ETV Bharat / state

ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರನ್ನು ಸಿಎಂ ಮರೆಯಲ್ಲ: ಸಚಿವ ಸೋಮಶೇಖರ್​

ಸರ್ಕಾರ ರಚನೆಗೆ ಕಾರಣರಾದವರನ್ನು ಸಿಎಂ ಕಡೆಗಣಿಸುವುದಿಲ್ಲ. ಈಗಾಗಲೇ ನಮ್ಮೆಲ್ಲರಿಗೂ ಸಚಿವ ಸ್ಥಾನ ನೀಡಿದ್ದಾರೆ. ಹಾಗೆಯೇ ಎಂಟಿಬಿ, ಹೆಚ್​ ವಿಶ್ವನಾಥ, ಮುನಿರತ್ನ ಹಾಗೂ ಆರ್. ಶಂಕರ್ ಅವರಿಗೆ ಸಚಿವ ಸ್ಥಾನ ನೀಡಬೇಕಿದೆ ಎಂದು ಆಪ್ತರ ಪರ ಸಚಿವ ಎಸ್ ​ಟಿ ಸೋಮಶೇಖರ್​ ಬ್ಯಾಟಿಂಗ್ ಮಾಡಿದರು.

Minister Somashekhar
ಸಚಿವ ಸೋಮಶೇಖರ್​
author img

By

Published : Nov 18, 2020, 1:52 PM IST

ಬೆಳಗಾವಿ: ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಕೇಂದ್ರ ನಾಯಕರ ಜತೆಗೆ ಚರ್ಚಿಸಲಿದ್ದಾರೆ. ಸಂಪುಟ ವಿಸ್ತರಣೆಯ ಅಧಿಕಾರ, ಪರಮಾಧಿಕಾರ ಸಿಎಂಗಿದೆ ಎಂದು ಸಹಕಾರ ಸಚಿವ ಎಸ್​ ಟಿ ಸೋಮಶೇಖರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯೋ? ಪುನರ್ ರಚನೆಯೋ ಎಂಬುದನ್ನು ಸಿಎಂ ನಿರ್ಧರಿಸಲಿದ್ದಾರೆ. ಶಾಸಕರಾದವರಿಗೆ ಸಚಿವರಾಗುವ ಆಕಾಂಕ್ಷೆ ಇರುತ್ತದೆ. ಆದರೆ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ಸಿಎಂ ನಿರ್ಧರಿಸಲಿದ್ದಾರೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸೋಮಶೇಖರ್​

ಸರ್ಕಾರ ರಚನೆಗೆ ಕಾರಣರಾದವರನ್ನು ಸಿಎಂ ಕಡೆಗಣಿಸುವುದಿಲ್ಲ. ಈಗಾಗಲೇ ನಮ್ಮೆಲ್ಲರಿಗೂ ಸಚಿವ ಸ್ಥಾನ ನೀಡಿದ್ದಾರೆ. ಹಾಗೆಯೇ ವಿಧಾನ ಪರಿಷತ್ ಸದಸ್ಯರಾದ​ ಎಂಟಿಬಿ ನಾಗರಾಜ, ಹೆಚ್​ ವಿಶ್ವನಾಥ, ಮುನಿರತ್ನ ಹಾಗೂ ಆರ್. ಶಂಕರ್ ಅವರಿಗೆ ಸಚಿವ ಸ್ಥಾನ ನೀಡಬೇಕಿದೆ ಎಂದು ಆಪ್ತರ ಪರ ಸಚಿವ ಸೋಮಶೇಖರ್​ ಬ್ಯಾಟಿಂಗ್ ಮಾಡಿದರು.

ಮಹಾರಾಷ್ಟ್ರ ಡಿಸಿಎಂ ಉದ್ಧಟತನ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜಕೀಯ ದುರುದ್ದೇಶಕ್ಕೆ ಮಹಾರಾಷ್ಟ್ರ ನಾಯಕರು ಈ ರೀತಿಯ ಹೇಳಿಕೆ ನೀಡುತ್ತಾರೆ. ಮಹಾ ನಾಯಕರ ಮಾತಿಗೆ ಕಿಮ್ಮತ್ತು, ಬೆಲೆ ಕೊಡುವ ಅಗತ್ಯತೆ ಇಲ್ಲ. ಅವರ ಹೇಳಿಕೆಗೆ ನಮ್ಮ ಕರ್ನಾಟಕದವರು ತಲೆಕೆಡಿಸಿಕೊಳ್ಳಬೇಕಿಲ್ಲ. ಅಲ್ಲಿನ‌ ಚುನಾವಣೆಗೆ ಗಿಮಿಕ್ ಮಾಡಲು ಎನ್​ಸಿಪಿ ನಾಯಕರು ಹೊರಟಿದ್ದಾರೆ. ಗಡಿ ಉಸ್ತುವಾರಿ ಸಚಿವರ ನೇಮಕ ಬಗ್ಗೆಯೂ ಸಿಎಂ ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.