ಚಿಕ್ಕೋಡಿ: ಕೊರೊನಾ ವೈರಸ್ನಿಂದ ದೇಶದಲ್ಲಿ ಏ. 14ರವರೆಗೆ ಸಂಪೂರ್ಣ ಲಾಕ್ಡೌನ್ ಆಗಿದ್ದು, ಜನರು ತತ್ತರಿಸಿದ್ದಾರೆ. ಇದನ್ನು ಮನಗೊಂಡ ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ಬಡ ಜನರಿಗೆ ಅಗತ್ಯ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಮೂಡಲಗಿ ಪಟ್ಟಣದ ಬಡಜನರು, ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಕಂಗೆಟ್ಟು ಹೋಗಿದ್ದಾರೆ. ಅಗತ್ಯ ವಸ್ತಗಳನ್ನು ತರಲು ಹಣವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಬಡಜನರಿಗೆ ದಿನನಿತ್ಯ ಬಳಸುವ ದಿನಸಿ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಮೂಡಲಗಿ ಪಟ್ಟಣದ ಗಂಗಾನಗರ, ಅಮನ ನಗರ, ದೇಶಪಾಂಡೆ ಫ್ಲಾಟ್ಗಳಲ್ಲಿ ದಿನ ಬಳಕೆಯ ಅಗತ್ಯ ವಸ್ತಗಳ ಕಿಟ್ಗಳನ್ನು ವಿತರಿಸಿದರು.