ETV Bharat / state

ಲಕ್ಷ್ಮಣ ಸವದಿ ಹಣಿಯಲು ಒಂದಾದ ಬಿಎಸ್​ವೈ- ಯತ್ನಾಳ್..!

author img

By

Published : Apr 26, 2023, 5:05 PM IST

''ಬಿಜೆಪಿಗೆ ಸವದಿ, ಶೆಟ್ಟರ್ ದ್ರೋಹ ಮಾಡಿದ್ದಾರೆ. ಸವದಿಯ ವಿಧಾನ ಪರಿಷತ್ ಸ್ಥಾನದ ಅವಧಿ ಬಾಕಿಯಿರುವಾಗಲೇ ಬಿಜೆಪಿಗೆ ಬೆನ್ನಿಗೆ ಚೂರಿ ಹಾಕಿದ್ದಾರೆ'' ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Former CM BS Yeddyurappa
ಲಕ್ಷ್ಮಣ ಸವದಿ ಹಣಿಯಲು ಒಂದಾದ ಬಿಎಸ್​ವೈ- ಯತ್ನಾಳ್

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು.

ಚಿಕ್ಕೋಡಿ: ''ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವ ಜವಾಬ್ದಾರಿ ನಾನು ತಗೋಳ್ತಿನಿ, ಲಕ್ಷ್ಮಣ ಸವದಿ ಮಣಿಸುವ ಜವಾಬ್ದಾರಿ ಅಥಣಿ ಜನತೆ ನೀವು ತೆಗೆದುಕೊಳ್ಳಬೇಕು. ಲಕ್ಷ್ಮಣ ಸವದಿ ನಮಗೆ ಮೊಸ ಮಾಡಿ ಹೋಗಿದ್ದಾರೆ'' ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸವದಿ ವಿರುದ್ಧ ಗುಡುಗಿದರು.

ಬಿಜೆಪಿ ಬೆನ್ನಿಗೆ ಚೂರಿ ಹಾಕಿದ ಸವದಿ: ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಪರವಾಗಿ ಪ್ರಚಾರ ಸಮಾರಂಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ''ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು ಈಡೀ ದೇಶದಲ್ಲಿ ಅವರು ನೆಲಸಮವಾಗಿದ್ದಾರೆ. ದೇಶದಲ್ಲಿ ಕಾಂಗ್ರೆಸ್​ ಬಗ್ಗೆ ತಿರಸ್ಕಾರ ಭಾವ ಮೂಡಿದೆ. ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮುಂದೆ ಸಮಾನ ಆಗಲು ಆಗುತ್ತಾ ಎಂದು ಪ್ರಶ್ನಿಸಿದರು. ಅವರಿಗೂ ಇವರಿಗೂ ಅಜಗಜಾಂತರ ಇದೆ. ನಮಗೆ ಸವದಿ, ಶೆಟ್ಟರ್ ದ್ರೋಹ ಮಾಡಿದ್ದಾರೆ. ಸವದಿಯ ವಿಧಾನ ಪರಿಷತ್ ಸ್ಥಾನದ ಅವಧಿ ಬಾಕಿಯಿರುವಾಗಲೇ ಬಿಜೆಪಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

130ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಬಿಜೆಪಿ: ''ಉರಿಬಿಸಿಲಿನಲ್ಲಿ ಇಷ್ಟೊಂದು ಜನಸಾಗರ ಸೇರಿರೋದು ನೋಡಿದ್ರೆ ಸವದಿ ಮನೆಗೆ ಹೋಗೋದು ಗ್ಯಾರಂಟಿ. ನಾನು ಸಿಎಂ ಆಗಿದ್ದಾಗ ಅಥಣಿಗೆ ಬಹಳಷ್ಟು ಅನುದಾನ ನೀಡಿದ್ದೇನೆ. ಮಹೇಶ ಕುಮಟಳ್ಳಿಯನ್ನು 25 ಸಾವಿರಕ್ಕಿಂತಲೂ ಅಧಿಕ ಮತಗಳಿಂದ ಗೆಲ್ಲಿಸಬೇಕು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. 130ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೇರಲಿದೆ'' ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.

ಡಿಸಿಸಿ ಬ್ಯಾಂಕಿಗೆ ರಾಜೀನಾಮೆ ನೀಡುತ್ತೇವೆ- ರಮೇಶ್ ಜಾರಕಿಹೊಳಿ: ''ಮಹೇಶ್ ಕುಮಟಳ್ಳಿ ಮೃದುತನ ಬಿಡಬೇಕು. ಯತ್ನಾಳ್ ತರಾ ನೀವು ಬದಲಾವಣೆ ಆಗಬೇಕು'' ಎಂದು ಮಹೇಶ್ ಕುಮಟಳ್ಳಿ ಅವರಿಗೆ ರಮೇಶ್ ಜಾರಕಿಹೊಳಿ ಕಿವಿ ಮಾತು ಹೇಳಿದರು. ''ನಾವು ಈ ಚುನಾವಣೆ ಮುಗಿದ ಮೇಲೆ ಡಿಸಿಸಿ ಬ್ಯಾಂಕಿಗೆ ರಾಜೀನಾಮೆ ನೀಡುತ್ತೇವೆ. ಇದೇ 14 ರಂದು ರಾಜೀನಾಮೆ ಕೊಡುತ್ತೇವೆ. ಸಹಕಾರಿ ಸಂಘ ಇಟ್ಟಿಕೊಂಡು ಸವದಿ ದಬ್ಬಾಳಿಕೆ ಮಾಡುತ್ತಿದ್ದಾನೆ. ಅದು ಸಹಕಾರಿ ಸಂಘದಿಂದ ಹಣ ಸವದಿ ಅಪ್ಪನ ಮನೆದು ಅಲ್ಲ. ನಾವು ಆ ಸಹಕಾರ ಸಂಘಕ್ಕೆ ರಾಜೀನಾಮೆ ನೀಡಿ ಮರು ಚುನಾವಣೆ ಮಾಡುತ್ತೇವೆ. ಸವದಿ ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್ ಸದಸ್ಯರಾಗಿ ದಬ್ಬಾಳಿಕ್ಕೆ ಮಾಡಿದ್ದಾರೆ. ನಾವು ಅದಕ್ಕೆ ರಾಜಿನಾಮೆ ನೀಡುತ್ತೇವೆ. ಮತ್ತೋಮ್ಮೆ ಚುನಾವಣೆ ನಡೆಯುತ್ತದೆ. ಇದರಿಂದ ಸವದಿ ಹೊರಗೆ ಉಳಿಯುತ್ತಾನೆ ಎಂದು ಏಕ ವಚನದಲ್ಲಿ ಸವದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ ವಿರುದ್ಧ ಯತ್ನಾಳ್ ಗರಂ: ಅಥಣಿಯಲ್ಲಿ 2,700 ಕೋಟಿ ರೂ. ಅನುದಾನವನ್ನು ತರಲಾಗಿದೆ. ಸ್ಥಳೀಯ ಶಾಸಕರನ್ನು ಬಿಟ್ಟು ಭೂಮಿ ಪೂಜೆ ಮಾಡುವ ಹೊಸ ವಿಧಾನ ಅಥಣಿಯಲ್ಲಿ ಪ್ರಾರಂಭವಾಗಿತ್ತು ಎಂದು ಪರೋಕ್ಷವಾಗಿ ಲಕ್ಷ್ಮಣ್ ಸವದಿ ವಿರುದ್ಧ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು. ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ವಿರೋಧ ಮಾಡಿದವರು ಹೊರಗೆ ಹೋಗಿದ್ದಾರೆ. ಮುಸ್ಲಿಂ ಸಮುದಾಯ ಮೀಸಲಾತಿಯಲ್ಲಿ ಬದಲಾವಣೆ ಮಾಡಲಾಗಿದೆ. ತಲಾ ಎರಡು ಪ್ರತಿಶತದಂತೆ ಲಿಂಗಾಯತ, ಒಕ್ಕಲಿಗ ಸಮಾಜಕ್ಕೆ ಮೀಸಲಾತಿ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದರೆ ಮೀಸಲಾತಿ ವಾಪಸ್ ಪಡೆಯುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ. ಮೀಸಲಾತಿ ವಾಪಸ್ ಹೋಗಬಾರದು ಎಂದರೆ, ನೀವು ಬಿಜೆಪಿಗೆ ಮತ ನೀಡಿ ಎಂದು ಮಾಜಿ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ವಿರುದ್ಧ ಗರಂ ಆದರು.

ಎಲ್ಲ ಅನುಭವಿಸಿ ಪಕ್ಷ ಬಿಟ್ಟ ಶೆಟ್ಟರ್, ಸವದಿ: ''ಜಗದೀಶ್ ಶೆಟ್ಟರ್, ಸವದಿ ಎಲ್ಲವನ್ನೂ ಅನುಭವಿಸಿ ಪಕ್ಷ ಬಿಟ್ಟರು. ಸವದಿಗೆ ಜನರು ತಕ್ಕ ಬುದ್ಧಿ ಕಲಿಸಬೇಕು'' ಎಂದ ಅವರು, ನಮ್ಮ ಲಿಂಗಾಯತ ಸಮುದಾಯಕ್ಕೆ ಸಿದ್ದರಾಮಯ್ಯ ಅನುಮಾನ ಮಾಡಿದ್ದಾರೆ. ಅವರಿಗೆ ನಾವು ತಕ್ಕ ಪಾಠ ಕಲಿಸಬೇಕು. ಲಿಂಗಾಯತರು ನಾವು ಸ್ವಾಭಿಮಾನಿಗಳು, ಕಾಂಗ್ರೆಸ್​ನವರಿಗೆ ಒಂದೇ ಒಂದು ಮತ ಹಾಕಬಾರದು'' ಎಂದು ಯತ್ನಾಳ್​ ಕರೆ ನೀಡಿದರು.

ಇದನ್ನೂ ಓದಿ: ಜಗದೀಶ್ ಶೆಟ್ಟರ್ ಎಂಬ ಬಡಪಾಯಿ ಮೇಲೆ ಯಾಕಿಷ್ಟು ಮುಗಿ ಬೀಳುತ್ತಿದ್ದಾರೆ ಗೊತ್ತಿಲ್ಲ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.