ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ ಸಿಎಎ ಕಾಯ್ದೆ ಕುರಿತು ಬೂತ್ ಮಟ್ಟದಲ್ಲಿ ಪ್ರಚಾರ ಮಾಡಲು ಬಿಜೆಪಿ ಮುಂದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಈ ಕುರಿತು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಮಾತನಾಡಿದ ಸಚಿವೆ, ಜ.26 ರ ಗಣರಾಜ್ಯೋತ್ಸವದಂದು ಬೆಳಗಾವಿ ಜಿಲ್ಲೆಯ 3980 ಬೂತ್ ಮಟ್ಟದ ಅಧ್ಯಕ್ಷರ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ, ಅವರ ಮನೆಯಲ್ಲಿ ಭಾರತ ಮಾತೆ ಪೂಜೆ ಮಾಡಿ, ತೊಟ್ಟ ಬಟ್ಟೆಯಲ್ಲಿ ಬಂದವರು ಎಂಬ ಪುಸ್ತಕವನ್ನು ಓದಿ ಹೇಳಲು ಬಿಜೆಪಿ ಮುಂದಾಗಿದೆ ಎಂದರು.
ಇನ್ನು ಪಾಕಿಸ್ತಾನ, ಸಿರಿಯಾ, ಒಮನ್ ಅಂತಹ ದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ. ಆದರೆ, ಭಾರತ ಐಕ್ಯತೆಯ ರಾಷ್ಟ್ರವಾಗಿದೆ. ಇಲ್ಲಿನ ಯಾವ ಸಮುದಾಯಕ್ಕೂ ತೊಂದರೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಎನ್.ಆರ್.ಸಿ ಮತ್ತು ಸಿ.ಎ.ಎ ಕಾಯ್ದೆ ಕುರಿತು ವಿನಾಕಾರಣ ಗೊಂದಲ ಹುಟ್ಟಿಸಲು ಕಾಂಗ್ರೆಸ್ ಮುಂದಾಗಿದೆ. ಆದರೆ, ದೇಶದಲ್ಲಿ ಎನ್.ಆರ್.ಸಿ ಕಾಯ್ದೆಯನ್ನು ಬಿಜೆಪಿ ಜಾರಿಗೆ ತಂದೆ ತರುತ್ತದೆ ಎಂದರು.