ಚಿಕ್ಕೋಡಿ: 70 ವರ್ಷದ ನನೆಗುದಿಗೆ ಬಿದಿದ್ದ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದರಿಂದ ದೇಶದ ಜನತೆ ಕನಸು ನನಸಾಗಿದೆ ಎಂದು ರಾಷ್ಟ್ರಸಂತ ಚಿನ್ಮಯಸಾಗರ (ಜಂಗಲವಾಲೆ ಬಾಬಾ) ಮುನಿ ಮಹಾರಾಜರು ಹೇಳಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಆದಿನಾಥ ಜೈನ ಮಂದಿರದಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಅಮಿತ್ ಶಾ ಜಮ್ಮು-ಕಾಶ್ಮೀರದಲ್ಲಿ ಇದ್ದ ಸಂವಿಧಾನದ ಆರ್ಟಿಕಲ್ 370, 35ಎ ತೆಗೆದುಹಾಕಿದ್ದರಿಂದ ಅಖಂಡ ಭಾರತ ದೇಶ ಈಗ ನಿರ್ಮಾಣವಾಗಿದೆ. ಅವರ ಧೈರ್ಯ ಮತ್ತು ದೇಶಭಕ್ತಿ ಭಾರತ ದೇಶಕ್ಕೆ ಹೆಮ್ಮೆ ತಂದಿದೆ ಎಂದು ಗುಣಗಾನ ಮಾಡಿದ್ದಾರೆ.