ETV Bharat / state

ಮೋದಿ ಆಡಳಿತ ಮೆಚ್ಚಿ ಜನ ಅಧಿಕಾರ ನೀಡಿದ್ದಾರೆ: ಮಹಾಂತೇಶ್ ದೊಡ್ಡಗೌಡರ್ - ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆ

ಕಿತ್ತೂರು ಉತ್ಸವದಲ್ಲಿ ನಿನ್ನೆ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು. ಬಳಿಕ ಮಾತನಾಡಿದ ಶಾಸಕ ಮಹಾಂತೇಶ್ ದೊಡ್ಡಗೌಡರ್ ಕೆಲವು ಬಾರಿ ಸ್ಥಳೀಯ ವ್ಯಕ್ತಿಗಳನ್ನು ನೋಡಿ ಜನ ಮತ ನೀಡಿರುತ್ತಾರೆ. ಎರಡು ರಾಜ್ಯಗಳಲ್ಲಿ ನಮ್ಮ ಸರ್ಕಾರಗಳು ಹಿಂದೆ ಮಾಡಿದ ಕೆಲಸಕ್ಕೆ ಬಿಜೆಪಿಗೆ ಅಧಿಕಾರ ಬಂದಿದೆ ಎಂದರು.

ಕಿತ್ತೂರು ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು
author img

By

Published : Oct 25, 2019, 10:45 AM IST

ಬೆಳಗಾವಿ: ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸ್ವಲ್ಪ ಹಿನ್ನೆಡೆಯಾಗಿದ್ದರೂ, ನರೇಂದ್ರ ಮೋದಿಯವರ ಆಡಳಿತ ಮೆಚ್ಚಿ ಜನ ಅಧಿಕಾರ ನೀಡಿದ್ದಾರೆ ಎಂದು ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರ್ ಹೇಳಿದ್ದಾರೆ.

ನಿನ್ನೆ ಕಿತ್ತೂರು ಉತ್ಸವದಲ್ಲಿ ಮಾತನಾಡಿದ ಶಾಸಕ ಮಹಾಂತೇಶ್ ದೊಡ್ಡಗೌಡರ್, ಕೆಲವು ಬಾರಿ ಸ್ಥಳೀಯ ವ್ಯಕ್ತಿಗಳನ್ನು ನೋಡಿ ಜನ ಮತ ನೀಡಿರುತ್ತಾರೆ. ಎರಡು ರಾಜ್ಯಗಳಲ್ಲಿ ನಮ್ಮ ಸರ್ಕಾರಗಳು ಹಿಂದೆ ಮಾಡಿದ ಕೆಲಸಕ್ಕೆ ಬಿಜೆಪಿಗೆ ಅಧಿಕಾರ ಬಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುವ ವಿಶ್ವಾಸ ಇದೆ ಎಂದರು.

ಕಿತ್ತೂರು ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು

ಕಿತ್ತೂರು ಉತ್ಸವಕ್ಕೆ ಮುಖ್ಯಮಂತ್ರಿ ಬಂದರೆ ಅಧಿಕಾರ ಹೋಗುತ್ತದೆ ಎಂಬ ನಂಬಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು ಕಿತ್ತೂರು ಉತ್ಸವದಲ್ಲಿ ಪಾಲ್ಗೊಂಡು ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಸುಳ್ಳು. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕೆ ಕಿತ್ತೂರಿನ ಚನ್ನಮ್ಮ ಮೂರ್ತಿಗೆ ಹಾರ ಹಾಕಿದ್ದರು ಎಂದರು.

ಕಿತ್ತೂರು ಉತ್ಸವದಲ್ಲಿ ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು:

ಐತಿಹಾಸಿಕ ಕಿತ್ತೂರು ಉತ್ಸವದ ಎರಡನೇ ದಿನವಾದ ನಿನ್ನೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಬೆಳವಡಿ ಮಲ್ಲಮ್ಮ ಮಾಡಿದ ತ್ಯಾಗ ಹಾಗೂ ಬೆಳವಡಿ ರಾಣಿ ಮಲ್ಲಮ್ಮನ ಜೀವನ ಚರಿತ್ರೆಯನ್ನು ಬೆಳವಡಿಯ ಕೆ.ಜಿ.ಎನ್ ತಂಡದ ಮಕ್ಕಳು ನೃತ್ಯದ ಮೂಲಕ ಪ್ರದರ್ಶಿಸಿದರು.

Intro:ಕಿತ್ತೂರು ಉತ್ಸವದಲ್ಲಿ ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು

ಬೆಳಗಾವಿ : ಐತಿಹಾಸಿಕ ಕಿತ್ತೂರು ಉತ್ಸವದ ಇಂದು ಎರಡನೇ ದಿನ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಬೆಳವಡಿ ಮಲ್ಲಮ್ಮ ಮಾಡಿದ ತ್ಯಾಗ ಹಾಗೂ ಬೆಳವಡಿ ರಾಣಿ ಮಲ್ಲಮ್ಮನ ಜೀವನ ಚರಿತ್ರೆಯನ್ನು
ಬೆಳವಡಿಯ ಕೆ.ಜಿ.ಎನ್ ತಂಡದ ಮಕ್ಕಳು ನೃತ್ಯದ ಮೂಲಕ ಪ್ರದರ್ಶಿಸಿದರು.
ಕೆ.ಜಿ.ಎನ್ ತಂಡದವರಿಗೆ ಕಿತ್ತೂರಿನ ಶಾಸಕರಾದ ಮಹಾಂತೇಶ ದೊಡ್ಡಗೌಡರು ಅವರು ಸ್ಮರಣಿಕೆಯನ್ನು ನೀಡಿದರು.

Body:ಉಮೇಶ ಇಟಗಿ ಮತ್ತು ಅವರ ತಂಡದವರು ತಬಲಾ ಮತ್ತು ಹಾರ್ಮೋನಿಯಂದೊಂದಿಗೆ ಜನರಿಗೆ ಹಿಂದೂಸ್ತಾನಿ ಸಂಗೀತ ರಸದೌತಣ ಉಣಬಡಿಸಿದರು. ಸಿ.ಕೆ.ಮೆಕ್ಕೆದ, ವಕ್ಕುಂದ ರಂಗಭೂಮಿ ಹಾಗೂ ಜಾನಪದ ಕಲಾವಿದರುಗಳಿಂದ ಜಾನಪದ ಹಾಡು, ಕುಂದಾಪುರದ ಕಲಾವಿದರಿಂದ ಸ್ಟೆಪ್ ಒನ್ ಸ್ಟೆಪ್ ಡಾನ್ಸ್ ಧಮಾಕಾ ಕಾರ್ಯಕ್ರಮ, ಬೆಂಗಳೂರಿನ ವಿದುಷಿಸ ಅಶ್ವಿನಿ ಸುರೇಶ ತಂಡದವರಿಂದ ಸಮೂಹ ನೃತ್ಯ ಕಾರ್ಯಕ್ರಮಗಳು ನಡೆದವು.

Conclusion:ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.