ಬೆಳಗಾವಿ: ಜಿಲ್ಲೆಗೆ ಅಥಣಿ ತಾಲೂಕಿಗೆ ನಾಳೆ ಸಿಎಂ ಬಿ.ಎಸ್.ಯಡಿಯೂರಪ್ಪ 4ನೇ ಬಾರಿಗೆ ಭೇಟಿ ನೀಡಿ, ನೆರೆ ಸಂತ್ರಸ್ತರ ಅಹವಾಲು ಸ್ವೀಕರಿಸಲಿದ್ದಾರೆ. ಈ ವೇಳೆ ಸಂತ್ರಸ್ತರ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗ್ತಿದೆ.
ಈಗಾಗಲೇ ತಾಲೂಕಿನ ವಿವಿಧ ಸಂಘಟನೆಗಳು ಸಿಎಂಗೆ ಬಿಸಿ ಮುಟ್ಟಿಸಲು ಸಜ್ಜಾಗಿವೆ. ತಾಲೂಕಿನ ನೆರೆ ಸಂತ್ರಸ್ತರಿಗೆ ಪರಿಹಾರ, ಕಬ್ಬಿಗೆ ನಿಗದಿತ ಬೆಲೆ, ಕೃಷ್ಣಾ ನದಿಗೆ ಬೇಸಿಗೆಯಲ್ಲಿ ನೀರಿನ ಒಪ್ಪಂದ ಕುರಿತಂತೆ ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಲಿದ್ದಾರೆ.
ಸರ್ಕಾರ ಹಾಗೂ ಜಿಲ್ಲಾಡಳಿತ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಕೂಡ ಸರಿಯಾಗಿ ಮಾಡಿಲ್ಲ. ಪುನಶ್ಚೇತನಕ್ಕಾಗಿ ಕೂಡಲೇ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಆಗ್ರಹಿಸಿ ನಾಳೆ ಸಿಎಂ ಭೇಟಿ ಹಿನ್ನೆಲೆಯಲ್ಲಿ ಘೇರಾವ್ ಹಾಕಲು ವಿವಿಧ ಸಂಘಟನೆಗಳು ನಿರ್ಧರಿಸಿವೆ. ಅಥಣಿ ಪೊಲೀಸರು, ಇದಕ್ಕೆಲ್ಲ ಆಸ್ಪದ ನೀಡಲ್ಲ. ನಿಮ್ಮ ಮನವಿಗೆ ಅವಕಾಶ ಮಾಡಿ ಕೊಡ್ತೀವಿ ಎಂದು ಮೌಖಿಕವಾಗಿ ಸಂಘಟನೆಗಳಿಗೆ ತಿಳಿಸಿದ್ದಾರೆ.