ETV Bharat / state

ಡಿಕೆಶಿ ವಿರುದ್ಧ 'ಸಿಡಿ'ದೆದ್ದ ರಮೇಶ್​ ಜಾರಕಿಹೊಳಿ; ದೆಹಲಿಗೆ ಪ್ರಯಾಣ, ಅಮಿತ್‌ ಶಾ ಭೇಟಿಗೆ ನಿರ್ಧಾರ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಮರ ಸಾರಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಂದು ದೆಹಲಿಗೆ ತೆರಳಿದ್ದಾರೆ.

Former minister Ramesh Jarakiholi Delhi Tour

author img

By

Published : Feb 3, 2023, 2:34 AM IST

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ 'ಸಿಡಿ'ದೆದ್ದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು (ಗುರುವಾರ) ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ ಬೆಂಗಳೂರಿಂದ ದೆಹಲಿಗೆ ತೆರಳಿರುವ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಅಮಿತ್ ಶಾ ಬ್ಯುಸಿಯಾಗಿದ್ದು, ಭೇಟಿ ಸಮಯಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಿಡಿ ಪ್ರಕರಣ: ಸಿಬಿಐ ತನಿಖೆ ಕುರಿತು ಸಿಎಂ ಜೊತೆ ಚರ್ಚಿಸಿ ನಿರ್ಧಾರ- ಆರಗ ಜ್ಞಾನೇಂದ್ರ

ತಮ್ಮ ವಿರುದ್ಧ ಬಿಡುಗಡೆಯಾಗಿದ್ದ ಸಿಡಿ ಷಡ್ಯಂತ್ರದ ಹಿಂದೆ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ಆರೋಪ ಮಾಡಿರುವ ಅವರು, ಈ ಬಗ್ಗೆ ತಮ್ಮ ಬಳಿ ಸಾಕ್ಷ್ಯ ಕೂಡ ಇದೆ ಎಂದಿದ್ದಾರೆ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರದ ಮೇಲೆಯೂ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ಬೊಮ್ಮಾಯಿ ಅವರು ಕೂಡ ನಾವು ನಿಮ್ಮ ಬೆಂಬಲಕ್ಕಿದ್ದೇವೆ, ಸ್ವಲ್ಪ ಸಮಯ ನೀಡಿ ಅಂತ ಅಭಯ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ದೆಹಲಿಗೆ ತೆರಳಿರುವ ಅವರು, ಅಮಿತ್​ ಶಾ ಅವರಲ್ಲಿ ಈ ಪ್ರಕರಣವನ್ನು ಆದಷ್ಟು ಬೇಗ ಸಿಬಿಐಗೆ ವರ್ಗಾಯಿಸುವಂತೆ ಮನವಿ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: 'ಮಹಾನಾಯಕನ ಮನೆಗೆ ಕಳುಹಿಸಿದ ಬಳಿಕ ರಾಜಕೀಯ ನಿವೃತ್ತಿ': ರಮೇಶ್ ಜಾರಕಿಹೊಳಿ ಶಪಥ

ಡಿಕೆಶಿ ವ್ಯಂಗ್ಯ: ನಿನ್ನೆಯಷ್ಟೇ (ಬುಧವಾರ) ಸಿಡಿ ಕೇಸ್ ಬಗ್ಗೆ ದೇವನಹಳ್ಳಿಯಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದ ಡಿ.ಕೆ.ಶಿವಕುಮಾರ್, "ರಮೇಶ್‌ ಜಾರಕಿಹೊಳಿ ಅವರು ಒತ್ತಡಕ್ಕೆ ಒಳಗಾಗಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ಸಿಗಬೇಕಿತ್ತು ಎನ್ನುವುದಿತ್ತು. ಆದರೆ, ಅವರ ಪಕ್ಷ ಕೊಡಲಿಲ್ಲ. ಆದಷ್ಟು ಬೇಗ ಅವರನ್ನು ಪಕ್ಷದವರು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಬೇಕು" ಎಂದು ವ್ಯಂಗ್ಯವಾಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಇದೀಗ ರಮೇಶ್ ಜಾರಕಿಹೊಳಿ ದೆಹಲಿಗೆ ಪ್ರಯಾಣಿಸಿದ್ದಾರೆ.

'ಸಿಡಿ ಮಹಾನಾಯಕನೇ ಡಿ.ಕೆ.ಶಿವಕುಮಾರ್': ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ರಮೇಶ್ ಜಾರಕಿಹೊಳಿ, "ಡಿ.ಕೆ.ಶಿವಕುಮಾರ್ ನನ್ನ ಬಗ್ಗೆ ಸ್ಪಷ್ಟವಾಗಿ ಮಾತನಾಡಿರುವ ಆಡಿಯೋ ಇದೆ. ಡಿಕೆಶಿ ಹಾಗೂ ಸಿಡಿ ಗ್ಯಾಂಗ್​ಗೆ ಶಿಕ್ಷೆ ಆಗಬೇಕು. ಸಿಡಿ ಮಹಾನಾಯಕನೇ ಡಿಕೆಶಿ​. ಅಧಿಕಾರಿಗಳ, ರಾಜಕಾರಣಿಗಳ ಸಾಕಷ್ಟು ವಿಡಿಯೋ ಅವರ ಬಳಿ ಇದೆ. ಈ ಮೂಲಕ ಬ್ಲಾಕ್​ಮೇಲ್​ ರಾಜಕಾರಣ ಮಾಡುತ್ತಿದ್ದಾರೆ. ಇಂಥವರಿಗೆ ಅಧಿಕಾರ ಕೊಟ್ಟರೆ ರಾಜ್ಯದ ಪರಿಸ್ಥಿತಿ ಹೇಗೆ" ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ನಿರ್ಮಾಪಕ ಸಂದೇಶ್ ನಾಗರಾಜ್ ರಾಜೀನಾಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.