ETV Bharat / state

ರೋಹಿತ್​​ ಚಕ್ರತೀರ್ಥ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವಂತೆ ದೂರು - Rohit Chakrathirte is the Chairperson of the State Government Text Revision Committee

ರಾಜ್ಯ ಸರ್ಕಾರದ ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿರುವ ರೋಹಿತ್​​ ಚಕ್ರತೀರ್ಥ ಅವರು, ಇತಿಹಾಸವನ್ನು ತಿರುಚಿದ್ದಾರೆ. ಈ ಮೂಲಕ ಲಿಂಗಾಯತ ಧರ್ಮಗುರು ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್​, ಮಹಾಮಾನವತಾವಾದಿ ನಾರಾಯಣ ಗುರುಗಳಿಗೆ ಅವಮಾನ ಮಾಡಿದ್ದಾರೆ. ಹಾಗಾಗಿ ಅವರು ವಿರುದ್ಧ ಕ್ರಿಮಿನಲ್‌ ಮೊಕದ್ದೆಮೆ ಹೂಡಿ ಎಂದು ವಕೀಲರಾದ ಭೀಮನಗೌಡ ಪರಗೌಡ ಅವರು ದೂರು ನೀಡಿದ್ದಾರೆ.

Complaint against Rohit Chakratheertha
ರೋಹಿತ್​​ ಚಕ್ರತೀರ್ಥ ಮೇಲೆ ಕ್ರಿಮಿನಲ್‌ ಮೊಕ್ಕೊದಮೆ ಹೂಡಿ ಎಂದು ದೂರು ದಾಖಲು
author img

By

Published : Jun 1, 2022, 5:43 PM IST

ಅಥಣಿ (ಬೆಳಗಾವಿ): ರೋಹಿತ್​ ಚಕ್ರತೀರ್ಥ ಅವರು ಇತಿಹಾಸಕ್ಕೆ ಅಪಮಾನ ಆಗುವಂತೆ ಮತ್ತು ಇತಿಹಾಸವನ್ನು ತಿರುಚಿ ಬಹುದೊಡ್ಡ ಅವಮಾನವನ್ನು ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಿ ಎಂದು ವಕೀಲರು, ಸಾಮಾಜಿಕ ಕಾರ್ಯಕರ್ತರಾಗಿರುವ ಭೀಮನಗೌಡ ಪರಗೌಡ ಅವರು, ಅಥಣಿ ಪೊಲೀಸ್ ಠಾಣೆ ಸಿ.ಪಿ.ಐ ಶಂಕರಗೌಡ ಬಸನಗೌಡ ಅವರ ಮೂಲಕ ಗೃಹ ಇಲಾಖೆ ಕಾರ್ಯದರ್ಶಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಡೈರೆಕ್ಟರ್ ಜನರಲ್ ಇನ್​​ಸ್ಪೆಕ್ಟರ್ ಆಫ್ ಪೊಲೀಸ್ ಇವರಿಗೆ ದೂರು ನೀಡಿದ್ದಾರೆ.

ರೋಹಿತ್​​ ಚಕ್ರತೀರ್ಥ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡುವಂತೆ ದೂರು

ರಾಜ್ಯ ಸರ್ಕಾರದ ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿರುವ ರೋಹಿತ್​​ ಚಕ್ರತೀರ್ಥ ಅವರು, ಇತಿಹಾಸವನ್ನು ತಿರುಚಿ ಲಿಂಗಾಯತ ಧರ್ಮಗುರು ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್​, ಮಹಾಮಾನವತಾವಾದಿ ನಾರಾಯಣ ಗುರುಗಳಿಗೆ ಅವಮಾನ ಮಾಡಿದ್ದಾರೆ. ಅವರು ಬಸವಣ್ಣ, ಅಂಬೇಡ್ಕರ್​​, ಆರ್ಯ ಸಮಾಜ, ಬ್ರಹ್ಮ ಸಮಾಜ, ಸತ್ಯಶೋಧಕ ಸಮಾಜ, ನಾರಾಯಣ ಗುರು ಚಳುವಳಿ ಹಾಗೂ ಥಿಯೋ ಸೋಫಿಕಲ್‌ ಸೊಸೈಟಿ ಇವುಗಳ ಬಗೆಗಿನ ಅಧ್ಯಯನವನ್ನು ಕೈಬಿಟ್ಟಿದ್ದಾರೆ. ಇದರಿಂದ ಭವಿಷ್ಯದ ಪೀಳಿಗೆ, ಯುವ ಜನಾಂಗಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ಅವರನ್ನು ನೈಜ ಇತಿಹಾಸದಿಂದ ವಂಚಿತರನ್ನಾಗಿ ಮಾಡುವ ಕಾರ್ಯಕ್ಕೆ ಕೈ ಹಾಕಿದ್ದಾರೆಂದು ಆರೋಪಿಸಿದರು.

ಇದನ್ನೂ ಓದಿ: ಪಠ್ಯ ವಿಚಾರದಲ್ಲಿ ಸರ್ಕಾರ ಕಣ್ಮುಚ್ಚಿ ಕುಳಿತಿದೆಯೇ.. ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಕಿಡಿ

ಹಾಗಾಗಿ ಕೂಡಲೇ ರಾಜ್ಯ ಸರ್ಕಾರ ಪಠ್ಯ ಪರಿಷ್ಕರಣ ಸಮಿತಿಯ ಅಧ್ಯಕ್ಷರ ಹಾಗೂ ಸದಸ್ಯರ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲು ಮಾಡಬೇಕು. ಈಗಾಗಲೇ ರೋಹಿತ್​ ಚಕ್ರತೀರ್ಥ ಮತ್ತು ಸದಸ್ಯರು ಪರಿಷ್ಕರಣೆ ಮಾಡಿದ ಪಠ್ಯವನ್ನು ಹಿಂದಕ್ಕೆ ಪಡೆಯಬೇಕೆಂದು ದೂರಿನ ಮೂಲಕ ವಿನಂತಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.