ETV Bharat / state

ಫಲಾನುಭವಿಗಳ ಜತೆಗೆ ಸಿಎಂ ಸಂವಾದ: ಮನವಿಗೆ ಬಿಎಸ್​ವೈ ಸ್ಪಂದಿಸುವ ವಿಶ್ವಾಸ ವ್ಯಕ್ತಪಡಿಸಿದ ಯುವತಿ - ರಾಜ್ಯದ ವಿವಿಧ ಭಾಗಗಳ ಫಲಾನುಭವಿಗಳ ಜೊತೆಗೆ ಸಿಎಂ ಬಿಎಸ್​ವೈ ಸಂವಾದ

ರಾಮದುರ್ಗ ತಾಲೂಕಿನ ನಸಲಾಪುರ ಗ್ರಾಮದ ಪಲ್ಲವಿ ಅರಂಬಾವಿ ಕೂಡ ಸಿಎಂ ಅವರೊಂದಿಗಿನ ಸಂವಾದದಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ 'ಈಟಿವಿ ಭಾರತ' ಜೊತೆಗೆ ಅನುಭವ ಹಂಚಿಕೊಂಡ ಪಲ್ಲವಿ, ಆರ್ಥಿಕ ನೆರವು ನೀಡುವಂತೆ ಕೋರಿದ್ದೇವೆ. ನಮ್ಮ ಮನವಿಗೆ ಸಿಎಂ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

CM BSY interaction with beneficiaries ಫಲಾನುಭವಿಗಳ ಜತೆಗೆ ಸಿಎಂ ಬಿಎಸ್​ವೈ ಸಂವಾದ
ಫಲಾನುಭವಿಗಳ ಜತೆಗೆ ಸಿಎಂ ಬಿಎಸ್​ವೈ ಸಂವಾದ
author img

By

Published : Jul 27, 2020, 7:16 PM IST

Updated : Jul 27, 2020, 7:38 PM IST

ಬೆಳಗಾವಿ: ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ ರಾಜ್ಯದ ವಿವಿಧ ಭಾಗಗಳ ಫಲಾನುಭವಿಗಳ ಜೊತೆಗೆ ಸಿಎಂ ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಿದರು.

ಜಿಲ್ಲೆಯ ರಾಮದುರ್ಗ ತಾಲೂಕಿನ ನಸಲಾಪುರ ಗ್ರಾಮದ ಪಲ್ಲವಿ ಅರಂಬಾವಿ ಕೂಡ ಸಂವಾದದಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಅನುಭವ ಹಂಚಿಕೊಂಡ ಪಲ್ಲವಿ, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನನ್ನ ತಾಯಿಗೆ ತಂದೆಯ ಒಂದು ಕಿಡ್ನಿ ತೆಗೆದು ಜೋಡಿಸಲಾಗಿದೆ. ಚೇತರಿಸಿಕೊಳ್ಳುತ್ತಿದ್ದ ನನ್ನ ತಾಯಿಗೆ ಲಾಕ್​ಡೌನ್ ಸಮಯದಲ್ಲಿ ಮಾತ್ರೆ ಸಿಕ್ಕಿರಲಿಲ್ಲ. ಸಾಮಾಜಿಕ ಜಾಲತಾಣದ ಸಹಾಯದಿಂದ ತಾಯಿಯ ಸಮಸ್ಯೆಯನ್ನು ಸಿಎಂ ಗಮನಕ್ಕೆ ತಂದಿದ್ದೆ. ತಕ್ಷಣವೇ ಸ್ಪಂದಿಸಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾಡಳಿತದ ಮೂಲಕ ನಮ್ಮ ಮನೆಗೆ ಮಾತ್ರೆ ಕಳುಹಿಸಿದ್ದರು. ಕಷ್ಟದಲ್ಲಿದ್ದ ನಮ್ಮ ಕುಟುಂಬಕ್ಕೆ ಸ್ಪಂದಿಸಿದ್ದ ಸಿಎಂ ಅವರಿಗಿಂದು ಕುಟುಂಬದ ಪರವಾಗಿ ಧನ್ಯವಾದ ತಿಳಿಸಿದೆ ಎಂದು ಹೇಳಿದರು.

ಕಷ್ಟಕ್ಕೆ ಸಿಎಂ ಸ್ಪಂದಿಸುವ ವಿಶ್ವಾಸದಲ್ಲಿ ಯುವತಿ

ಅಲ್ಲದೇ ಕಿಡ್ನಿ ವರ್ಗಾವಣೆ ಚಿಕಿತ್ಸೆಗೆ 10 ಲಕ್ಷಕ್ಕಿಂತ ಅಧಿಕ ವೆಚ್ಚವಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬ ನಮ್ಮದು. ಇಷ್ಟೊಂದು ಸಾಲ ನಮ್ಮಿಂದ ತೀರಿಸಲು ಆಗಲ್ಲ. ಆರ್ಥಿಕ ನೆರವು ನೀಡುವಂತೆ ಕೋರಿದ್ದೇವೆ. ನಮ್ಮ ಮನವಿಗೆ ಸಿಎಂ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

Last Updated : Jul 27, 2020, 7:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.