ETV Bharat / state

ಸತೀಶ್ ಜಾರಕಿಹೊಳಿ ದುಡುಕುವವರಲ್ಲ, ಕಾಂಗ್ರೆಸ್ ಸಹವಾಸ, ಸಂಸ್ಕೃತಿಯ ಪ್ರಭಾವದಿಂದ ಹೀಗಾಗಿದೆ: ಸಿಎಂ  ಬೊಮ್ಮಾಯಿ - ಸತೀಶ್ ಜಾರಕಿಹೊಳಿ ಪತ್ರ

ಕಾಂಗ್ರೆಸ್​ ಪಕ್ಷದವರಿಗೆ ದೇಶದ ಅಭಿಮಾನ‌ ಆಗಲಿ, ಪ್ರೀತಿ ಆಗಲಿ ಎಳ್ಳುಕಾಳಷ್ಟು ಇಲ್ಲ. ಇದಕ್ಕೆ ಹತ್ತು ಹಲವಾರು ಉದಾಹರಣೆ ನೀಡಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Nov 9, 2022, 10:25 PM IST

ಬೆಳಗಾವಿ: ಮಾತು ಆಡಿದ್ರೆ ಹೋಯ್ತು. ಮುತ್ತು ಒಡೆದರೆ ಹೋಯ್ತು ಅಂತಾ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ ವಿವಾದಿತ ಹೇಳಿಕೆಯನ್ನು ಹಿಂಪಡೆದು ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ

ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾತನಾಡುವುದು ಅಷ್ಟೇ ಅಲ್ಲ ಸಮರ್ಥನೆ ಮಾಡುವ ಸಾಹಸ ಮಾಡಿದ್ದಾರೆ. ಈಗ ವಿಷಾದ ವ್ಯಕ್ತಪಡಿಸಿದ್ದೀನಿ ಅನ್ನೋದು ಎಷ್ಟರ ಮಟ್ಟಿಗೆ ಸರಿ?. ತಪ್ಪು ಅನ್ನೋದನ್ನ ಅವರ ಆತ್ಮಸಾಕ್ಷಿಗೆ ಬಿಡುತ್ತೇನೆ. ನನಗೆ ಆಶ್ಚರ್ಯ ಆಗಿರುವಂತದ್ದು ಮಾನ್ಯ ಸತೀಶ್ ಜಾರಕಿಹೊಳಿ ದುಡುಕುವವರಲ್ಲ. ಕಾಂಗ್ರೆಸ್ ಸಹವಾಸದಿಂದ ಕಾಂಗ್ರೆಸ್ ಸಂಸ್ಕೃತಿ ಪ್ರಭಾವದಿಂದ ಹೀಗಾಗಿದೆ ಎಂದರು.

ಕಾಂಗ್ರೆಸ್ ಸಂಸ್ಕೃತಿಯೇ ಯಾವಾಗಲೂ ವಿಭಜಿಸುವ ಶಕ್ತಿಗಳ ಜೊತೆ ಕೈ ಜೋಡಿಸುತ್ತದೆ. ಹಿಂದೂ ಧರ್ಮವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸುತ್ತಿದ್ದಾರೆ. ದೇವಸ್ಥಾನಕ್ಕೆ ಹೋಗುವಂತದ್ದು, ಟೆಂಪಲ್ ರನ್ ಮಾಡುವಂತದ್ದು ಸಹಜವಾಗಿ ಅವರು ಎಲ್ಲ ವೋಟ್‌ಬ್ಯಾಂಕ್ ಸಲುವಾಗಿ ಮಾಡ್ತಾರೆ. ಅಲ್ಪಸಂಖ್ಯಾತರ ತುಷ್ಠಿಕರಣ ಜೊತೆಗೆ ವಕ್ಫ್ ಪ್ರಾಪರ್ಟಿಯನ್ನ ಮುಚ್ಚಿದ್ದಾರೆ. ಅಧಿಕಾರಕ್ಕಾಗಿ ಹಿಂದೂಗಳನ್ನ ದ್ವೇಷಿಸುವುದು, ದೂಷಿಸುವುದು ಮಾಡ್ತಿದ್ದಾರೆ.

ದೇಶದ ಅಭಿಮಾನ‌ ಆಗಲಿ, ಪ್ರೀತಿ ಆಗಲಿ ಎಳ್ಳುಕಾಳಷ್ಟು ಇಲ್ಲ. ಇದಕ್ಕೆ ಹತ್ತು ಹಲವಾರು ಉದಾಹರಣೆ ನೀಡಬಹುದು. ಹೀಗಾಗಿ ರಾಜಕಾರಣಕ್ಕಾಗಿ, ಮತಕ್ಕಾಗಿ ಮಾಡುವ ಕೆಟ್ಟ ರಾಜಕಾರಣ ನಿಲ್ಲಬೇಕು. ಸತೀಶ್ ಜಾರಕಿಹೊಳಿ ಪತ್ರ ಏನಿದೆ ನೋಡುತ್ತೇನೆ. ತನಿಖೆ ಮಾಡುವುದಕ್ಕೆ ಏನಿದೆ?. ಅವರು ಯಾವ ಆಧಾರದ ಮೇಲೆ ಇದನ್ನ ಮಾತಾಡಿದ್ದಾರೆ ಅದನ್ನ ಬಹಿರಂಗಪಡಿಸಬೇಕು. ಅದರ ದೃಢೀಕರಣ ಆಧರಿಸಿ ಅದರ ಸತ್ಯಾಸತ್ಯತೆ ಹೊರಗೆ ತರಬಹುದು.

ಈಗ ಹತ್ತು ಹಲವಾರು ಸಾಹಿತ್ಯ, ವಿಕೃತ ಸಾಹಿತ್ಯ ಬರುತ್ತವೆ. ನಂಬಲಾರದ ಸಾಹಿತ್ಯಗಳು, ವಿಡಿಯೋಗಳು ಬರುತ್ತಿರುತ್ತವೆ. ಸಾಮಾಜಿಕ ಜಾಲತಾಣ ಮತ್ತು ಪುಸ್ತಕ ರೂಪದಲ್ಲಿವೆ. ಡಿಕ್ಷನರಿ ನೋಡಿ ಮಾತನಾಡಿದೆ ಅಂತಾರೆ. ಡಿಕ್ಷನರಿ ಯಾವುದು, ಅದರ ಅರ್ಹತೆ ಏನು?. ವಿಕಿಪೀಡಿಯಾ ಈಗಾಗಲೇ ಹತ್ತು ಹಲವು ಸಲ ತನಿಖೆಗೆ ಒಳಗಾಗಿದೆ. ವಿಕಿಪೀಡಿಯಾ ಮುಖ್ಯಸ್ಥನ ಮೇಲೆ ಹತ್ತು ಹಲವು ಕೇಸ್‌ಗಳಿವೆ. ಪ್ರಕರಣವನ್ನ ಸತೀಶ್ ಜಾರಕಿಹೊಳಿ ಅವರ ಆತ್ಮ ಸಾಕ್ಷಿಗೆ ಬಿಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಓದಿ: ನನ್ನ ಹೇಳಿಕೆ ಹಿಂಪಡೆಯುತ್ತಿದ್ದೇನೆ.. ಸಿಎಂಗೆ ಪತ್ರ ಬರೆದ ಸತೀಶ್​ ಜಾರಕಿಹೊಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.