ಬೆಳಗಾವಿ : ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಕೈ ಕೊಟ್ಟ ಹಿನ್ನೆಲೆ ಸುಮಾರು ನಾಲ್ಕು ಗಂಟೆಗಳ ಬೆಳಗಾವಿಯಲ್ಲಿ ಕಾಯ್ದು ಕುಳಿತ ಸಿಎಂ ಯಡಿಯೂರಪ್ಪ ಕೊನೆಗೂ ಮಹಾರಾಷ್ಟ್ರಕ್ಕೆ ತೆರಳಿದ್ದಾರೆ.
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಚಾರ ಕೈಗೊಳ್ಳಲು ನಿನ್ನೆ ಬೆಳಗಾವಿಗೆ ಆಗಮಿಸಿದ್ದರು. ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಪ್ರಯಾಣ ತಡವಾಗಿ, ಸಿಎಂ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದರು. ಸುಮಾರು ಮೂರು ಗಂಟೆಗಳ ಕಾಲ ಸತತವಾಗಿ ಸ್ಥಳೀಯ ಶಾಸಕರ ಜೊತೆ ಮಾತುಕತೆ ನಡೆಸಿದ ಸಿಎಂ ಬಿಎಸ್ವೈ ನಂತರ 11.30 ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಮಹಾರಾಷ್ಟ್ರದ ಜತ್ತಗೆ ತೆರಳಿದ್ದಾರೆ.
ಪ್ರಯಾಣಕ್ಕೆ ಅಡಚಣೆಯಾಗಿದ್ದಕ್ಕೆ ಸಿಎಂ ಸಿಡಿಮಿಡಿ :
ಸುಮಾರು ಮೂರು ಗಂಟೆಗಳ ಕಾಲ ಹೆಲಿಕಾಪ್ಟರಿಗಾಗಿ ಕಾದು ಕುಳಿತಿದ್ದ ಸಿಎಂ ಕೆಲಹೊತ್ತು ಸಿಡಿಮಿಡಿಗೊಂಡರು. ಜೊತೆಗೆ ಡಿಸಿಎಂ ಲಕ್ಷ್ಮಣ ಸವದಿ ಕರೆ ಮಾಡಿ ಬದಲಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.