ETV Bharat / state

ಸಂಪುಟ ವಿಸ್ತರಣೆ ವಿಳಂಬ: ನಾಳೆ ದೆಹಲಿಗೆ ಪಯಣ ಬೆಳೆಸಲಿದ್ದಾರೆ ಸಿಎಂ - ಸಂಪುಟ ವಿಸ್ತರಣೆ ವಿಚಾರ

ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ. ಈ ಕಾರಣಕ್ಕೆ ತಾವೇ ಗುರುವಾರದಂದು ದೆಹಲಿಗೆ ಹೊರಟಿರುವುದಾಗಿ ಸಿಎಂ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ.

ಸಿಎಂ ಬಿ.ಎಸ್​.ಯಡಿಯೂರಪ್ಪ
CM yediyurappa
author img

By

Published : Jan 29, 2020, 4:07 PM IST

ಬೆಳಗಾವಿ: ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್​ ಜೊತೆ ಚರ್ಚಿಸಿ ಅಂತಿಮಗೊಳಿಸಲು ನಾಳೆ ದೆಹಲಿಗೆ ತೆರಳುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ತಿಳಿಸಿದ್ದಾರೆ.

ಸಂಪುಟ ವಿಸ್ತರಣೆ ವಿಳಂಬ: ನಾಳೆಗೆ ದೆಹಲಿಗೆ ತೆರಳಲು ಸಜ್ಜಾದ ಬಿ.ಎಸ್​. ಯಡಿಯೂರಪ್ಪ

ಬೆಳಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ. ಹಾಗಾಗಿ ‌ನಾನೇ‌ ದೆಹಲಿಗೆ ಹೊರಟಿದ್ದೇನೆ. ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸಚಿವ ‌ಸ್ಥಾನ ನೀಡಲು ನಿರ್ಧರಿಸಿದ್ದೇನೆ.‌ ಹೈಕಮಾಂಡ್ ನಾಯಕರು ಗೆದ್ದವರಲ್ಲಿ ಇಬ್ಬರನ್ನು ಸಚಿವರನ್ನಾಗಿ ಮಾಡುವುದು ಬೇಡ ಅಂದ್ರೆ ಇಬ್ಬರಿಗೆ ಮಿಸ್ ಆಗಲಿದೆ. ಹೈಕಮಾಂಡ್ ಅಪೇಕ್ಷೆ ಏನೆಂಬುದು ಶೀಘ್ರವೇ ತಿಳಿಯಲಿದೆ. ಬೆಳಗಾವಿಯಲ್ಲಿ ಈಗಾಗಲೇ ಇಬ್ಬರು ಸಚಿವರಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದ ಮೂವರು ಹಾಗೂ ಉಮೇಶ್​ ಕತ್ತಿ ಅವರಿಗೂ ಸಚಿವ ಸ್ಥಾನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಡಿಸಿಎಂ ಮೇಲೆ ಕಣ್ಣಿಟ್ಟವರಿಗೆ ಸಿಎಂ ಶಾಕ್!

ರಾಜ್ಯದಲ್ಲಿ ಮೂವರು ಮಾತ್ರ ಡಿಸಿಎಂ ಆಗಿ ಮುಂದುವರೆಯಲಿದ್ದಾರೆ. ಹೊಸದಾಗಿ ಯಾರನ್ನು ಡಿಸಿಎಂ ಮಾಡುವುದಿಲ್ಲ. ಹೊಸ ಡಿಸಿಎಂ ಪ್ರಸ್ತಾವನೆ ನಮ್ಮ ಮುಂದಿಲ್ಲ ಎನ್ನುವ ಮೂಲಕ ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸಚಿವ ಶ್ರೀರಾಮುಲು ಹಾಗೂ ರಮೇಶ್​ ಜಾರಕಿಹೊಳಿ‌ಗೆ ಶಾಕ್ ಕೊಟ್ಟರು.

ಮಹಾದಾಯಿ, ಗಡಿ ವಿವಾದ ಕುರಿತು ದೆಹಲಿಯಲ್ಲಿ ನ್ಯಾಯವಾದಿಗಳೊಂದಿಗೆ ಚರ್ಚಿಸಲಿದ್ದೇನೆ. ಈ ಸಂಬಂಧ ಈಗಾಗಲೇ ನಾಲ್ಕೈದು ಸಭೆ ನಡೆಸಲಾಗಿದೆ. ಶೀಘ್ರವೇ ಯೋಜನೆ ಜಾರಿಗೆಗೆ ಕ್ರಮ ವಹಿಸಲಾಗುವುದು ಎಂದು ಸಿಎಂ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.