ETV Bharat / state

ನಾನು ನಿಮ್ಮ ಮನೆಯ ಮಗ, ನನ್ನ ಸಮೀಪ ಬರೋಕೆ ಯಾಕ್​ ಭಯ: ಗೋಕಾಕ್ ಜನತೆಗೆ​ ಈರಣ್ಣ ಕಡಾಡಿ ಅಭಯ

ನಾನು ಇಂದು ಪಕ್ಷದ ಮನುಷ್ಯನಾಗಿ ಮಾತನಾಡುತ್ತಿಲ್ಲ. ಇಂದು ಹೆಜ್ಜೆ ಹೆಜ್ಜೆಗೂ ತೊಂದರೆ, ಅಸೂಯೆ ಅನುಭವಿಸುತ್ತಿದ್ದೇವೆ. ನಾನು ಎಲ್ಲದಕ್ಕೂ ಬದ್ಧನಾಗಿ ನಿಂತಿದ್ದೇನೆ. ನೀವು ಎಲ್ಲೇ ಇದ್ರೂ ಗೌರವದಿಂದ ಇರೀ ಚಮಚಾಗಿರಿ ಮಾಡಬೇಡಿ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಗುಡುಗಿದರು.

bjp-rajya-sabha-member-iranna-kadadi-speech-in-panchamasali-convention
ರಾಜ್ಯಸಭಾ ಸದಸ್ಯ ಆದ್ಮೇಲೂ ನನ್ನ ಸಮೀಪ ಬರಲು ನಮ್ಮ ಜನ ಹೆದರುತ್ತಿದ್ದಾರೆ: ಪರೋಕ್ಷವಾಗಿ ಜಾರಕಿಹೊಳಿ ಸಹೋದರರ ವಿರುದ್ಧ ಈರಣ್ಣ ಕಡಾಡಿ ವಾಗ್ದಾಳಿ
author img

By

Published : Nov 13, 2022, 10:08 PM IST

ಬೆಳಗಾವಿ: ನಾನು ರಾಜ್ಯಸಭಾ ಸದಸ್ಯ ಆದ್ಮೇಲೂ ನನ್ನ ಸಮೀಪ ಬರಲು ನಮ್ಮ ಜನ ಹೆದರುತ್ತಿದ್ದಾರೆ. ಇಂದು ನಾವು ಹೆಜ್ಜೆ, ಹೆಜ್ಜೆಗೂ ತೊಂದರೆ, ಅಸೂಯೆ ಅನುಭವಿಸುತ್ತಿದ್ದೇವೆ. ನಾನು ಎಲ್ಲದಕ್ಕೂ ಬದ್ಧನಾಗಿ ನಿಂತಿದ್ದೇನೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಜಿಲ್ಲೆಯ ಗೋಕಾಕ್​ ಪಟ್ಟಣದಲ್ಲಿ ಭಾನುವಾರ ನಡೆದ ಲಿಂಗಾಯತ ಪಂಚಮಸಾಲಿ ಸಮಾವೇಶದಲ್ಲಿ ಅವರು ಮಾತನಾಡಿದರು. ನಮ್ಮ ಸಮಾಜ ಸ್ವಾಭಿಮಾನ, ನಂಬಿಕಸ್ಥ ಸಮಾಜವಾಗಿದೆ. ಸಮಾಜದಲ್ಲಿ ಆರ್ಥಿಕವಾಗಿ ಸದೃಢವಾಗದಿದ್ರೆ ಎದುರುಗಡೆ ನೋಡುವ ದೃಷ್ಟಿ ಬದಲಾಗುತ್ತದೆ. ನಮ್ಮ ಸಮಾಜ ಕೇವಲ ಕೃಷಿ ಮಾಡಿಕೊಂಡು ಬಂದಿದೆ. ಆದರೆ, ರಾಜಕೀಯ ಸ್ಥಾನಮಾನಗಳು ನೋಡಿದ್ರೆ ಅವು ಕಡಿಮೆ ಇವೆ. ನಮ್ಮ ತಾಲೂಕಿನಲ್ಲಿ ನಮ್ಮ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಬಹಳ ಕಡಿಮೆ ಇವೆ ಎಂದರು.

ಗೋಕಾಕ್, ‌ಮೂಡಲಗಿ ಸಮಾವೇಶಕ್ಕೂ ಮುನ್ನ ಸಮಾಜ ನಿದ್ರೆ ಮಾಡುತ್ತಿತ್ತು. ಹೋರಾಟ ಶುರುವಾದ ಬಳಿಕ ಜನರನ್ನು ಸ್ವಾಮೀಜಿ ಬಡದೆಬ್ಬಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇಷ್ಟು ದೊಡ್ಡ ಚಳವಳಿ ನಡೆದಿದ್ದನ್ನು ನೋಡಿಲ್ಲ. ಪಂಚಮಸಾಲಿ ಮೀಸಲಾತಿ ಆಶಾದಾಯಕ ಅನಿಸುತ್ತದೆ. ನಮ್ಮ ತಾಲೂಕಲ್ಲಿ 650 ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಸುಮಾರು 150 ಜನ ಮಾತ್ರ ಇದ್ದಾರೆ ಎಂದರು.

ಇದನ್ನೂ ಓದಿ: ಗೋಕಾಕ್​ನಲ್ಲಿ ಪಂಚಮಸಾಲಿ ಸಮಾವೇಶ ಮಾಡಲು ಎಂಟೆದೆ ಬೇಕು: 2ಎ ಮೀಸಲಾತಿಗೆ ಕೂಡಲಸಂಗಮ ಶ್ರೀ ಒತ್ತಾಯ

ನಾವು ಸಂಘಟಿತರಾಗದಿದ್ರೆ ಇನ್ನೊಬ್ಬರ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಿದ ಹಾಗೇ ಏಕೆ ಆಗ್ತಿದೆ ಗೊತ್ತಿಲ್ಲ. ಯಾರಿಗಾದರೂ ಉಪಯೋಗ ಆಗಿದ್ದರೆ ನಮ್ಮ ಕಡೆಯಿಂದ ಆಗಿದೆ. ಅವರಿಂದ ನಮಗಾಗಿಲ್ಲ. ಊರವರ ಚುನಾವಣೆ ಮಾಡಬೇಕಂದರೆ ನಾವೆಲ್ಲರೂ ಕೂಡಿ ಮಾಡುತ್ತೇವೆ. ನಮ್ಮ ಮನೆಯ ಚುನಾವಣೆ ಮಾಡಿದ್ರೆ ನಾವು ಹೊಡೆದಾಡುತ್ತೇವೆ. ನಾವು ತಪ್ಪು ಮಾಡಿದೀವಿ, ನಾನೂ ಸೇರಿ ನಮ್ಮ ಸಮಾಜದವರು ತಪ್ಪು ಮಾಡಿದ್ದೇವೆ. ನಾವು ಯಾರಿಗೂ ಗುಲಾಮರಲ್ಲ. ಉಳಿದಂತದ್ದರಲ್ಲೂ ಭಯದ ವಾತಾವರಣವಿದೆ. ನಾನು ರಾಜ್ಯಸಭಾ ಸದಸ್ಯ ಆದ್ಮೇಲೂ ನನ್ನ ಸಮೀಪ ಬರಲು ನಮ್ಮ ಜನ ಹೆದರುತ್ತಾರೆ. ನಾನು ನಿಮ್ಮ ಮನೆಯ ಮಗ, ನಿಮ್ಮ ಮಗನನ್ನು ಮಾತನಾಡಿಸಲು ಭಯ ಇರುವ ಮಟ್ಟಿಗೆ ಬಂದಿದೆ ಅಂದ್ರೇ ಹೇಗೆ ಎಂದು ಪ್ರಶ್ನಿಸಿದರು.

ಪರೋಕ್ಷವಾಗಿ ಜಾರಕಿಹೊಳಿ‌ ಸಹೋದರಿಗೆ ಟಾಂಗ್: ಮೀಸಲಾತಿ ಜತೆಗೆ ಸಂಘಟಿತವಾಗಿ ರಾಜಕೀಯ ನಿರ್ಣಯ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ನಾವು ಸಂಘಟಿತರಾಗದ ಯಾರೂ ಬೇಕಾದರೂ ನಮ್ಮನ್ನ ಆಳ್ತಾರೆ. ಈ ರೀತಿ ಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ. ನಮ್ಮ ಜನ ನಮಗ್ಯಾಕೆ ಬೇಕ ಉಸಾಬರಿ ಅಂತಾರೆ. ನಮ್ಮ ಮನೆ ಬಿದ್ರೆ ಸರ್ಕಾರ ಕೊಟ್ಟ ಐದು ಲಕ್ಷ ಹಣದಲ್ಲಿ ಐವತ್ತು ಸಾವಿರ ಪಡೆದವರನ್ನು ಬಡವರ ಬಂಧು, ಕೊಡಗೈ ದಾನಿ ಅಂದ್ವಿ. ನಾವು ಕಷ್ಟ ಪಟ್ಟು ಬೆಳೆದ ಕಬ್ಬಿನಲ್ಲಿ ದುಡ್ಡು ಹೊಡೆದವರಿಗೆ ರೈತರ ಬಂಧು ಅಂತಾ ಅಂದ್ವಿ. ಸ್ವಾಮೀಜಿ ಜೊತೆ ಪಂಚಮಸಾಲಿ ಹೋರಾಟಕ್ಕೆ ಹೋಗಬೇಕಾದ್ರೆ, ಅವರು ಕಾಂಗ್ರೆಸ್ ಪರ ಅಂದ್ರಿ ಎಂದು ಪರೋಕ್ಷವಾಗಿ ಜಾರಕಿಹೊಳಿ‌ ಸಹೋದರಿಗೆ ಟಾಂಗ್ ನೀಡಿದರು.

ಬಸವ ಜಯಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಕನ್ನಡಿ ಇದ್ದ ಹಾಗೇ. ನಾವೇನೂ ಗುಲಾಮಗಿರಿಯಲ್ಲಿದ್ದೇವಾ?. ನಾನು ಸಮಾಜದ ವತಿಯಿಂದ ಗಟ್ಟಿಯಾಗಿ ನಿಂತಿದ್ದೇವೆ. ಸ್ವಾಮೀಜಿ ನೀವು ನಮ್ಮ ಜತೆಗೆ ನಿಲ್ಲಬೇಕು. ಅಮಾಯಕರನ್ನ ಎತ್ತಿ ಕಟ್ಟಿ ನನ್ನ ಮೇಲೆ ಹಲ್ಲೆ ನಡೆಯುವ ಪ್ರಯತ್ನ ನಡೆಯಿತು. ಕುರುಬ ಸಮಾಜದ ಸಣ್ಣಕ್ಕಿಗೆ ಕೌಜಲಗಿ ಜಿಪಂ ಅಧ್ಯಕ್ಷ ಆಗ್ತಿದ್ರೂ ಅದನ್ನ ಯಾರು ತಡೆದ್ರು?. ನಾನು ಇಂದು ಪಕ್ಷದ ಮನುಷ್ಯನಾಗಿ ಮಾತನಾಡುತ್ತಿಲ್ಲ. ಇಂದು ಹೆಜ್ಜೆ ಹೆಜ್ಜೆಗೂ ತೊಂದರೆ, ಅಸೂಯೆ ಅನುಭವಿಸುತ್ತಿದ್ದೇವೆ. ನಾನು ಎಲ್ಲದಕ್ಕೂ ಬದ್ಧನಾಗಿ ನಿಂತಿದ್ದೇನೆ. ನೀವು ಎಲ್ಲೇ ಇದ್ರೂ ಗೌರವದಿಂದ ಇರೀ ಚಮಚಾಗಿರಿ ಮಾಡಬೇಡಿ ಎಂದರು.

ಗುಲಾಮಗಿರಿ ಮಾಡಬೇಡಿ: ನಾನು ದಲಿತ ವಿರೋಧಿ ಅಂತಾ ಬಿಂಬಿಸಲು ಹೊರಟಿದ್ದೀರಿ. ನನ್ನ ವೈರಿ ಕೂಡ ನನ್ನ ಪಕ್ಷನಿಷ್ಠೆ ಬಗ್ಗೆ ಕೇಳಲ್ಲ. ಇಡೀ ಸಮಾಜದ ಜನ ನನ್ನ ಬೆನ್ನಿಗೆ ಇದ್ದೀರಿ, ನಾನು ಗಟ್ಟಿಯಾಗಿ ನಿಲ್ಲುತ್ತೇನೆ. ನಮ್ಮ ಸಮಾಜದವರು ಕೆಲವರು ಒಳಗೆ ಹೋಗಿ ಕುಳಿತುಕೊಂಡಿದ್ದಾರೆ. ಆದರೆ, ಅವರಿಗೆ ಚಮಚಾಗಿರಿ, ಗುಲಾಮಗಿರಿ ಮಾಡಬೇಡಿ ಅಂತಾ ಹೇಳುತ್ತೇನೆ. ರಾಜ್ಯಸಭಾ ಸದಸ್ಯ ಆದ ಬಳಿಕ ಒಂದು ಪ್ರೊಟೊಕಾಲ್ ಇದೆ. ವ್ಯವಸ್ಥೆ ಸರಿಯಾಗಬೇಕು ಎಂದು ಹೋರಾಟ ಮಾಡ್ತಿದ್ದೇವೆ ಎಂದು ಈರಣ್ಣ ಕಡಾಡಿ ಹೇಳಿದರು.

ಇದನ್ನೂ ಓದಿ: ಗೊಂದಲಗಳಿಲ್ಲದೆ ತಳವಾರ ಸಮುದಾಯಕ್ಕೆ ಎಸ್​ಟಿ ಪ್ರಮಾಣಪತ್ರ ನೀಡಿ: ಸಚಿವ ಶ್ರೀನಿವಾಸ್ ಪೂಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.