ETV Bharat / state

ಮಾರ್ಚ್ 6ರಂದು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡುತ್ತಿದ್ದೇನೆ: ಅಶೋಕ್ ಪೂಜಾರಿ - etv bharat kannada

ನನ್ನ ಮೇಲೆ ಇಲ್ಲಸಲ್ಲದ ಆರೋಪಗಳು ಕೇಳಿ ಬರುತ್ತಿವೆ. ಇವನ್ನೆಲ್ಲ ಹೋಗಲಾಡಿಸಲು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡುತ್ತೇನೆ ಎಂದು ಅಶೋಕ್ ಪೂಜಾರಿ ಹೇಳಿದ್ದಾರೆ.

Congress leader Ashok Pujari
ಆಣೆ-ಪ್ರಮಾಣಕ್ಕೆ ಮುಂದಾದ ರಮೇಶ್ ಜಾರಕಿಹೊಳಿ ರಾಜಕೀಯ ಪ್ರತಿಸ್ಪರ್ಧಿ ಅಶೋಕ್ ಪೂಜಾರಿ
author img

By

Published : Feb 28, 2023, 3:58 PM IST

Updated : Feb 28, 2023, 5:30 PM IST

ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ

ಬೆಳಗಾವಿ: "ಕಳೆದ 2008ರಿಂದ ಗೋಕಾಕ್ ಮತಕ್ಷೇತ್ರದಿಂದ ರಮೇಶ್ ಜಾರಕಿಹೊಳಿ ವಿರುದ್ಧ ರಾಜಕೀಯ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿದ್ದೇನೆ. ಆದರೆ ಚುನಾವಣೆ ಬಂತು ಎಂದರೆ ನನ್ನ ಮೇಲೆ ವ್ಯವಸ್ಥಿತ ಅಪಪ್ರಚಾರ ಪ್ರಾರಂಭವಾಗುತ್ತದೆ. ಆ ಅಪಪ್ರಚಾರ ಹೋಗಲಾಡಿಸಲು ಹಾಗೂ ಗೋಕಾಕ್ ಕ್ಷೇತ್ರದ ಜನರ ನಂಬಿಕೆಗೋಸ್ಕರ ಕುಟುಂಬಸಮೇತವಾಗಿ ಬರುವ ಸೋಮವಾರ (ಮಾರ್ಚ್ 6) ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡುತ್ತೇನೆ" ಎಂದು ಗೋಕಾಕ್ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ತಿಳಿಸಿದರು.

ಬೆಳಗಾವಿ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಎದುರಾಳಿ ಕಡೆಯಿಂದ ಹಣ ತೆಗೆದುಕೊಂಡು ಚುನಾವಣೆಯಲ್ಲಿ ಅವರ ಗೆಲುವಿಗೆ ಸಹಕಾರ ನೀಡುತ್ತೇನೆ. ಅಶೋಕ್ ಪೂಜಾರಿ ಹಣ ಪಡೆಯುತ್ತಾನೆ ಎಂಬೆಲ್ಲ ಆರೋಪಗಳನ್ನು ನನ್ನ ವಿರುದ್ಧ ಮಾಡುತ್ತಿದ್ದಾರೆ. ಆದರೆ ನಾನು ಯಾವುದೇ ಹಣ ಪಡೆದಿಲ್ಲ" ಎಂದರು.

"ಗೋಕಾಕ್ ಮತಕ್ಷೇತ್ರ ಎಂದರೆ ರಿಪಬ್ಲಿಕ್ ಆಫ್ ಗೋಕಾಕ್ ಎಂಬ ರೀತಿಯ ವಾತಾವರಣ ನಿರ್ಮಾಣವಾಗಿದೆ. ದಬ್ಬಾಳಿಕೆಯ ವಾತಾವರಣದಲ್ಲಿ ನಾನು ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಕಳೆದ ನಾಲ್ವತ್ತು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನಮ್ಮ ತಂದೆ ಕಡೆಯಿಂದ ಎಷ್ಟು ಆಗುತ್ತದೋ ಅಷ್ಟು ಸಹಾಯ ಮಾಡಿಕೊಂಡು ಸಮಾಜಸೇವೆ ಮಾಡಿತ್ತಾ ಬಂದಿದ್ದೇನೆ" ಎಂದು ಹೇಳಿದರು.

"ಸಾಮಾಜಿಕ, ಧಾರ್ಮಿಕ ಸೇವೆ ಸಲ್ಲಿಸಿದ್ದೇನೆ. ನಮ್ಮ ತಂದೆ ಅರಭಾವಿ ಕ್ಷೇತ್ರದಿಂದ ಎರಡು ಸಲ ಸ್ಪರ್ಧೆ ಮಾಡಿದ್ದರು. ನಾನು ಕಳೆದ ನಾಲ್ಕು ಚುನಾವಣೆಯಲ್ಲಿ ಸೋತಿದ್ದೇನೆ. ಪ್ರತಿ ಚುನಾವಣೆಯಲ್ಲಿ ಗೆಲುವಿನ ಹಂತಕ್ಕೆ ಬಂದ ಪೂಜಾರಿ ಹಣ ಪಡೆದುಕೊಂಡು ಸೋಲು ಅನುಭವಿಸಿದ್ದಾನೆ ಎಂದು ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ. ಈ ಅಪಪ್ರಚಾರವನ್ನು ಹೈಕಮಾಂಡ್‌ವರೆಗೆ ತಲುಪಿಸಿ ನನಗೆ ಟಿಕೆಟ್ ತಪ್ಪಿಸುವ ಹುನ್ನಾರವೂ ನಡೆಯುತ್ತಿದೆ" ಎಂದರು.

"ಎಲ್ಲರಿಗೂ ಮನದಟ್ಟಾಗುವ ರೀತಿಯಲ್ಲಿ ನಾನು ನಂಬಿರುವ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ನಿಂತು, ನಾನು ಯಾವುದೇ ಹಣ ಪಡೆದುಕೊಂಡಿಲ್ಲ. ಪ್ರತಿಸ್ಪರ್ಧಿಗಳ ಗೆಲುವಿಗೆ ನನ್ನ ಕಡೆಯಿಂದ ಸಹಾಯ ಮಾಡಿಕೊಟ್ಟಿಲ್ಲ ಎಂದು ಪ್ರಮಾಣ ಮಾಡುವುದು ಅನಿವಾರ್ಯವಾಗಿದೆ. ನನ್ನ ಇಬ್ಬರು ಮಕ್ಕಳ ಜೊತೆಗೆ ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ನಿಂತು ಆಣೆ ಪ್ರಮಾಣ ಮಾಡುತ್ತೇನೆ" ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ: ಪ್ರಕರಣ ದಾಖಲು

Last Updated : Feb 28, 2023, 5:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.