ETV Bharat / state

ಸಾರಿಗೆ ಸಂಸ್ಥೆಗಳ ನೌಕರರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಸ್ ಚಾಲಕ ಸಾವು.. - belagavi bus driver died news

belagavi
ಸಾವನ್ನಪ್ಪಿದ ಚಾಲಕ
author img

By

Published : Dec 12, 2020, 12:01 PM IST

Updated : Dec 12, 2020, 12:29 PM IST

11:57 December 12

ಸಾರಿಗೆ ನೌಕರರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಸ್ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ..

ಬೆಳಗಾವಿ : ಸಾರಿಗೆ ಸಂಸ್ಥೆಗಳ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಆಗ್ರಹಿಸಿ ನಿನ್ನೆಯ ಹೋರಾಟದಲ್ಲಿ ಭಾಗಿಯಾಗಿದ್ದ ಬಸ್ ಚಾಲಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ವಡಗಾವಿಯ ನಿವಾಸಿ ದತ್ತಾ ಮಂಡೋಲ್ಕರ್(58) ಹೃದಯಾಘಾತದಿಂದ ಸಾವನ್ನಪ್ಪಿದ ದುರ್ದೈವಿ. ಇವರು ಬೆಳಗಾವಿ ಮಹಾನಗರ ಸಾರಿಗೆ ಬಸ್ ಚಾಲಕನಾಗಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.

ಸಾರಿಗೆ ಸಂಸ್ಥೆಗಳ ನೌಕರರು ನಿನ್ನೆಯಿಂದ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮನೆಗೆ ತೆರಳಿದ್ದರು. ಆದರೆ, ಮನೆಯಲ್ಲಿದ್ದ ವೇಳೆ ಏಕಾಏಕಿ ಎದೆ ನೋವು ಕಾಣಿಸಿದೆ. ಇನ್ನೇನು ಆಸ್ಪತ್ರೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಮನೆಯಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Last Updated : Dec 12, 2020, 12:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.