ETV Bharat / state

ಶಾಸಕನ ಪುತ್ರನ ಮನೆ ಮೇಲೆ ದಾಳಿ: ಇದೊಂದು ಸಣ್ಣ ರೇಡ್​, ಲೋಕಾಕ್ಕೆ ಬಲ ತುಂಬಿದ್ದೇ ನಾವು : ಸಿಸಿ ಪಾಟೀಲ್ - Etv Bharat Kannada

ಲೋಕಾಯುಕ್ತ ಸಂಸ್ಥೆ ಸ್ವತಂತ್ರ ಸಂಸ್ಥೆ ಎಲ್ಲಿ ಆರೋಪಗಳಿರುತ್ತವೆ ಅಲ್ಲಿ ತನಿಖೆ ಮಾಡುವುದು ಲೋಕಾಯುಕ್ತದ ಕರ್ತವ್ಯ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ಸಿಸಿ ಪಾಟೀಲ್​
ಸಿಸಿ ಪಾಟೀಲ್​
author img

By

Published : Mar 3, 2023, 3:26 PM IST

Updated : Mar 3, 2023, 4:42 PM IST

ಲೋಕಾಯುಕ್ತ ದಾಳಿ ಬಗ್ಗೆ ಸಿಸಿ ಪಾಟೀಲ್​ ಹೇಳಿಕೆ

ಬೆಳಗಾವಿ: ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಲೋಕಾಯುಕ್ತ ದಾಳಿಗೆ ಕಾಂಗ್ರೆಸ್ ನವರು ಆರಂಭದಲ್ಲಿ ಖುಷಿ ಪಡಬಹುದು. ಆದರೆ, ಆ ಲೋಕಾಯುಕ್ತಕ್ಕೆ ಬಲ ತುಂಬಿದವರೇ ನಾವು ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಹೇಳಿದರು. ಅವರು ನಗರದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಮಾತನಾಡಿ, ತಮ್ಮ ಮೇಲಿನ ಪ್ರಕರಣಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್​ನವರು ಲೋಕಾಯುಕ್ತವನ್ನು ಮುಚ್ಚಿಹಾಕಿ ಎಸಿಬಿಯನ್ನು ರಚನೆ ಮಾಡಿದ್ದಾರೆ ಎಂದು ನ್ಯಾಯಮೂರ್ತಿ ಕೆಂಪಣ್ಣ ಅವರು ತೀರ್ಪಿನಲ್ಲಿ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊನ್ನೆ ಅಧಿವೇಶನದಲ್ಲಿ ಓದಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರ ಮೇಲೆ ಇನ್ನೂ ಲೋಕಾಯುಕ್ತದಲ್ಲಿ 50 ಪ್ರಕರಣಗಳು ಬಾಕಿ ಉಳಿದಿದೆ, ನಮ್ಮವರದು ಏನೋ ಒಂದು ಸಣ್ಣ ಪ್ರಕರಣ ಆಗಿದೆಯೆಂದು ಕಾಂಗ್ರೆಸ್ ನವರು ಖುಷಿ ಪಡಬಹುದು ಅವರು ಖುಷಿ ಪಡುವ ಅಗತ್ಯವಿಲ್ಲ ಗಾಜಿನ ಮನೆಯಲ್ಲಿ ಅವರು ಕುಳಿತಿದ್ದಾರೆ, ಲೋಕಾಯುಕ್ತಕ್ಕೆ ಒಳ್ಳೆ ದಾರಿಗೆ ತಂದವರು ನಾವು ಬಲ ತುಂಬಿದವರು ನಾವು ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು 800 ಎಕರೆ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ನ್ಯಾಯಮೂರ್ತಿ ಕೆಂಪಣ್ಣ ಅವರ ಆಯೋಗದಲ್ಲಿ ವರದಿಯಲ್ಲಿ ಉಲ್ಲೇಖವಾಗಿದೆ. ವರದಿಯನ್ನು ಯಾಕೆ ಇವರು ಸದನಕ್ಕೆ ಸಲ್ಲಿಸಲಿಲ್ಲ ಎಂದು ಸಚಿವರು ಕಾಂಗ್ರೆಸ್​​ನವರಿಗೆ ಪ್ರಶ್ನೆ ಮಾಡಿದರು. ಅವರೇ ರಚನೆ ಮಾಡಿರುವ ಕೆಂಪಣ್ಣನವರ ಆಯೋಗದ ಬಗ್ಗೆ 800 ಎಕರೆ ಡಿ ನೋಟಿಫಿಕೇಶನ್ ಬಗ್ಗೆ ಮೊನ್ನೆ ಸದನದಲ್ಲಿ ಸಿಎಂ ಪ್ರಸ್ತಾಪಿಸಿದ್ದಾರೆ. ಅದು ಚರ್ಚೆಗೆ ಬರುತ್ತದೆ ಎಂದು ಸಿದ್ದರಾಮಯ್ಯ ಅವರು ಸದನಕ್ಕೆ ಗೈರಾಗುತ್ತಾರೆ. ನಾನು ಇಲ್ಲದ ಸಮಯದಲ್ಲಿ ಮಾತನಾಡಿದ್ದಾರೆ ಎಂದು ವ್ಯರ್ಥ ಟೀಕೆಗಳನ್ನು ಮಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

40 ಪರ್ಸೆಂಟೇಜ್​ಗೆ ಇದು ಒಂದು ಸಾಕ್ಷಿ ಎಂಬ ಡಿಕೆಶಿ ಹೇಳಿಕೆ ವಿಚಾರ: ಕಳೆದ ಮೂರು ಅದಿವೇಶನದಿಂದ ಶೇ40ರಷ್ಟು ಎಂದು ಮಾತನಾಡುತ್ತಿದ್ದಾರೆ, ಸದನದಲ್ಲಿ ಇದರ ಬಗ್ಗೆ ಒಂದು ದಿನ ಆದರೂ ಚರ್ಚೆ ಮಾಡಿದ್ರಾ, ಬೆಳಗಾವಿ ಅಧಿವೇಶನದಿಂದ ಶೇ40ರಷ್ಟು ಕಮಿಷನ್​ ಎಂದು ಹೇಳುತ್ತಿದ್ದಾರೆ ಒಂದು ದಿನವಾದರೂ ಜವಾಬ್ದಾರಿತನ ಚರ್ಚೆ ಮಾಡುವುದನ್ನ ಬಿಟ್ಟು ಗಾಳಿಯಲ್ಲಿ ಗುಂಡು ಹಾರಿಸುವ ವ್ಯರ್ಥ ಪ್ರಯತ್ನ ಮಾಡುತ್ತಾರೆ ಎಂದು ಸಿ ಸಿ ಪಾಟೀಲ್ ಕಾಂಗ್ರೆಸ್ ನಾಯಕರು ವಿರುದ್ಧ ಅಸಮಾಧಾನ ಹೊರಹಾಕಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಲೋಕಾಯುಕ್ತ ದಾಳಿ ವಿಚಾರಕ್ಕೆ ಪ್ರತಿಕ್ರಿಯೆ: ಲೋಕಾಯುಕ್ತ ಸಂಸ್ಥೆ ಸ್ವತಂತ್ರ ಸಂಸ್ಥೆ, ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಎಲ್ಲಿ ಆರೋಪಗಳಿರುತ್ತವೆ ಅಲ್ಲಿ ತನಿಖೆ ಮಾಡುವುದು ಲೋಕಾಯುಕ್ತ ಕಾರ್ಯ ಎಂದು ಹೇಳಿದರು. ಈ ದಾಳಿ ಕಾಂಗ್ರೆಸ್ಸಿಗೆ ಯಾವುದೇ ಅಸ್ತ್ರವೂ ಆಗುವುದಿಲ್ಲ ಕಾಂಗ್ರೆಸ್ ನವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೆ ಯಾವುದೂ ಸಾಧನೆ ಇಲ್ಲ.

ಯಾವೊಬ್ಬ ವ್ಯಕ್ತಿ ಅಥವಾ ಅಧಿಕಾರಿ ತಪ್ಪು ಮಾಡಿದರೆ ಅದು ಪಕ್ಷಕ್ಕೆ ಬರುತ್ತಾ ಸಿದ್ದರಾಮಯ್ಯ ಸುಳ್ಳು ಆರೋಪ ಮಾಡೋದು ಬಿಟ್ಟರೆ ಅವರ ಜೀವನದಲ್ಲಿ ಬೇರೊಂದು ಏನು ಸಾಧನೆ ಮಾಡಿಲ್ಲ. ಸಿದ್ದರಾಮಯ್ಯನವರು ಅಷ್ಟೇ ಅಲ್ಲ ಕಾಂಗ್ರೆಸ್ ನವರು ಇದಕ್ಕಿಂತ ಹೀನಾಯ ಸ್ಥಿತಿಗೆ ಹೋಗುತ್ತದೆ, ಸಿದ್ದರಾಮಯ್ಯ ಒಳ್ಳೆ ಕೆಲಸ ಮಾಡಿದರೆ ಕಳೆದ ಚುನಾವಣೆಯಲ್ಲಿ ಯಾಕೆ ಸೋಲಾಯಿತು ಎಂದು ಸಚಿವರು ಪ್ರಶ್ನೆ ಮಾಡಿದರು. ಯಾರ ಮೇಲೆ ಲೋಕಾಯುಕ್ತದಾಳಿಯಾಗಿದೆ ಎಂಬುದು ಗೊತ್ತಿಲ್ಲ ನನಗೆ, ನಮ್ಮ ಸರ್ಕಾರ ಆ ತನಿಕೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಚಿವರು ಭರವಸೆ ನೀಡಿದರು.

ಲೊಕಾಯುಕ್ತ ದಾಳಿ ವಿಚಾರದಲ್ಲಿ ಪಕ್ಷಕ್ಕೆ ಯಾವುದೇ ಮುಜುಗರ ಇಲ್ಲ ಸಚಿವ ಎಸ್​​.ಟಿ ಸೋಮಶೇಖರ್ (ಮೈಸೂರು): ಶಾಸಕರ ಪುತ್ರನ ಮೇಲೆ ಲೊಕಾಯುಕ್ತ ದಾಳಿ ವಿಚಾರದಲ್ಲಿ ಪಕ್ಷಕ್ಕೆ ಯಾವುದೇ ಮುಜುಗರ ಇಲ್ಲ, ನಮ್ಮ ಸರ್ಕಾರ ಲೋಕಾಯುಕ್ತವನ್ನ ಬಲಪಡಿಸಿದ ಕಾರಣ ಇಂತಹ ದಾಳಿಗಳು ನಡೆಯುತ್ತಿವೆ‌. ಬಿಜೆಪಿ ಶಾಸಕನ ಮಗನ ಮೇಲಿನ ದಾಳಿಯ ಬಗ್ಗೆ ಸಚಿವ ಎಸ್ ಟಿ. ಸೋಮಶೇಖರ್ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ನಿಂದ ನನಗೆ ಯಾವುದೇ ಆಫರ್ ಬಂದಿಲ್ಲ : ಸಚಿವ ನಾರಯಣಗೌಡರಿಗೆ ಕಾಂಗ್ರೆಸ್ ನಿಂದ ಆಫರ್ ಬಂದಿದೆ ಎಂಬ ನಾರಾಯಣಗೌಡರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ, ನನಗೆ ಅಂತಹ ಯಾವುದೇ ಆಫರ್ ಬಂದಿಲ್ಲ, ಬಿಜೆಪಿ ಸರ್ಕಾರ ನನಗೆ ಒಳ್ಳೆಯ ಕೆಲಸ ಮಾಡಿ ಎಂದು ಜವಾಬ್ದಾರಿ ಕೊಟ್ಟಿದೆ. ಆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ ಎಂದು ಸಚಿವ ಸೋಮಶೇಖರ್ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಕೆಎಸ್​ಡಿಎಲ್​ ಅಧ್ಯಕ್ಷ ಸ್ಥಾನಕ್ಕೆ ವಿರೂಪಾಕ್ಷಪ್ಪ ಮಾಡಾಳ್​ ರಾಜೀನಾಮೆ

Last Updated : Mar 3, 2023, 4:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.