ETV Bharat / state

ಯೋಧನಿಗೆ ಬಾಸುಂಡೆ ಬರುವ ಹಾಗೆ ಹೊಡೆದ ಪೊಲೀಸರು; ಫೋಟೋ ವೈರಲ್​

ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕೆ ಹಾಗೂ ಪೇದೆ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಇತ್ತೀಚೆಗೆ ಸಿಆರ್​​ಪಿಎಫ್​​ ಯೋಧನನ್ನು ಬಂಧಿಸಲಾಗಿತ್ತು. ನಿನ್ನೆ ಸಂಜೆ ಬಿಡುಗಡೆ ಸಹ ಮಾಡಲಾಯಿತು. ಆದರೆ, ಸದಲಗಾ ಪೊಲೀಸರು ಬಂಧನದ ವೇಳೆ ಬಾಸುಂಡೆ ಬರುವ ಹಾಗೆ ಹೊಡೆದಿದ್ದಾರೆ ಎನ್ನಲಾಗುತ್ತಿದ್ದು ಅದರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.

Brutally assaulted on CRPF soldiers after arrest
ಸಿಆರ್​​ಪಿಎಫ್​​ ಯೋಧನ ಫೋಟೋ ವೈರಲ್​
author img

By

Published : Apr 29, 2020, 4:01 PM IST

ಬೆಳಗಾವಿ : ಪೇದೆ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಸಿಆರ್​​ಪಿಎಫ್​​ ಯೋಧ ಸಚಿನ್ ಸಾವಂತ್ ಅವರನ್ನು ಬಂಧಿಸಿದ್ದ ಸದಲಗಾ ಪೊಲೀಸರು ಬಾಸುಂಡೆ ಬರುವ ಹಾಗೆ ಥಳಿಸಿರುವುದು ಬೆಳಕಿಗೆ ಬಂದಿದೆ.

Brutally assaulted on CRPF soldiers after arrest
ಸಿಆರ್​​ಪಿಎಫ್​​ ಯೋಧನ ಫೋಟೋ ವೈರಲ್​

ಯೋಧನ ಮೈಮೇಲೆ‌ ಬಾಸುಂಡೆ ಬಿದ್ದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸಚಿನ್ ಸಾವಂತ್ ಅವರನ್ನು ಏ. 23 ರಂದು‌ ಸದಲಗಾ ಪೊಲೀಸರು ಬಂಧಿಸಿದ್ದರು. ಯೋಧನ ಕೈಗೆ ಕೋಳ ತೊಡಿಸಿ ಠಾಣೆಯಲ್ಲಿ ಕೂರಿಸಲಾಗಿತ್ತು.

ಯೋಧನನ್ನು ಕಳ್ಳನಂತೆ ನಡೆಸಿಕೊಂಡ ಪೊಲೀಸರ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ‌ಆಕ್ರೋಶ ವ್ಯಕ್ತವಾಗಿತ್ತು. ಅದಕ್ಕೂ ಮುಂಚೆ ಪೊಲೀಸರು ಯೋಧನನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ಮೈಮೇಲೆ ಬಾಸುಂಡೆ ಮೂಡಿವೆ. ಐದು ದಿನಗಳ ಕಾಲ ಹಿಂಡಲಗಾ ಜೈಲಿನಲ್ಲಿದ್ದ ಯೋಧ ಸಚಿನ್ ಸಾವಂತ್​​ಗೆ ಚಿಕ್ಕೋಡಿ ಒಂದನೇ ಜೆಎಂಎಫ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ನಿನ್ನೆ ಸಂಜೆ ಸಿಆರ್​​ಪಿಎಫ್​​ ಹಿರಿಯ ಅಧಿಕಾರಿಗಳು ಜೈಲಿಗೆ ಆಗಮಿಸಿ ಯೋಧನನ್ನು ಖಾನಾಪುರದಲ್ಲಿರುವ ಕ್ಯಾಂಪ್​​ಗೆ ಕರೆದೊಯ್ದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.