ಬೆಳಗಾವಿ: ರಾಜ್ಯದಾದ್ಯಂತ ಬಿರುಸುಗೊಂಡಿರುವ ಉಪಚುನಾವಣೆ ಕಾವು, ಗೋಕಾಕ್ನಲ್ಲಿ ತುಸು ಹೆಚ್ಚಾಗಿಯೇ ಬಿಸಿಯಾಗಿದೆ.
ಇಂದು ಕಾಗವಾಡ ಪ್ರಚಾರ ಮುಗಿಸಿದ ನೇರವಾಗಿ ರಮೇಶ್ ಜಾರಕಿಹೊಳಿ ಸ್ಪರ್ಧಿಸಿರುವ ಗೋಕಾಕ್ ಕ್ಷೇತ್ರಕ್ಕೆ ಆಗಮಿಸಿ ಸಿಎಂ ಯಡಿಯೂರಪ್ಪರನ್ನು ಹೂ ಚೆಲ್ಲುವ ಮೂಲಕ ಸ್ವಾಗತಿಸಿದರು.
ಆದರೆ, ಹೂ ಚೆಲ್ಲುವುದನ್ನು ನೋಡಿದ ಸಿಎಂ ವಾಹನದಿಂದ ಕೆಳಗಿಳಿಯಲೇ ಇಲ್ಲ. ನಂತರ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೂ ಎಸೆಯದಂತೆ ಕಾರ್ಯಕರ್ತರಿಗೆ ಸನ್ನೆ ಮಾಡಿದರು. ಹೂಮಳೆ ನಿಂತ ಬಳಿಕವೇ ವಾಹನದಿಂದ ಸಿಎಂ ಯಡಿಯೂರಪ್ಪ ವೇದಿಕೆಯತ್ತ ತೆರಳಿದರು.
ಗೋಕಾಕ್ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಬಿಜೆಪಿ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ, ಸಚಿವರಾದ ಜಗದೀಶ ಶೆಟ್ಟರ್, ಶಶಿಕಲಾ ಜೊಲ್ಲೆ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಉಮೇಶ ಕತ್ತಿ ಸೇರಿದಂತೆ ಜಿಲ್ಲೆಯ ಶಾಸಕರು ಬಿಜೆಪಿ ಮುಖಂಡರು ಉಪಸ್ಥಿತರಿದ್ದಾರೆ.