ಚಿಕ್ಕೋಡಿ : ನಿಪ್ಪಾಣಿ ತಾಲೂಕಿನ ಅಪ್ಪಾಚಿವಾಡಿ ತಿರುವು ಬಳಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ವೃದ್ಧರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಿಪ್ಪಾಣಿ ತಾಲೂಕಿನ ಹೊರವಲಯದಲ್ಲಿ ನಡೆದಿದೆ. ನಿಪ್ಪಾಣಿ ತಾಲೂಕಿನ ಬುದಿಹಾಳ ಗ್ರಾಮದ ಅಲ್ಲಾಬಕ್ಷ ಅಬ್ದುಲ್‌ಫಕೀರ ಮಕಾನದಾರ (60) ಮೃತ ಪಟ್ಟವರು.
![one deid](https://etvbharatimages.akamaized.net/etvbharat/images/kn_ckd_21419_accident_sanjay1_pho1_2104digital_00146_950.jpg)
ನಗರದಿಂದ ಕೋಲ್ಹಾಪುರದ ಕಡೆ ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಹೊಡೆದ ಪರಿಣಾಮ ಸವಾರ ಅಲ್ಲಾಬಕ್ಷ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಈ ಕುರಿತು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.