ಬೆಳಗಾವಿ: ಉಡಾನ್-3 ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನ ಸೇವೆ ಆರಂಭಗೊಂಡಿದೆ.

ಟ್ರು ಜೆಟ್ ಖಾಸಗಿ ವಿಮಾನ ಸಂಸ್ಥೆ ಬೆಳಗಾವಿ-ಕಡಪಾ ಮಾರ್ಗಮಧ್ಯೆ ವಿಮಾನ ಸಂಚಾರ ಆರಂಭಿಸಿದೆ. ಇವತ್ತು ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ ಕುಮಾರ್ ಮೌರ್ಯ ವಿಮಾನ ಸೇವೆಗೆ ಚಾಲನೆ ನೀಡಿದರು. ಈ ವಿಮಾನ ಬೆಳಗಾವಿ-ಕಡಪಾ ಮಾರ್ಗ ಮಧ್ಯೆ ನಿತ್ಯ ಸಂಚರಿಸಲಿದೆ. 70 ಆಸನ ಇರುವ ಈ ವಿಮಾನದಲ್ಲಿ ಮೊದಲ ದಿನ 50 ಪ್ರಯಾಣಿಕರು ಪ್ರಯಾಣ ಬೆಳೆಸಿದರು.