ಚಿಕ್ಕೋಡಿ : ತಾಲೂಕಿನಲ್ಲಿ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಜಾಗನೂರ ಪಾಮಲದಿನ್ನಿ ರಸ್ತೆ ನಿವಾಸಿ ರವಿ ಮಾರುತಿ ಗಣಾಚಾರಿ (24) ಬಂಧಿತ ಆರೋಪಿ. ಈತ ಪಟ್ಟಣ, ಮಹಾಲಿಂಗಪೂರ, ಉಳಾಗಡ್ಡಿ ಖಾನಾಪೂರ, ಅಂಕಲಗಿ, ಹುಕ್ಕೇರಿ ಕಡೆಗಳಲೆಲ್ಲಾ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದನು.
ಬಂಧಿತನಿಂದ ಒಂದು ಲಕ್ಷದ ಐವತ್ತು ಸಾವಿರ ಮೌಲ್ಯದ 5 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.