ಅಥಣಿ: ಶಿರಾ ಮತ್ತು ಆರ್ಆರ್ ನಗರದ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಐವತ್ತು ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದರು.
ಅವರು ಅಥಣಿ ಪಟ್ಟಣದಲ್ಲಿ ಮತ್ತು ತಾಲೂಕಿನ ಏಕನತ್ತಿ ಕೋಡಿ, ಹುಲಗಬಾಳ, ದರೂರ, ಖವಟಗೋಪ್ಪ, ಚಿಕ್ಕೂಡ್, ಅವರಕೋಡ, ದೊಡ್ಡವಾಡ ಗ್ರಾಮಗಳಲ್ಲಿ ಸರಿ ಸುಮಾರು 6.5 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಈಟಿವಿ ಭಾರತದ ಜೊತೆ ಮಾತನಾಡಿ, ನಾವು ಉಪಚುನಾವಣೆಯಲ್ಲಿ ಹೇಗೆ ಅಧಿಕ ಮತಗಳಿಂದ ಆಯ್ಕೆಯಾದೆವೋ ಅದೇ ರೀತಿಯಲ್ಲಿ ಶಿರಾ ಹಾಗೂ ಆರ್ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರೀ ಅಂತರದಿಂದ ಜಯಭೇರಿ ಭಾರಿಸುತ್ತಾರೆ ಎಂದು ಹೇಳಿದರು.
ಹಾಗೆಯೇ ಕೊರೊನಾ ಸಂದರ್ಭದಲ್ಲಿ ಲಾಕ್ಡೌನ್ ಸಮಯದಲ್ಲಿ ಮುನಿರತ್ನ ಅವರ ಸೇವೆ ಅನನ್ಯ ಹಾಗೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಅವರ ಗೆಲುವಿನ ದಾರಿ ಎಂದು ತಿಳಿಸಿದರು.