ETV Bharat / state

ಕುಂದಾನಗರಿಯಲ್ಲಿ ಬೆಳಂಬೆಳಗ್ಗೆ ಹರಿಯಿತು ನೆತ್ತರು; ಕಾರದ ಪುಡಿ ಎರಚಿ ಬಿಲ್ಡರ್ ಬರ್ಬರ ಹತ್ಯೆ

ಬೆಳಂಬೆಳಗ್ಗೆ ಕುಂದಾನಗರಿ ಬೆಳಗಾವಿಯಲ್ಲಿ ಕಾರದ ಪುಡಿ ಎರಚಿ ಬಿಲ್ಡರ್​ವೊಬ್ಬರನ್ನು ಬರ್ಬರ ಹತ್ಯೆಮಾಡಿರುವ ಘಟನೆ ಬೆಚ್ಚಿಬೀಳಿಸಿದೆ.

Builder murder in Belagavi, Belagavi crime news, Builder Raju Doddabasannanavar murder, ಬೆಳಗಾವಿಯಲ್ಲಿ ಬಿಲ್ಡರ್​ ಕೊಲೆ, ಬೆಳಗಾವಿ ಅಪರಾಧ ಸುದ್ದಿ, ಬಿಲ್ಡರ್​ ರಾಜು ದೊಡ್ಡಬಸವಣ್ಣನವರ ಕೊಲೆ,
ಬಿಲ್ಡರ್ ರಾಜು ದೊಡ್ಡಬಣ್ಣವರ ಕೊಲೆ
author img

By

Published : Mar 15, 2022, 11:07 AM IST

Updated : Mar 15, 2022, 1:02 PM IST

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ‌ಬೆಳಂಬೆಳಗ್ಗೆ ನೆತ್ತರು ಹರಿದಿದೆ. ಕಣ್ಣಿಗೆ ಕಾರದ ಪುಡಿ ಎರಚಿ ವ್ಯಕ್ತಿಯನ್ನು ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನಗರದ ಗುರುಪ್ರಸಾದ್ ಕಾಲೊನಿಯಲ್ಲಿ ಈ ಘಟನೆ ನಡೆದಿದೆ. ಬಿಲ್ಡರ್ ರಾಜು ದೊಡ್ಡಬಣ್ಣವರ (46) ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಬಿಲ್ಡರ್ ರಾಜು ದೊಡ್ಡಬಣ್ಣವರ ಕೊಲೆ

‌ಬಸ್ತವಾಡ ಗ್ರಾಮದ ರಾಜು ಸದ್ಯ ಭವಾನಿ ನಗರದಲ್ಲಿ ‌ವಾಸವಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ನಿ ನೋಡಲು ಬೆಳಗ್ಗೆ ರಾಜು ತಮ್ಮ ಕಾರಿನಲ್ಲಿ ಹೊರಟಿದ್ದರು. ಆಗ ರಾಜು ಅವರ ಕಾರು ತಡೆದಿರುವ ದುಷ್ಕರ್ಮಿಗಳು ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಸ್ಥಳದಿಂದ ‌ಪರಾರಿಯಾಗಿದ್ದಾರೆ.

ಓದಿ: ಹಿಜಾಬ್ ನಿರ್ಬಂಧ ಪ್ರಶ್ನಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿದ ತ್ರಿಸದಸ್ಯ ಪೀಠ: ಸರ್ಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್​

ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವ ಕಂಡ ವಾಯುವಿಹಾರ ಮಾಡುತ್ತಿದ್ದ ಸ್ಥಳೀಯರು ಗ್ರಾಮೀಣ ‌ಠಾಣೆ‌‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದರು. ಹತ್ಯೆಗೆ ಹಳೇ ದ್ವೇಷ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಘಟನೆ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Mar 15, 2022, 1:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.