ಬೆಳಗಾವಿ : ಅಭಿವೃದ್ಧಿ ಹೊಂದುತ್ತಿರುವ ಬೆಳಗಾವಿ ಲೊಕಸಭಾ ಕ್ಷೇತ್ರ ಇನ್ನಷ್ಟು ಸುಂದರವಾಗಲು ಮಂಗಳಾ ಸುರೇಶ್ ಅಂಗಡಿ ಆಯ್ಕೆ ಮಾಡಬೇಕೆಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಸಾಂಬ್ರಾ ಗ್ರಾಮದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶವನ್ನು ಅಭಿವೃದ್ಧಿ ಪಡಿಸುತ್ತಿರುವ ನರೇಂದ್ರ ಮೋದಿಜಿಯವರಿಗೆ ಬೆಳಗಾವಿ ಲೊಕಸಭಾ ಕ್ಷೇತ್ರ ಬಿಜೆಪಿ ಗೆಲ್ಲುವ ಮೂಲಕ ಕರ್ನಾಟಕದಿಂದ ಮೊತ್ತೊಮ್ಮೆ ಜಯದ ಕೃತಜ್ಞತೆ ಸಲ್ಲಿಸಬೇಕು ಎಂದರು.
ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಸರಳ ಸಜ್ಜನ ನಿಷ್ಕಳಂಕ ರಾಜಕಾರಣಿ ಸುರೇಶ ಅಂಗಡಿ ಅಭಿವೃದ್ಧಿ ಕನಸು ನನಾಸಗಿಸಲು ಮಂಗಳಾ ಸುರೇಶ್ ಅಂಗಡಿ ಆಯ್ಕೆ ಮಾಡಬೇಕು ಎಂದರು. ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಇರುವ ಗೌರವ ಸ್ಥಾನ ಬಿಜೆಪಿಯಲ್ಲಿ ಮಾತ್ರ ಕಾಣಬಹುದು.
ರಾಣಿ ಚೆನ್ನಮ್ಮನ ನಾಡಿನಲ್ಲಿ ಬಿಜೆಪಿಯಿಂದ ಮಹಿಳೆಯರಿಗೆ ಸಂಸದರಾಗಿ ಆಯ್ಕೆಯಾಗುವ ಅವಕಾಶ ಕಲ್ಪಿಸಿದೆ. ನಮ್ಮ ಮತವನ್ನು ಮಂಗಳಾ ಅವರಿಗೆ ನೀಡುವುದರ ಮೂಲಕ ಅತ್ಯಧಿಕ ಮತಗಳಿಂದ ಅಯ್ಕೆ ಮಾಡಿ ಅಂಗಡಿಯವರ ಋಣ ತೀರಿಸೋಣ ಎಂದರು.
ದೇಶದ ಬದಲಾವಣೆಗಾಗಿ ಬಯಸುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ ಬಿಜೆಪಿಯಾಗಿದೆ. ಕಾರ್ಯಕರ್ತರು ಬದಲಾವಣೆಗಾಗಿ ಬಿಜೆಪಿ ಸಂಸದರನ್ನು ಆಯ್ಕೆಮಾಡಲು ಪರಿಶ್ರಮವಹಿಸಬೇಕೆಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.