ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪತ್ನಿ ಚನ್ನಮ್ಮ ಬೊಮ್ಮಾಯಿ ಅವರು ನವರಾತ್ರಿ ನಿಮಿತ್ತ ಮನೆ ದೇವತೆ ಸವದತ್ತಿ ಶ್ರೀ ರೇಣುಕಾ ದೇವಿಯ ದರ್ಶನ ಪಡೆದರು.
ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಘಟ್ಟಕ್ಕೆ ಎಣ್ಣೆ ಸಮರ್ಪಿಸಿದರು. ಬಳಿಕ ಭಕ್ತಿ ಭಾವದಿಂದ ರೇಣುಕಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ರೇಣುಕಾದೇವಿ ಯಲ್ಲಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ದೇವತೆ. ಹಾಗಾಗಿ ಹುಬ್ಬಳ್ಳಿಯಿಂದ ಖಾಸಗಿ ವಾಹನದಲ್ಲಿ ಬಂದು ಚನ್ನಮ್ಮ ಬೊಮ್ಮಾಯಿ ದೇವಿ ದರ್ಶನ ಪಡೆದರು.
![CM wife visits Renuka Yallamma Devi Temple](https://etvbharatimages.akamaized.net/etvbharat/prod-images/kn-bgm-02-30-cm-wife-visit-yallamma-temple-ka10029_30092022104659_3009f_1664515019_721.jpg)
ಈ ವೇಳೆ, ದೇವಸ್ಥಾನ ಆಡಳಿತ ಮಂಡಳಿ ಹಾಗೂ ದೇವಸ್ಥಾನ ಸಿಇಒ ಬಸವರಾಜ ಜಿರಗ್ಯಾಳ ಹಾಗೂ ನಾಗರತ್ನ ಚೋಳಿನ್ ಅವರು ಚನ್ನಮ್ಮ ಬೊಮ್ಮಾಯಿಗೆ ಸತ್ಕಾರ ಮಾಡಿದರು.
ಇದನ್ನೂ ಓದಿ: ಕಾರವಾರ : ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಪತ್ನಿ ಚನ್ನಮ್ಮ ಬೊಮ್ಮಾಯಿ