ಚಿಕ್ಕೋಡಿ (ಬೆಳಗಾವಿ): ಬೆಳೆ ಕೈ ಸೇರದ ಹಿನ್ನೆಲೆ ಸಾಲದ ಸುಳಿಯಲ್ಲಿ ಸಿಲುಕಿದ ರೈತ ಸಾಲ ತೀರಿಸಲಾಗದೆ ಮನನೊಂದು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರೂಪಿನಾಳ ಗ್ರಾಮದಲ್ಲಿ ನಡೆದಿದೆ.
ಮೃತ ರೈತ ತಮ್ಮಾಣಿ ಶಂಕರ ಅಕ್ಕೋಳೆ (38) ಮೂರು ಏಕರೆ ಜಮೀನು ಹೊಂದಿದ್ದ. ಮಳೆಯಿಂದ ಬೆಳೆದ ಬೆಳೆ ಕೈಗೆ ಬಾರದೆ ಹೋಗಿದೆ. ಕೃಷಿಗಾಗಿ ಈತ ಗ್ರಾಮದಲ್ಲಿನ ವಿವಿಧ ಬ್ಯಾಂಕುಗಳಲ್ಲಿ 3.50 ಲಕ್ಷ ರೂಪಾಯಿ ಸಾಲ ಮಾಡಿದ್ದ. ಸಾಲ ಮರುಪಾವತಿ ಮಾಡಲಾಗದೆ ಜಿಗುಪ್ಸೆಗೊಂಡು ಮನೆಯ ಮುಂದೆ ನೇಣಿಗೆ ಶರಣಾಗಿದ್ದಾನೆ.
ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.