ETV Bharat / state

ಹಿಂದೂಗಳನ್ನು ಸಿದ್ದರಾಮಯ್ಯ ಎರಡನೇ ದರ್ಜೆ ತರಹ ನೋಡ್ತಿದ್ದಾರೆ: ಆರ್ ಅಶೋಕ್​ ಕಿಡಿ

ಸಿಎಂ ಹಿಂದೂಗಳನ್ನ ಎರಡನೇ ದರ್ಜೆ ತರಹ ನೋಡುತ್ತಿದ್ದಾರೆ ಎಂದು ಆರ್​ ಅಶೋಕ್​ ಕಿಡಿಕಾರಿದ್ದಾರೆ.

ಸಿಎಂ ವಿರುದ್ದ ಆರ್​ ಅಶೋಕ್​ ಕಿಡಿ
ಸಿಎಂ ವಿರುದ್ದ ಆರ್​ ಅಶೋಕ್​ ಕಿಡಿ
author img

By ETV Bharat Karnataka Team

Published : Dec 5, 2023, 12:35 PM IST

Updated : Dec 5, 2023, 1:39 PM IST

ಸಿಎಂ ವಿರುದ್ಧ ಆರ್​.ಅಶೋಕ್ ಕಿಡಿ​

ಬೆಳಗಾವಿ: ಸಿಎಂ ಸಿದ್ದರಾಮಯ್ಯ ಅವರಿಗೆ ಟಿಪ್ಪು ಎಂದರೆ ಬಾಳ ಪ್ರೀತಿ. ಅವರು ಕೇವಲ ಒಂದು ಸಮುದಾಯವನ್ನು ಮಾತ್ರ ಓಲೈಕೆ ಮಾಡೋದು ಸರಿಯಲ್ಲ. ಹಿಂದೂಗಳನ್ನು ಎರಡನೇ ದರ್ಜೆ ತರಹ ನೋಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಿನ್ನೆಯ ಅವರ ಮಾತು ದೇಶ ಮತ್ತು ರಾಜ್ಯದ ದೃಷ್ಟಿಯಿಂದ ಒಳ್ಳೆಯ ಹೇಳಿಕೆ ಅಲ್ಲ.‌ ಟಿಪ್ಪು ಮೇಲೆ ಅತಿಯಾದ ಪ್ರೀತಿ ತೋರಿಸಿ ಹಿಂದೆ ಏನಾಯ್ತು ಅಂತಾ ಎಲ್ಲರಿಗೂ ಗೊತ್ತಿದೆ. ಈಗ ಮತ್ತೆ ಅಂತಹದ್ದೇ ಹೇಳಿಕೆ ನೀಡಿ, ಹಿಂದೂಗಳನ್ನ ಎರಡನೇ ದರ್ಜೆ ರೀತಿ ನೋಡ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಎಲ್ಲರಿಗೂ ಸಮಾನವಾಗಿ ಕಾಣಬೇಕು. ಟಿಪ್ಪು ಜಯಂತಿ, ಶಾದಿ ಭಾಗ್ಯ, ಮುಸ್ಲಿಂ ವಿವಾಹಕ್ಕೆ ಧನ ಸಹಾಯ ಈ ರೀತಿ ಕಾರ್ಯಕ್ರಮಗಳನ್ನ ತಂದರು. ಮುಸ್ಲಿಂಮರನ್ನು ವೋಟಿನ ಗಾಳವಾಗಿ ಕಾಂಗ್ರೆಸ್ ಬಳಕೆ ಮಾಡಿಕೊಳುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿನ ಬರದ ವಿಚಾರಕ್ಕೆ ಪ್ರತಿಕ್ರಿಯಿಸಿ 13 ತಾಲೂಕು ಬಿಟ್ಟರೆ ಇಡೀ ರಾಜ್ಯದಲ್ಲಿ ಬರ ಇದೆ. ಸರ್ಕಾರಕ್ಕೆ ತಾಯಿ‌ ಹೃದಯ ಇರಬೇಕು. ಇವರಿಗೆ ಕಟುಕನ ಹೃದಯ ಇದೆ. ಬರದ ವಿಚಾರವಾಗಿ ಹಲವಾರು ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕಿತ್ತು. ಆದರೇ ಈವರೆಗೆ ಏನನ್ನು ಮಾಡದೇ ಕೈಕಟ್ಟಿ ಕುಳಿತಿದೆ. ಇವರು ಬರ ನಿರ್ವಹಣೆ ಮಾಡೋದು ಬಿಟ್ಟು ತೆಲಂಗಾಣದಲ್ಲಿ ರಾಜಕೀಯ ಮಾಡಲು ಹೋಗ್ತಾರೆ. ಕಾನೂನು ಉಲ್ಲಂಘನೆ ಮಾಡುವ ಕಾಂಗ್ರೆಸ್ ಜನ ವಿರೋಧಿ ಸರ್ಕಾರ ಎಂದು ಆರ್. ಅಶೋಕ್​ ಹರಿಹಾಯ್ದಿದ್ದಾರೆ.

ಬಿಜೆಪಿ ಕಾರ್ಯಕರ್ತ ಪೃಥ್ವಿರಾಜ ಅವರನ್ನು ನಾನು ಭೇಟಿಯಾಗುತ್ತೇನೆ. ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕಳೆದ 6 ತಿಂಗಳಿನಿಂದ ಹಲ್ಲೆ ಮಾಡುವಂತದ್ದು, ಮತ್ತು ಗಡಿಪಾರು ಕೆಲಸ ಮಾಡುತ್ತಿದ್ದಾರೆ. ಮಂಗಳೂರು, ಉಡುಪಿ ಭಾಗದಲ್ಲಿ ಬಿಜೆಪಿಯ ಇಬ್ಬರು ಕಾರ್ಯಕರ್ತರನ್ನು ಗಡಿ ಪಾರು ಮಾಡಿದ್ದಾರೆ. ಈತರಹದ ಸಂಸ್ಕೃತಿ ಕಾಂಗ್ರೆಸ್​ಗೆ ಮೊದಲಿನಿಂದಲೂ ಇದೆ. ಇತ್ತೀಚಿನ ದಿನಗಳಲ್ಲಿ ಅದು ಮಿತಿಮೀರಿದೆ. ಈ ಬಗ್ಗೆ ರಾಜ್ಯಾಧ್ಯಕ್ಷರ ಜೊತೆ ಮಾತನಾಡುತ್ತೇನೆ. ಕಾರ್ಯಕರ್ತರನ್ನು ಹೊಡಿಯೊ ಅಧಿಕಾರ ಅವರಿಗೆ ಕೊಟ್ಟವರಾರು? ಈ ಬಗ್ಗೆ ನ್ಯಾಯಾಲಯ ತಿರ್ಮಾನ ಮಾಡುತಿತ್ತು. ಕಾನೂನನ್ನ ಕೈಗೆ ತೆಗೆದುಕ್ಕೊಳ್ಳುವುದು ಏಕೆ? ಇದರಲ್ಲಿ ಕಾಂಗ್ರೆಸ್ ಕೈವಾಡ ಇದೆ, ಏನೂ ತಪ್ಪಿಲ್ಲದ ಮೇಲೆ ಆಪಾದನೆ ಮಾಡುತ್ತಾರೆ ಏಕೆ ಎಂದು ಆರ್.ಅಶೋಕ್​ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಆರ್ ಅಶೋಕ್​ಗೆ ಶುಭ ಕೋರಲು ನಿರಾಕರಿಸಿದ ಬಸನಗೌಡ ಯತ್ನಾಳ್

Last Updated : Dec 5, 2023, 1:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.