ETV Bharat / state

ಬಿಎಸ್‌ವೈ ಪದಚ್ಯುತಿ: ಮುಂದಿನ ದಿನಗಳಲ್ಲಿ ಬಿಜೆಪಿಗೆ ಪೆಟ್ಟು ಎಂದ ರಂಭಾಪುರಿ ಶ್ರೀ

ಬಿಎಸ್‌ವೈ ಪದಚ್ಯುತಿಯಿಂದ ಮುಂದಿನ ದಿನಗಳಲ್ಲಿ ಬಿಜೆಪಿಗೆ ಬಹಳಷ್ಟು ಪೆಟ್ಟು ಬೀಳುವುದರಲ್ಲಿ ಸಂದೇಹವೇ ಇಲ್ಲ. ಮುಂದೆ ಯಾವುದೇ ಸಮುದಾಯದ ಸಿಎಂ ಆಗಲಿ ಎಲ್ಲರನ್ನೂ ಕಟ್ಟಿಕೊಂಡು ಅಭಿವೃದ್ಧಿ ಕೆಲಸ ಮಾಡಲಿ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದ್ದಾರೆ.

ರಂಭಾಪುರಿ ಶ್ರೀ
ರಂಭಾಪುರಿ ಶ್ರೀ
author img

By

Published : Jul 27, 2021, 7:53 PM IST

ಬೆಳಗಾವಿ: ರಾಜ್ಯದಲ್ಲಿ ಬಿ ಎಸ್‌ ಯಡಿಯೂರಪ್ಪ ಅವರ ಪದಚ್ಯುತಿಯಿಂದ ಮುಂದಿನ ದಿನಗಳಲ್ಲಿ ಬಿಜೆಪಿಗೆ ಬಹಳಷ್ಟು ಪೆಟ್ಟು ಬೀಳುವುದರಲ್ಲಿ ಸಂದೇಹವೇ ಇಲ್ಲ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಸಿಎಂ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ವಿಚಾರಕ್ಕೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಧರ್ಮಪೀಠದ ಜಗದ್ಗುರು ಆಗಿ ರಾಜಕೀಯ ವಿಚಾರ ಮಾತನಾಡಲು ಇಚ್ಛೆ ಪಡಲ್ಲ. ಆದ್ರೆ, ರಾಜ್ಯಕ್ಕೆ ಯಡಿಯೂರಪ್ಪರಂತ ದಕ್ಷ, ಕ್ರಿಯಾಶೀಲ ವ್ಯಕ್ತಿ ಸಿಗೋದು ಬಹಳ ಕಷ್ಟ.‌ ಯಡಿಯೂರಪ್ಪ ಪಕ್ಷಕ್ಕಾಗಿ, ರಾಜ್ಯದ ಅಭಿವೃದ್ಧಿಗಾಗಿ ಶ್ರಮಪಟ್ಟಿದ್ದು‌ ಎಲ್ಲರಿಗೂ ಗೊತ್ತಿದೆ. ವಯಸ್ಸಾಗಿದ್ದರೂ ಉಳಿದಂತಹ ಅವಧಿ ಕೊಟ್ಟಿದ್ರೆ ಚೆನ್ನಾಗಿರುತ್ತಿತ್ತು. ಇದು ಕೇವಲ ಮಠಾಧೀಶರ ಭಾವನೆಯಲ್ಲ, ಎಲ್ಲ ಸಮುದಾಯದವರ ಭಾವನೆ ಆಗಿತ್ತು. ಆಷಾಢ ಕಳೆದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೆ ಸಮಾಧಾನ ಇರ್ತಿತ್ತು ಎಂದರು.

ರಂಭಾಪುರಿ ಶ್ರೀ ಸಲಹೆ

ಎರಡನೇ ವರ್ಷದ ಸಾಧನಾ ಸಮಾವೇಶದಲ್ಲಿ ಮನಸ್ಸಿಗೆ ಆಘಾತವಾಗುವಂತ ವಿಚಾರ ಬಿಚ್ಚಿಟ್ಟು ಬಿಎಸ್​ವೈ ರಾಜೀನಾಮೆ ಸಲ್ಲಿಸಿದ್ರು. ಪಕ್ಷದ ಆದೇಶ ಪಾಲಿಸುವ ದೊಡ್ಡ ಗುಣವನ್ನು ಯಡಿಯೂರಪ್ಪ ಅವರಲ್ಲಿ ಕಾಣುತ್ತಿದ್ದೇವೆ. ಪಕ್ಷದ ರಾಷ್ಟ್ರೀಯ ನಾಯಕರ ಆದೇಶಕ್ಕೆ ಬದ್ಧ ಅಂತಾ ಸದಾ ಹೇಳುತ್ತಿದ್ರು. ಎಸ್‌ವೈರಂತ ಸಮರ್ಥ ವ್ಯಕ್ತಿಯನ್ನು ಸಿಎಂ ಮಾಡುವ ನಿರ್ಧಾರವನ್ನು ರಾಷ್ಟ್ರೀಯ ನಾಯಕರು ಮಾಡಬಹುದು. ಬಿಎಸ್‌ವೈ ಆದರ್ಶ ಮುಂದಿಟ್ಟುಕೊಂಡು ಹೊಸ ಸಿಎಂ ಆಗುವ ಮುಖಂಡರು ಕನ್ನಡ ನಾಡಿನ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ಅಭಿವೃದ್ಧಿ ಕೆಲಸ ಮಾಡಲಿ ಅಂತಾ ಹಾರೈಸುವೆ. ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ್ರು ಎಲ್ಲರೂ ಅಂದುಕೊಂಡ ಹಾಗೇ ಸಿಎಂ ಆದ್ರು. ಬಿಎಸ್‌ವೈ ಅವರನ್ನೇ ಸಿಎಂ ಆಗಿ ಮುಂದುವರಿಸಿದ್ರೆ ಚೆನ್ನಾಗಿತ್ತು. ವೀರಶೈವ ಧರ್ಮದ ವ್ಯಕ್ತಿಯಾದ್ರೂ ಇಡೀ ಸಮಾಜದ ಭಾವನೆ ಅರ್ಥಮಾಡಿಕೊಂಡು ಸ್ಪಂದಿಸಿ ಕೆಲಸ ಮಾಡುವ ಸಿಎಂ ಆಗಿದ್ರು. ಬೇರೆ ಪಕ್ಷದವರು ಬಿಎಸ್‌ವೈ ಉತ್ತಮ ಗುಣಗಳನ್ನು ಕೊಂಡಾಡಿದ್ದಾರೆ ಎಂದರು.

ಅನ್ಯರು ಹಗೆಗಳಾದರೆ ಬಾಳಬಹುದು, ತನ್ನವರು ಹಗೆಗಳಾದ್ರೆ ಬಾಳಲಾಗದು. ಅದರಂತೆ ಹೊರಗಿನ ವೈರಿಗಳಿಗಿಂತ ಬಿಎಸ್‌ವೈ‌ಗೆ ಅವರ ಪಕ್ಷದವರೇ ವೈರಿಗಳಾಗಿ ಕೆಲಸ ಮಾಡಿದ್ದು ಮೇಲ್ನೋಟಕ್ಕೆ ಎಲ್ಲರಿಗೂ ಗೊತ್ತಿದೆ. ಆ ನೋವನ್ನು ರಾಷ್ಟ್ರೀಯ ನಾಯಕರು ಯಾವ ರೀತಿ ಸರಿಪಡಿಸುತ್ತಾರೋ, ಮುಂದಿನ ದಿನಗಳಲ್ಲಿ ಏನು ಸ್ಥಾನಮಾನ ಕೊಟ್ಟು ಗೌರವಿಸುತ್ತಾರೆ ಎಂಬುದರಲ್ಲಿ ಮುಂದಿನ ಭವಿಷ್ಯ ನಿರ್ಧಾರವಾಗಬಹುದು. ಮುಂದೆ ಯಾವುದೇ ಸಮುದಾಯದವರು ಸಿಎಂ ಆಗಲಿ. ಎಲ್ಲರನ್ನೂ ಕಟ್ಟಿಕೊಂಡು ಅಭಿವೃದ್ಧಿ ಕೆಲಸ ಮಾಡಲಿ ಎಂದು ರಂಭಾಪುರಿ ಸ್ವಾಮೀಜಿ ಸಲಹೆ ನೀಡಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.