆ ಸದನದ ಬಾವಿಗೆ ಆಗಮಿಸಿ ಧರಣಿ ಆರಂಭಿಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಕಾಂಗ್ರೆಸ್ ಸದಸ್ಯರು ಗೂಂಡಾಗಿರಿ ನಡೆಯಲ್ಲ. ಸಚಿವರು ಕ್ಷಮೆ ಕೇಳಬೇಕು ಎಂದು ಘೋಷಣೆ ಕೂರಿದರು. ಆಗ ಆಡಳಿತ ಪಕ್ಷದ ಸದಸ್ಯರು ಸಹ ಸದನದ ಮುಂದಿನ ಸಾಲಿಗೆ ಬಂದು ಧರಣಿ ನಿರತ ಕಾಂಗ್ರೆಸ್ ಜೊತೆ ಮಾತಿನ ಚಕಮಕಿ ನಡೆಸಿ ಕಾಂಗ್ರೆಸ್ ವಿರುದ್ಧವೂ ಘೋಷಣೆ ಕೂಗಿದರು.

ಸದನದಿಂದ ಅಮಾನತು ಮಾಡಿ : ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಏಕ ವಚನ ಮಾತುಗಳ ವಿನಿಮಯವೂ ಆಯಿತು. ಧರಣಿ ನಿರತ ಸದಸ್ಯರನ್ನು ಸದನದಿಂದ ಅಮಾನತು ಮಾಡಿ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಒತ್ತಾಯಿಸಿದರು. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಕಾಂಗ್ರೆಸ್ ಸದಸ್ಯರು ಜೋರಾಗಿ ಘೋಷಣೆ ಕೂಗತೊಡಗಿದರು. ಧರಣಿ ನಿರತ ಸದಸ್ಯ ಮಂಜುನಾಥ್ ಹಾಗೂ ಸಚಿವ ಗೋವಿಂದ ಕಾರಜೋಳ ಅವರು ಪರಸ್ಪರ ಏಕವಚನದಲ್ಲಿ ನಿಂದಿಸಿಕೊಂಡರು. ಇದರಿಂದ ಸದನದಲ್ಲಿ ಗದ್ದಲ ಮತ್ತಷ್ಟು ಹೆಚ್ಚಾಯಿತು. ಸ್ಪೀಕರ್ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ ಅವರು ಧರಣಿ ಕೈಬಿಡುವಂತೆ ಮನವಿ ಮಾಡಿದರೂ ಸೂಕ್ತ ಸ್ಪಂದನೆ ಸಿಗಲಿಲ್ಲ. ಹಾಗಾಗಿ, ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.

ಇದನ್ನೂ ಓದಿ : ಹಿರಿಯರ ಮನೆಯಲ್ಲಿ ಹೊರಟ್ಟಿ ಗುಣಗಾನ: ಪಕ್ಷಾತೀತವಾಗಿ ಹೊಗಳಿದ ಸದಸ್ಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.