ETV Bharat / state

ಪೌರತ್ವ ಕಾಯ್ದೆಯಿಂದ ಯಾವುದೇ ಒಬ್ಬ ಮುಸ್ಲಿಂ ವ್ಯಕ್ತಿಗೆ ತೊಂದರೆಯಾಗುವುದಿಲ್ಲ : ಮಹಾಂತೇಶ ಕವಟಗಿಮಠ - chikkodi latest news

ಚಿಕ್ಕೋಡಿ ಪಟ್ಟಣದ ಕೇಶವ ಕಾಲಭವನದಲ್ಲಿ ಪೌರತ್ವ ಕಾಯ್ದೆ ಕುರಿತು ಜನಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ವಿಧಾನ ಪರಿಷತ್​​​ ಮುಖ್ಯ ಸಂಚೇತಕ ಮಹಾಂತೇಶ ಕವಟಗಿಮಠ ಚಾಲನೆ ನೀಡಿದರು.

Citizenship Act Campaign
ಪೌರತ್ವ ಕಾಯಿದೆ ಜನಜಾಗೃತಿ ಅಭಿಯಾನ
author img

By

Published : Jan 6, 2020, 3:46 PM IST

ಚಿಕ್ಕೋಡಿ: ಭಾರತ ಯಾವುದೇ ವರ್ಗಕ್ಕೆ ಸಿಮೀತವಲ್ಲ. ನಾವು ಹುಟ್ಟೋದು ಇಲ್ಲೇ, ಸಾಯೋದು ಇಲ್ಲೇ. ಈ ಪೌರತ್ವ ಕಾಯ್ದೆಯಿಂದ ಯಾವುದೇ ಒಬ್ಬ ಮುಸ್ಲಿಂ ವ್ಯಕ್ತಿಗೆ ತೊಂದರೆಯಾಗುವುದಿಲ್ಲ ಎಂದು ವಿಧಾನ ಪರಿಷತ್​​ ಮುಖ್ಯ ಸಂಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

ಪೌರತ್ವ ಕಾಯಿದೆ ಜನಜಾಗೃತಿ ಅಭಿಯಾನ

ಚಿಕ್ಕೋಡಿ ಪಟ್ಟಣದ ಕೇಶವ ಕಾಲಭವನದಲ್ಲಿ ಪೌರತ್ವ ಕಾಯ್ದೆ ಬಗ್ಗೆ ಜನಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ಕುಟುಂಬದಲ್ಲಿ ನಾಲ್ಕು ಜನ ವಾಸಿಸುವಾಗ ಗೊತ್ತಿಲ್ಲದೇ ಇರೋರು 3 ಜನ ಬಂದು ನಮ್ಮ ಮನೆಯಲ್ಲಿ ವಾಸವಿದ್ರೆ ಅವರನ್ನು ನಿಭಾಯಿಸೋದು ಹೇಗೆ ನೀವೇ ಯೋಚ್ನೆ ಮಾಡಿ. ಹಾಗಿದ್ದಾಗ ನಮ್ಮ ದೇಶವನ್ನು ಮುನ್ನಡೆಸುವ ಪ್ರಧಾನಿ ಅಥವಾ ಸರ್ಕಾರಕ್ಕೆ ನುಸುಳುಕೋರರಾಗಿ ಬಂದು ಭಾರತದಲ್ಲಿ ವಾಸಿಸುವವರನ್ನು ಪೋಷಿಸುವುದು ಎಷ್ಟು ಕಷ್ಟ ಎಂದರು.

ಅಫ್ಘಾನಿಸ್ಥಾನ, ಬಾಂಗ್ಲಾದೇಶ, ಪಾಕಿಸ್ತಾನ ದೇಶದಲ್ಲಿ ಯಾರು ಧಾರ್ಮಿಕ ಅಲ್ಪಸಂಖ್ಯಾತರಿದ್ದಾರೆ ಅವರಿಗೆ ಪೌರತ್ವವನ್ನು ಕೊಡುವ ಕಾಯ್ದೆ ಇದು ಹೊರತು ಇಲ್ಲಿರುವ ಭಾರತೀಯ ನಾಗರಿಕರಿಗೆ ಅವರ ಪೌರತ್ವವನ್ನು ಹೇಳುವಂತಹ ಅವಶ್ಯಕತೆ ಇಲ್ಲಾ ಎಂದರು.

ಯಾವುದೇ ಪ್ರತಿಭಟನೆ ನ್ಯಾಯಸಮ್ಮತವಾಗಿರಬೇಕು. ಪ್ರತಿಭಟನೆಯನ್ನ ಕಪ್ಪು ಬಟ್ಟೆ ಹಾಕಿಕೊಂಡು ಸಹ ಮಾಡಬಹುದು. ಅದು ಬಿಟ್ಟು ಸಾರ್ವಜನಿಕ ಆಸ್ತಿ ಹಾಳು ಮಾಡೋದು ಅಪರಾಧ. ಅದು ಹಾಳಾಗಿದ್ದು ನಮ್ಮಿಂದ. ಆದರೆ ಅದನ್ನು ಖರೀದಿ‌ ಮಾಡಿದ್ದು ನಮ್ಮ ಟ್ಯಾಕ್ಸ್ ಹಣದಿಂದ ಎಂಬುದನ್ನ ನಾವು ತಿಳಿದುಕೊಳ್ಳಬೇಕಿದೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಈ ಭಾರತದಲ್ಲಿ ಬದುಕಬೇಕಿದೆ ಎಂದು ಹೇಳಿದರು.

Intro:ಈ ಪೌರತ್ವ ಕಾಯ್ದೆಯಿಂದ ಯಾವುದೇ ಒಬ್ಬ ಮುಸ್ಲಿಂ ವ್ಯಕ್ತಿಗೆ ತೊಂದರೆಯಾಗುವುದಿಲ್ಲ : ಮಹತೇಶ ಕವಟಗಿಮಠBody:

ಚಿಕ್ಕೋಡಿ :

ಭಾರತ ಯಾವುದೇ ವರ್ಗಕ್ಕೆ ಸಿಮೀತವಲ್ಲ ನಾವೂ ಹುಟ್ಟೊದು ಇಲ್ಲೇ ಸಾಯೊದು ಇಲ್ಲೇ ಈ ಪೌರತ್ವ ಕಾಯ್ದೆಯಿಂದ ಯಾವುದೇ ಒಬ್ಬ ಮುಸ್ಲಿಂ ವ್ಯಕ್ತಿಗೆ ತೊಂದರೆಯಾಗುವುದಿಲ್ಲ ಎಂದು ವಿಧಾನಸಭಾ ಮುಖ್ಯ ಸಂಚೇತಕ ಮಹತೇಶ ಕವಟಗಿಮಠ ಹೇಳಿದರು.

ಚಿಕ್ಕೋಡಿ ಪಟ್ಟಣದ ಕೇಶವ ಕಾಲಭವನದಲ್ಲಿ ಜನಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ಮನೆಯಲ್ಲಿ ನಾಲ್ಕು ಜನ ಇರತ್ತೀವಿ. ಆಗ ನಮ್ಮ ಮನೆಯಲ್ಲಿ ಮತ್ತೆ ಇಬ್ಬರು ಜನರು ಬಂದರೆ ನಮ್ಮ ಮನೆ ಪರಸ್ಥಿತಿ ಯಾವ ರೀತಿ ಆಗುತ್ತದೆ. ಹೀಗೆ ನಮ್ಮ ದೇಶದಲ್ಲಿಯೂ ಕೂಡಾ ಬೇರೆಯವರು ಬಂದು ಪೌರತ್ವ ಪಡೆದುಕೊಳ್ಳುತ್ತಿದ್ದಾರೆ.

ಯಾರು ನಮ್ಮ ದೇಶಕ್ಕೆ ಟ್ಯಾಕ್ಸ್ ಕೊಡೊದಿಲ್ಲವೊ ಅಂತವರು ನಮ್ಮ ದೇಶದ ಪೌರತ್ವ ಬೇಡುತ್ತಿದ್ದಾರೆ. ಅಪಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ ದೇಶದ ಯಾರು ಧಾರ್ಮಿಕ ಅಲ್ಪಸಂಖ್ಯಾತರಿದ್ದಾರೆ ಅವರಿಗೆ ಪೌರತ್ವವನ್ನು ಕೊಡುವ ಕಾಯ್ದೆ ಹೊರೆತು ಇಲ್ಲಿರುವ ಭಾರತೀಯ ನಾಗರಿಕರಿಗೆ ಪೌರತ್ವ ಹೇಳುವ ಅವಶ್ಯಕತೆ ಇಲ್ಲಾ ಎಂದು ಹೇಳಿದರು.

ಯಾವುದೇ ಪ್ರತಿಭಟನೆ ನ್ಯಾಯ ಸಮ್ಮತವಾಗಿರಬೇಕು, ನಾವೂ ಪ್ರತಿಭಟನೆಯನ್ನು ಕಪ್ಪು ಬಟ್ಟೆ ಹಾಕಿಕೊಂಡು ಸಹಿತ ಪ್ರತಿಭಟನೆ ಮಾಡಬಹುದು ಅದರಂತೆ ಸಾರ್ವಜನಿಕ ಆಸ್ತಿ ಹಾಳುಮಾಡುವುದು ಅಪರಾಧ ಅದು ಹಾಳಾಗಿದ್ದು ನಮ್ಮಿಂದ. ಆದರೆ, ಅದನ್ನು ಖರೀದಿ‌ ಮಾಡಿದ್ದು ನಮ್ಮ ಟ್ಯಾಕ್ಸ್ ಹಣದಿಂದ ಎಂಬುದನ್ನ ನಾವು ತಿಳಿದುಕೊಳ್ಳಬೇಕಿದೆ. ನಾವೆಲ್ಲರೂ ಕೂಡಿಕೊಂಡು ಕೆಲಸವಿಲ್ಲದ ರಾಹುಲ ಗಾಂಧಿಗೆ ಸರಿಯಾದ ಬುದ್ದಿ ಕಲಿಸಬೇಕಿದೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಈ ಭಾರತದಲ್ಲಿ ಬದುಕಬೇಕಿದೆ ಎಂದು ಹೇಳಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.