ETV Bharat / state

ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಪತ್ರಕರ್ತ ಸಂಘದಿಂದ ಅಲ್ಪೋಪಹಾರ ವ್ಯವಸ್ಥೆ..

author img

By

Published : Apr 9, 2020, 1:48 PM IST

ಹಲವು ಸಂಘ-ಸಂಸ್ಥೆಗಳು ಕೊರೊನಾ ತಡೆಯಲು ಕಾರ್ಯನಿರತ ಸಿಬ್ಬಂದಿಗೆ ಅಲ್ಪೋಪಹಾರ ಮತ್ತು ಊಟದ ವ್ಯವಸ್ಥೆ ಮಾಡುತ್ತಿವೆ.

Journalists Association
ಪತ್ರಕರ್ತ ಸಂಘದಿಂದ ಅಲ್ಪೋಪಹಾರ ವ್ಯವಸ್ಥೆ

ಅಥಣಿ (ಬೆಳಗಾವಿ) : ಪಟ್ಟಣದ ಪೊಲೀಸ್ ಸಿಬ್ಬಂದಿಗೆ ಮತ್ತು ಪಟ್ಟಣದ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಅಥಣಿ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ ಎ ವನಜೋಳ ಇವರ ಸಹಭಾಗಿತ್ವದಲ್ಲಿ ಅಲ್ಪೋಪಹಾರ ವ್ಯವಸ್ಥೆ ಮಾಡಲಾಗಿತ್ತು.

ಪತ್ರಕರ್ತ ಸಂಘದಿಂದ ಅಲ್ಪೋಪಹಾರ ವ್ಯವಸ್ಥೆ..

ಈ ವೇಳೆ ಮಾತನಾಡಿದ ಪತ್ರಕರ್ತ ಸಂಘದ ಉಪಾಧ್ಯಕ್ಷ ಅಣ್ಣಾಸಾಬ ತೆಲಸಂಗ, ಕೊರೊನಾ ಮಹಾಮಾರಿ ವಿರುದ್ಧ ಹೋರಾಟದಲ್ಲಿ ಎಲ್ಲರ ಸಹಕಾರ ಅಗತ್ಯ. ಪೊಲೀಸ್, ಆರೋಗ್ಯ, ಪುರಸಭೆ ಸೇರಿ ಹಲವು ಇಲಾಖೆಗಳು ನಿರಂತರ ಶ್ರಮಿಸುತ್ತಿವೆ. ಹಲವು ಸಂಘ-ಸಂಸ್ಥೆಗಳು ಕೊರೊನಾ ತಡೆಯಲು ಕಾರ್ಯನಿರತ ಸಿಬ್ಬಂದಿಗೆ ಅಲ್ಪೋಪಹಾರ ಮತ್ತು ಊಟದ ವ್ಯವಸ್ಥೆ ಮಾಡುತ್ತಿವೆ.

ಇಂದು ಕೆ ಎ ವನಜೋಳ ನ್ಯಾಯವಾದಿಗಳು ಮತ್ತು ಅಥಣಿ ಕಾರ್ಯನಿರತ ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಅಲ್ಪೋಪಹಾರ ವ್ಯವಸ್ಥೆ ಮಾಡುವ ಮೂಲಕ ಅವರ ಕಾರ್ಯವನ್ನು ಶ್ಲಾಘಿಸುವ ಕೆಲಸ ಮಾಡಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.