ಬೆಳಗಾವಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿನಿಂದ ತಮ್ಮ ಮತಕ್ಷೇತ್ರವಾದ ಬಾದಾಮಿಗೆ ತೆರಳುವ ಅವಸರದಲ್ಲಿ ಮನೆಯಲ್ಲಿದ್ದ ಇನ್ಸುಲಿನ್ ಮರೆತು ಬಂದಿರುವ ಹಿನ್ನೆಲೆ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇನ್ಸುಲಿನ್ಗಾಗಿ ಕಾಯ್ದು ಕುಳಿತುಕೊಳ್ಳುವಂತಾಗಿದೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಕೆಡಿಪಿ ಸಭೆ ಸೇರಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಬದಾಮಿಗೆ ತೆರಳಲು ಆಗಮಿಸಿದ್ದರು. ಆದರೆ ಬೆಂಗಳೂರಿನಿಂದ ಬರುವ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇನ್ಸುಲಿನ್ ತೆಗೆದುಕೊಳ್ಳುವುದನ್ನು ಮರೆತು ಬಂದಿದ್ದಾರೆ. ಇದರಿಂದಾಗಿ ಒಂದು ಗಂಟೆಗೂ ಅಧಿಕ ಕಾಲ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇರುವಂತಾಗಿದೆ.
ಈ ಕುರಿತು ಮಾಹಿತಿ ನೀಡಿದ ರಾಮದುರ್ಗದ ಮಾಜಿ ಶಾಸಕ ಅಶೋಕ ಪಟ್ಟಣ ಅವರು, ಮಧುಮೇಹ ಕಾಯಿಲೆಗಾಗಿ ಇನ್ಸುಲಿನ್ ತಗೆದುಕೊಳ್ಳುತ್ತಿರುವ ಸಿದ್ದರಾಮಯ್ಯ ಅವರು ಆರೋಗ್ಯವಾಗಿದ್ದಾರೆ. ಬರುವಾಗ ಇನ್ಸುಲಿನ್ ಮರೆತು ಬಂದಿದ್ದಾರೆ ಎಂದು ಹೇಳಿದರು.