ETV Bharat / state

ಸಕ್ಕರೆ ಕಾರ್ಖಾನೆಗಳಿಂದ ತೂಕದಲ್ಲಿ ಮೋಸ, ಕಬ್ಬು ಬೆಳೆಗಾರರ ಪರ ನಿಲ್ಲದ ಸರ್ಕಾರ: ಶ್ರೀಮಂತ ಪಾಟೀಲ್

ಹಿಂದಿನ ಸದನದಲ್ಲಿ ಸಚಿವ ಶಿವಾನಂದ ಪಾಟೀಲ್ ಅವರು ಸರ್ಕಾರದಿಂದ ಡಿಜಿಟಲ್ ತೂಕದ ಯಂತ್ರ ಅಳವಡಿಸುವ ಕುರಿತು ಭರವಸೆ ನೀಡಿದ್ದರು. ಏಳು ತಿಂಗಳು ಕಳೆದರೂ ಒಂದು ತೂಕದ ಮಷಿನ್​ನ್ನು ಕಾರ್ಖಾನೆಗಳ ಆವರಣದಲ್ಲಿ ಅಳವಡಿಸಿಲ್ಲ. ಕಬ್ಬು ಬೆಳೆಗಾರರ ವಿಷಯದಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ್ ಆರೋಪಿಸಿದ್ದಾರೆ.

Former minister Shrimant Patil spoke to the media.
ಮಾಜಿ ಸಚಿವ ಶ್ರೀಮಂತ ಪಾಟೀಲ್ ಮಾಧ್ಯಮದವರ ಜೊತೆ ಮಾತನಾಡಿದರು.
author img

By ETV Bharat Karnataka Team

Published : Dec 14, 2023, 9:42 PM IST

Updated : Dec 14, 2023, 11:08 PM IST

ಮಾಜಿ ಸಚಿವ ಶ್ರೀಮಂತ ಪಾಟೀಲ್ ಮಾಧ್ಯಮದವರ ಜೊತೆ ಮಾತನಾಡಿದರು.

ಚಿಕ್ಕೋಡಿ: ವಿಧಾನಸಭೆ ಸದನದಲ್ಲಿ ಕಬ್ಬು ಬೆಳೆಗಾರರ ಕುರಿತು ಒಳ್ಳೆಯ ಚರ್ಚೆಗಳು ನಡೆಯುತ್ತಿವೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಕಾಂಗ್ರೆಸ್ ಸರ್ಕಾರ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ರೈತರ ಪರ ಕಾಳಜಿ ಇದ್ದರೆ ತಕ್ಷಣ ಸರ್ಕಾರ ನುಡಿದಂತೆ ನಡೆದು ಕಬ್ಬು ತೂಕದಲ್ಲಿ ಆಗುತ್ತಿರುವ ಮೋಸವನ್ನು ತಡೆಯಬೇಕು ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಕೆಲವು ಸಕ್ಕರೆ ಕಾರ್ಖಾನೆಗಳು ಕಬ್ಬು ತೂಕದಲ್ಲಿ ಮೋಸ ಮಾಡುತ್ತಿವೆ. ರೈತರಿಂದಲೂ ಇಂತಹ ಆರೋಪ ಕೇಳಿ ಬರುತ್ತದೆ. ಆದರೆ ಈ ಮೋಸ ತಡೆಯಬೇಕಾದ ಸರ್ಕಾರಗಳು ರೈತರ ಪರ ನಿಲ್ಲದೇ ಬರಿ ರಾಜಕೀಯವಾಗಿ ಮಾತ್ರ ಬಳಸಿಕೊಳ್ಳುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

2001ರಿಂದ ನಾನು ಕೆಲವು ಸಕ್ಕರೆ ಕಾರ್ಖಾನೆಗಳು ಯಾವ ರೀತಿ ತೂಕದಲ್ಲಿ ಮೋಸ ಮಾಡುತ್ತಾರೆ ಎನ್ನುವುದನ್ನು ಸರ್ಕಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಪ್ರಯೋಜನವಾಗಿಲ್ಲ. ಈಗಲಾದರೂ ಸಕ್ಕರೆ ಸಚಿವರು ರೈತರ ಪರವಾಗಿ ಕೆಲಸ ಮಾಡಲಿ ಎಂದು ಮನವಿ ಮಾಡಿದರು.

ಡಿಜಿಟಲ್ ತೂಕದ ಯಂತ್ರ: ಹಿಂದೆ ನಡೆದ ಸದನದಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಡಿಜಿಟಲ್ ತೂಕದ ಯಂತ್ರವನ್ನು ಅಳವಡಿಸಲಾಗುವುದು ಎಂದು ಭರವಸೆ ನೀಡಿದರು. ಕಳೆದ ಏಳು ತಿಂಗಳಿನಿಂದ ಯಾವುದೇ ಒಂದು ತೂಕದ ಮಷಿನ್ ಅ​​ನ್ನು ಸರ್ಕಾರದ ವತಿಯಿಂದ ಕಾರ್ಖಾನೆಗಳ ಆವರಣದಲ್ಲಿ ಅಳವಡಿಕೆ ಮಾಡಿಲ್ಲ. ಹೀಗಾಗಿ ಕಬ್ಬು ಬೆಳೆಗಾರರ ಪರ ಸರ್ಕಾರ ನಿಲ್ಲುತ್ತಿಲ್ಲ ಎಂದು ಆರೋಪಿಸಿದರು.

ರೈತರ ದಾರಿ ತಪ್ಪಿಸಬೇಡಿ: ನಾನು ಒಬ್ಬ ಸಕ್ಕರೆ ಕಾರ್ಖಾನೆಯ ಮಾಲೀಕನಾಗಿ ಸರ್ಕಾರಕ್ಕೆ ಹೇಳುತ್ತೇನೆ. ಸರ್ಕಾರದ ವತಿಯಿಂದ ಏನಾದರೂ ನೀವು ತೂಕ ಮಾಪನ ಯಂತ್ರವನ್ನು ಅಳವಡಿಸುವವರಿದ್ದರೆ ಮೊದಲಿಗೆ ನನ್ನ ಕಾರ್ಖಾನೆ ಆವರಣದಲ್ಲಿ ಅಳವಡಿಸಲಿ. ಬಾಯಿ ಮಾತಿಗೆ ಏನಾದರೂ ಹೇಳಿ ರೈತರ ದಾರಿ ತಪ್ಪಿಸಬೇಡಿ. ಕಬ್ಬಿನ ತೂಕದಲ್ಲಿ ಮೋಸ ಮಾಡೋದು ಒಂದು ದೊಡ್ಡ ಜಾಲವಿದೆ. ಸರ್ಕಾರ ದಿಟ್ಟ ಕ್ರಮ ಕೈಗೊಂಡರೆ ನಮ್ಮಿಂದ ಪ್ರಾರಂಭವಾಗಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಸಿದ್ದರಾಮಯ್ಯ ಪತ್ರ ಬರೆದರೂ ಪ್ರಯೋಜವಾಗಿಲ್ಲ:2001 ರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಇದಕ್ಕೆ ಸಂಬಂಧಿಸಿದ ಹಲವು ರೀತಿ ದಾಖಲಾತಿಗಳನ್ನು ನೀಡಿದ್ದೇನೆ. 2018ರಲ್ಲಿ ಅಂದಿನ ಮತ್ತು ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಾಖಲೆ ಸಮೇತ ಮನವರಿಕೆ ಮಾಡಿದ್ದೇನೆ, ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರವನ್ನು ಕೂಡಾ ಬರೆದಿದ್ದರು. ಆದರೆ ಇದುವರೆಗೆ ಆ ಪತ್ರ ಯಾವುದಕ್ಕೂ ಪ್ರಯೋಜನವಾಗಿಲ್ಲ, ರೈತರೂ ಕೂಡ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಕೂಡ ಸಲ್ಲಿಸಿದರು. ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ಕೂಡ ನೀಡಿತ್ತು, ಆದರೆ ಇದುವರೆಗೆ ರೈತರ ಬೆಳೆದ ಕಬ್ಬಿಗೆ ಸರ್ಕಾರಗಳು ನ್ಯಾಯವನ್ನು ನೀಡಿಲ್ಲ ಎಂದು ಅಪಾದಿಸಿದರು.

ಇದನ್ನೂಓದಿ:ನಾಲ್ಕು ಲಕ್ಷ ರೈತರ ಕೃಷಿ ಪಂಪ್ ಸೆಟ್‍ಗಳಿಗೆ ಮೂಲ ಸೌಕರ್ಯ: ಸಚಿವ ಕೆ ಜೆ ಜಾರ್ಜ್

Last Updated : Dec 14, 2023, 11:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.