ಬೆಳಗಾವಿ : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕನ್ನಡಪರ ಸಂಘಟನೆಗಳು ನೀಡಿದ ಕರ್ನಾಟಕ ಬಂದ್ ಕುಂದಾನಗರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಖಾಸಗಿ ವಾಹನಗಳು, ಬಸ್ ಸಂಚಾರ ಆರಂಭಿಸಿವೆ.
ಮರಾಠಾ ಪ್ರಾಧಿಕಾರ ವಿರೋಧಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ರಾಜ್ಯದ ಹಲವು ಕನ್ನಡಪರ ಹಾಗೂ ರೈತ ಸಂಘಟನೆ ಸೇರಿದಂತೆ ಇನ್ನಿತರ ಸಂಘಟನೆಗಳು ಸಂಪೂರ್ಣ ಬೆಂಬಲಿಸಿದ್ದವು.
ಆದರೆ, ಬಂದ್‌ಗೆ ಬೆಂಬಲಿಸಿದ ಕುಂದಾನಗರಿ ಜನರು ಎಂದಿನಂತೆ ವ್ಯಾಪಾರ, ವಹಿವಾಟಿಗೆ ಅಣಿಯಾಗುತ್ತಿದ್ದಾರೆ. ಆಟೋ, ಖಾಸಗಿ ವಾಹನಗಳು, ಬಸ್, ಬೈಕ್ ಸಂಚಾರ ಎಂದಿನಂತೆ ಸಾಗಿದೆ.
ಓದಿ : ಕರ್ನಾಟಕ ಬಂದ್; ಪೊಲೀಸ್ ಇಲಾಖೆಯಿಂದ ಟಫ್ ರೂಲ್ಸ್!
ಇಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಚೆನ್ನಮ್ಮ ಸರ್ಕಲ್, ಕೊಲ್ಲಾಪುರ ಸರ್ಕಲ್, ರೈಲ್ವೆ ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ, ಅಶೋಕ ವೃತ್ತ ಹಾಗೂ ಕಾಲೇಜು ರಸ್ತೆಯ ಗಾಂಧಿ ಭವನ ಹತ್ತಿರ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇನ್ನು, ಒತ್ತಾಯಪೂರ್ವಕ ಬಂದ್ ಮಾಡಿಸಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಹಾನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜ್ ತಿಳಿಸಿದ್ದಾರೆ.