ETV Bharat / state

ದೇಶದಲ್ಲಿ ದಯನೀಯ ಸೋಲು ಅನುಭವಿಸಿ ಕಾಂಗ್ರೆಸ್ ಬೀದಿ ಪಾಲಾಗಿದೆ: ಬಿ ಎಸ್​ ಯಡಿಯೂರಪ್ಪ - ETV Bharat kannada News

ದೇಶದ ಪ್ರಗತಿ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸುಂತೆ ಯಡಿಯೂರಪ್ಪ ಕರೆ ನೀಡಿದರು.

Former CM BS Yeddyurappa
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
author img

By

Published : Apr 27, 2023, 4:13 PM IST

ಬೆಳಗಾವಿ : ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ. ಇತ್ತಿಚಿಗೆ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ 400 ಸೀಟ್ ಪೈಕಿ 4 ಮಾತ್ರ ಕಾಂಗ್ರೆಸ್ ಗೆದ್ದಿದೆ. ದೇಶದಲ್ಲಿ ದಯನೀಯ ಸೋಲು ಅನುಭವಿಸಿ ಕಾಂಗ್ರೆಸ್ ಬೀದಿ ಪಾಲಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಬೆಳಗಾವಿಯ ಧರ್ಮನಾಥ ಭವನದಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಅವರು, ಪ್ರಧಾನಿ ಮೋದಿಯವರು ದೇಶದ ಪ್ರಚಲಿತ ರಾಜಕೀಯದ ಬಗ್ಗೆ ಮನ್ ಕಿ ಬಾತ್ ನಲ್ಲಿ ಮಾತನಾಡಿದ್ದಾರೆ. ಕರ್ನಾಟಕ ರಾಜ್ಯವನ್ನು ಮಾದರಿ ಮಾಡುವ ಸಾಕಷ್ಟು ಸಲಹೆ ಕೊಟ್ಟಿದ್ದಾರೆ. ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂತ ಸಂಕಲ್ಪ ತೊಟ್ಟಿದ್ದಾರೆ. ದೇಶ ವಿದೇಶಗಳಿಗೆ ಹೋಗಿ ಬಂದ ಮೇಲೂ ಸಹ ವಿಶ್ರಾಂತಿ ಪಡೆಯದ ನಾಯಕ ನಮ್ಮ ಮೋದಿ ನಮ್ಮೊಟ್ಟಿಗಿದ್ದಾರೆ. ಇಂತವರ ಮುಂದೆ ರಾಹುಲ್ ಗಾಂಧಿ ಹೋಲಿಕೆ ಸರಿಯೇನು ಎಂದು ಪ್ರಶ್ನಿಸಿದರು. ದೇಶದ ಪ್ರಗತಿ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸುಂತೆ ಯಡಿಯೂರಪ್ಪ ಸಮಾವೇಶದಲ್ಲಿ ಕರೆ ನೀಡಿದರು.

ಈ ಬಾರಿ ಚುನಾವಣೆಯಲ್ಲಿ 130 ರಿಂದ 135 ಸೀಟು ಗೆದ್ದು ಸರ್ಕಾರ ರಚನೆ ಮಾಡುತ್ತೇವೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಅಷ್ಟೇ ಸತ್ಯ ನಾವು ಅಧಿಕಾರಕ್ಕೆ ಬರುವುದು. ಒಂದು ಕಾಲದಲ್ಲಿ ಹಣ ಹೆಂಡ ತೋಳ್ಬಲದ ಮೇಲೆ ರಾಜಕೀಯ ನಡೆಯುತ್ತಿತ್ತು. ಆದರೆ ಈಗ ಜನ ಜಾಗೃತರಾಗಿದ್ದಾರೆ. ನಿಮ್ಮಲ್ಲಿ ಒಂದೇ ವಿನಂತಿ ಚುನಾವಣೆಗೆ ಇನ್ನು ಕೇವಲ 13 ದಿನ ಮಾತ್ರ ಬಾಕಿಯಿದೆ. ನಮ್ಮ ಅಭ್ಯರ್ಥಿ ಆಯ್ಕೆಗೆ ಸಹಕರಿಸಿ. ರವಿ ಪಾಟೀಲ್ ಗೆಲ್ಲಿಸುವ ಜವಾಬ್ದಾರಿ ಶಾಸಕ ಅನಿಲ್ ಬೆನಕೆ ಮೇಲಿದೆ. 15 ರಿಂದ 20 ಸಾವಿರ ಮತಗಳ ಅಂತರದಿಂದ ರವಿ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬಸನಗೌಡ ಪಾಟೀಲ್ ಯತ್ನಾಳ ಪ್ರತಿಕ್ರಿಯೆ : ಇದಕ್ಕೂ‌‌ ಮೊದಲು ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಬೆಳಗಾವಿ ಉತ್ತರ, ವಿಜಯಪುರ ನಗರ ರಾಜ್ಯದ ಅತ್ಯಂತ ಸೂಕ್ಷ್ಮ ಕ್ಷೇತ್ರ ಆಗಿದ್ದು, ಈ ಕ್ಷೇತ್ರಗಳು ಮುಸ್ಲಿಂ ಕ್ಷೇತ್ರ ಆಗಿವೆ. ವಿಜಯಪುರದಲ್ಲಿ 1 ಲಕ್ಷ ಮುಸ್ಲಿಂ, 1 ಲಕ್ಷ 70 ಸಾವಿರ ಹಿಂದೂಗಳಿದ್ದಾರೆ. ಬೆಳಗಾವಿ ಉತ್ತರ ಮತಕ್ಷೇತ್ರವನ್ನ ನಾವು ಕಳೆದುಕೊಳ್ಳಬಾರದು. ಮುಂಬೈ ಕರ್ನಾಟಕದಲ್ಲಿ ಹೆಚ್ಚು ಮುಸ್ಲಿಂ ಇರುವ ಕ್ಷೇತ್ರ ಬೆಳಗಾವಿ ಉತ್ತರ ಮತ್ತು ವಿಜಯಪುರದಲ್ಲಿ ಕಳೆದ ಬಾರಿ ಬಿಜೆಪಿ ಜಯಭೇರಿ ಸಾಧಿಸಿತ್ತು. ಹೀಗಾಗಿ ಈ ಕ್ಷೇತ್ರ ಕಳೆದುಕೊಳ್ಳಬಾರದು ಎಂದರು.

ನನ್ನ ಕ್ಷೇತ್ರದಲ್ಲಿ ಅತಿ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಆದರೂ ನಾನಿಲ್ಲಿ ಬಂದಿದ್ದೇನೆ. ಅಲ್ಲಿಯ ಹಿಂದೂಗಳು ನೀವು ಹೋಗಿ ಪ್ರಚಾರ ಮಾಡಿ ಅಂದರು. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ಗಟ್ಟಿಯಾಗಿ ಹೋರಾಟ ಮಾಡಿರುವೆ. ಈಗ ಪಂಚಮಸಾಲಿ ಸಮುದಾಯಕ್ಕೆ 2 ಡಿ ಮೀಸಲಾತಿ ಸಿಕ್ಕಿದೆ. ಮುಸ್ಲಿಂ ಸಮುದಾಯಕ್ಕೆ ಸಂವಿಧಾನ ಬಾಹಿರವಾಗಿ ಹೆಚ್ಚಿನ ಮೀಸಲಾತಿ ನೀಡಿದ್ದರು. ಲಿಂಗಾಯತ, ಮರಾಠ, ಜೈನ ಸಮುದಾಯಕ್ಕೆ ಶೇ.7ರಷ್ಟು ಮೀಸಲಾತಿ ಕೊಟ್ಟಿದ್ದು ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ. ತಳವಾರ ಸಮುದಾಯಕ್ಕೆ ಎಸ್‌ಟಿ ಸರ್ಟಿಫಿಕೇಟ್ ಕೊಡುವಂತಹ ಕೆಲಸ ಆಗಿದೆ. ಬಿಜೆಪಿ ಸರ್ಕಾರ ಎಲ್ಲ ಸಮುದಾಯದವರಿಗೆ ಮೀಸಲಾತಿ ಕೊಟ್ಟಿದೆ. ಆದರೆ ಕಾಂಗ್ರೆಸ್ ನವರು ಮೀಸಲಾತಿ ವಿರೋಧ ಮಾಡುತ್ತಿದ್ದಾರೆ ಎಂದು ಯತ್ನಾಳ ಹರಿಹಾಯ್ದರು.

ಇದೀಗಾ ಕಾಂಗ್ರೆಸನವರು ಮತ್ತು ಸಿದ್ದರಾಮಯ್ಯ ಲಿಂಗಾಯತ ಸಿಎಂಗಳು ಭ್ರಷ್ಟರು ಅಂತಾರೆ. ಹಾಗಾದರೇ ನಿಜಲಿಂಗಪ್ಪ, ಜೆ.ಎಚ್.ಪಟೇಲ್ ಭ್ರಷ್ಟರಾ ಎಂದು ಪ್ರಶ್ನಿಸಿದ ಯತ್ನಾಳ, ಮೊದಲು ಸಿದ್ದರಾಮಯ್ಯ ನಾಮ ಹಾಕಿಕೊಳ್ಳಲು ನಿರಾಕರಿಸುತ್ತಿದ್ದರು. ಚುನಾವಣೆ ಬಂದಿದೆ ಅಂತಾ ಉದ್ದ ನಾಮ ಹಾಕುತ್ತಿದ್ದಾರೆಂದು ಲೇವಡಿ ಮಾಡಿದರು.

ಅನಿಲ್ ಬೆ‌ನಕೆಗೆ ಟಿಕೆಟ್ ತಪ್ಪಿದ್ದರೂ ಪಕ್ಷದ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ರವಿ ಪಾಟೀಲ್ ಆಕ್ಟಿವ್ ಆಗಿ ಕೆಲಸ ಮಾಡಿ. ನೀವು ಗೆದ್ದೆ ಗೆಲ್ಲುತ್ತಿರೀ ಯಾವಾಗಲೂ ಮುಖ ಗಂಟು ಹಾಕಿಕೊಂಡು ಇರಬೇಡಿ. ಸದಾ ಲವಲವಿಕೆಯಿಂದ ಇರುವಂತೆ ಬಸನಗೌಡ ಪಾಟೀಲ್ ಯತ್ನಾಳ್ ಸಲಹೆ ನೀಡಿದರು. ಇನ್ನು ಈ ಸಮಾವೇಶದಲ್ಲಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲ ಅಂಗಡಿ, ಅಭ್ಯರ್ಥಿ ಡಾ. ರವಿ ಪಾಟೀಲ, ಶಾಸಕ ಅನಿಲ ಬೆನಕೆ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ರಾಷ್ಟ್ರ ಮಟ್ಟದಲ್ಲಿ ಬದಲಾವಣೆ ತರುವ ದೃಷ್ಟಿಯಿಂದ ತೆಲಗಾಂಣ, ಪ.ಬಂಗಾಳದ ಮುಖ್ಯಮಂತ್ರಿ ಜೊತೆ ಮಾತುಕತೆ: ಹೆಚ್.ಡಿ.ದೇವೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.