ಬೆಳಗಾವಿ: ಉಪಚುನಾವಣೆ ಹಿನ್ನೆಲೆಯಲ್ಲಿ ನಾಳೆ ಕುಂದಗೋಳ ಕ್ಷೇತ್ರಕ್ಕೆ ತೆರಳಿ ಪ್ರಚಾರ ನಡೆಸುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಪ್ರಚಾರದ ಸಂದರ್ಭದಲ್ಲಿಯೂ ನಾಲ್ಕೈದು ಬಾರಿ ಕುಂದಗೋಳಕ್ಕೆ ಹೋಗುತ್ತೇನೆ ಎಂದರು. ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ನಮ್ಮ ಕುಟುಂಬದ ಎಲ್ಲರಿಗೂ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಆತನ ವಿರುದ್ಧ ನಮ್ಮ ಕುಟುಂಬದ ಎಲ್ಲಾ ಸದ್ಯಸ್ಯರು ಮಾತನಾಡುವಂತಾಗಿದೆ ಎಂದರು.