ಚಿಕ್ಕೋಡಿ: ಉತ್ತರ ಕರ್ನಾಟಕದ ಸುಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಲಕ್ಷಾಂತರ ಭಕ್ತರನ್ನು ಒಳಗೊಂಡ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ವೀರಭದ್ರೇಶ್ವರ ಜಾತ್ರೆಯು ಈ ಬಾರಿ ಸರಳವಾಗಿ ನಡೆಯಲಿದೆ. ಸಾಂಕೇತಿಕ ಮಹಾರಥೋತ್ಸವ ಜರುಗುಲಿದೆ ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದರು.
ಯಡೂರು ಕಾಡ ಸಿದ್ದೇಶ್ವರ ಮಠದಲ್ಲಿ ಮಾತನಾಡಿದ ಅವರು, ಕೊರೊನಾ ಮಹಾ ಮಾರಿಯಿಂದ ಇಡೀ ಮಾನವ ಕುಲಕ್ಕೆ ತೊಂದರೆಯಾಗಿದ್ದು, ಹೀಗಾಗಿ ಸರ್ಕಾರದ ನಿಯಮದಂತೆ ಈ ಬಾರಿ ಜಾತ್ರೆ ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೇವೆ. ಜಾತ್ರಾಮಹೋತ್ಸವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ಬಿಲ್ವಾರ್ಚಾನೆ, ಆಯಾಚಾರ, ಲಿಂಗ ದೀಕ್ಷೆ, ಮಹಾಪ್ರಸಾದ, ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಬಹುನಿರೀಕ್ಷಿತ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವನ್ನು ಧಾರ್ಮಿಕ ವಿಧಿಯಂತೆ ಶಿಷ್ಟಾಚಾರ ಅನುಗುಣವಾಗಿ ಕಡಿಮೆ ಜನರ ಸಮ್ಮುಖದಲ್ಲಿ ಫೆಬ್ರವರಿ 12 ರಂದು ಸಂಜೆ ಮಹಾರಥೋತ್ಸವ ಜರುಗುಲಿದೆ. ಜಾತ್ರಾಮಹೋತ್ಸವಕ್ಕೆ ತಾಲೂಕಾಡಳಿತದಿಂದ ಅನುಮತಿ ಸಿಕ್ಕಿದೆ. ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಶಾಂತತೆಯಿಂದ ಜಾತ್ರೆಯಲ್ಲಿ ಪಾಲ್ಗೊಂಡು ಶ್ರೀ ವೀರಭದ್ರೇಶ್ವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಶೈಲ ಜದ್ಗುರುಗಳು ತಿಳಿಸಿದರು.