ETV Bharat / state

ಬಿಜೆಪಿ ಎದುರಾಳಿ ನೋಡಿ‌ ಚುನಾವಣೆ ಎದುರಿಸುವುದಿಲ್ಲ: ಮಹೇಶ್ ಟೆಂಗಿನಕಾಯಿ - Mahesh Tenginkai

ಕೇಂದ್ರದಲ್ಲಿ ಮೋದಿ ಸರ್ಕಾರ ರಾಜ್ಯದಲ್ಲಿ ಯಡಿಯೂರಪ್ಪ‌ ಸರ್ಕಾರ ಇಡೀ ಜಗತ್ತು ಮೆಚ್ಚುವ ಹಾಗೇ ಕೆಲಸ ಮಾಡಿದೆ. ಹೀಗಾಗಿ ಜನರು ನರೇಂದ್ರ ಮೋದಿಯವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದರು.

BJP state general secretary Mahesh Tenginkai responds in Belagavi
ಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯೆ
author img

By

Published : Mar 30, 2021, 11:32 AM IST

ಬೆಳಗಾವಿ: ಬಿಜೆಪಿ ಪಕ್ಷ ಎದುರಾಳಿಯನ್ನು ನೋಡಿ‌ ಚುನಾವಣೆ ಮಾಡುತ್ತಿಲ್ಲ. ಎದುರಾಳಿ ಯಾರೇ ಇದ್ದರು ಬಿಜೆಪಿಗೆ ತನ್ನದೇ ಆದ ಸ್ಟ್ಯಾಟರ್ಜಿ ಇದ್ದು, ಅದೇ ತಂತ್ರಗಾರಿಕೆ ಮೂಲಕ ಐದು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ವಿಶ್ವಾಸ ವ್ಯಕ್ತಪಡಿಸಿದರು‌.

ನಗರದಲ್ಲಿ ಮಾತನಾಡಿದ ಅವರು, ಕಳೆದ ಇಪ್ಪತ್ತು ದಿನಗಳಿಂದ ಶಹರ ಮತ್ತು ಗ್ರಾಮೀಣ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳ ಜೊತೆಗೂಡಿ ಉಪಚುನಾವಣೆ ಎದುರಿಸುವಲ್ಲಿ ಬಹಳ ವ್ಯವಸ್ಥಿತವಾಗಿ ಸನ್ನದ್ಧರಾಗಿದ್ದೇವೆ. ಮೊದಲನೇ ಹಂತದ ಚುನಾವಣಾ ಪ್ರಚಾರದಲ್ಲಿ ನಾವು ಈಗಾಗಲೇ ಎಂಟು ವಿಧಾನಸಭೆ ಕ್ಷೇತ್ರದಲ್ಲಿ ಬೂತ್ ಮಟ್ಟದ ಶಕ್ತಿ, ಮಹಾಶಕ್ತಿ ಕೇಂದ್ರಗಳ ಮಹಾ ಸಮಾವೇಶ ಮಾಡಲಾಗಿದ್ದು, ಬಹಳ ಯಶಸ್ವಿ ಆಗಿ ಸಭೆಗಳು ಆಯೋಜನೆ ಮಾಡಿದ್ದೇವೆ. ಪಕ್ಷದ ‌ಎಲ್ಲ ಕಾರ್ಯಕರ್ತರು ಕೂಡ ಚುನಾವಣೆಯನ್ನು ಬಹಳ ಯಶಸ್ವಿ ಆಗಿ ಎದುರಿಸಲಿದ್ದು, ಐದು ಲಕ್ಷ ಮತಗಳ ಅಂತರದಲ್ಲಿ ಗೆಲವು ಸಾಧಿಸಲಿದ್ದೇವೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯೆ

ಕಾಂಗ್ರೆಸ್ ವರ್ಸಸ್ ಬಿಜೆಪಿ‌ ಚುನಾವಣೆ ಇದೆ. ಯಾವುದೇ ಒಬ್ಬ ವ್ಯಕ್ತಿ ‌ವಿರುದ್ಧ ನಾವು ಚುನಾವಣೆ ಮಾಡುತ್ತಿಲ್ಲ. ಪಕ್ಷದ ಕೆಲ ತಂತ್ರಗಳನ್ನು ಉಪಯೋಗಿಸಿಕೊಂಡು ಚುನಾವಣೆ ಎದುರಿಸುತ್ತೇವೆ. ಸಿಡಿ ವಿಚಾರ ಉಪಚುನಾವಣೆ ಮೇಲೆ ಎಫೆಕ್ಟ್ ಆಗೊದಿಲ್ಲ. ಬಾಲಚಂದ್ರ ಜಾರಕಿಹೊಳಿ‌ ಜೊತೆಗೆ ಮಾತನಾಡಿದ್ದೇವೆ. ನಾಮಪತ್ರ ಸಲ್ಲಿಕೆ, ಪ್ರಚಾರ ಕಾರ್ಯದಲ್ಲಿ ಸಿಎಂ ಯಡಿಯೂರಪ್ಪ, ನಳೀನ ಕುಮಾರ್ ಕಟೀಲ್ ಸೇರಿ ರಾಜ್ಯಮಟ್ಟದ ನಾಯಕರು ಭಾಗಿಯಾಗಲಿದ್ದಾರೆ. ಏ.02ರ ವರೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಮುಂದಿನ ಪ್ರಚಾರ ಕಾರ್ಯದ ರೂಪುರೇಷೆಗಳನ್ನು ಮುಂದಿನ 4-5 ದಿನಗಳಲ್ಲಿ ತಯಾರಿ ಮಾಡಿಕೊಂಡಿದ್ದೇವೆ ಎಂದರು.

ಓದಿ : ಯುವತಿ ಪೋಷಕರಿಂದ ನನ್ನ ವಿರುದ್ಧ ಆರೋಪ ಮಾಡಿಸಲಾಗುತ್ತಿದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ‌ ಸರ್ಕಾರ ಇಡೀ ಜಗತ್ತು ಮೆಚ್ಚುವ ಹಾಗೇ ಕೆಲಸ ಮಾಡಿದೆ. ಹೀಗಾಗಿ ಜನರು ನರೇಂದ್ರ ಮೋದಿಯವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.

ರೈತ ಹೋರಾಟ ವಿಚಾರಕ್ಕೆ, ದೇಶದಲ್ಲಿ ರೈತ ಹೋರಾಟಕ್ಕೆ ಅನೇಕ ಸಂಘಟನೆಗಳು ಬಂದ್​​​ಗೆ ಕರೆ ಕೊಟ್ಟಿದ್ದರು. ಆದ್ರೆ, ಇಡೀ‌ ದೇಶದಲ್ಲಿ ರೈತ ಹೋರಾಟ ಎಲ್ಲಿಯೂ ಎಫೆಕ್ಟ್ ಆಗಿಲ್ಲ. ಡೋಂಗಿ ರೈತ ಹೋರಾಟ ಅಂತಾ ಜನರಿಗೂ ತಿಳಿದಿದೆ. ಹೀಗಾಗಿ ರೈತ ಹೋರಾಟದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಮೋದಿ ಮತ್ತು ಬಿಜೆಪಿ ಸರ್ಕಾರದ ಮೇಲೆ ಜನರಿಗೆ ಸಂಪೂರ್ಣ ವಿಶ್ವಾಸವಿದೆ. ಜನರು ಕೂಡ ನಮಗೆ ಸಹಕಾರ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.