ETV Bharat / state

ಪ್ರಿಯಾಂಕ್​ ಖರ್ಗೆ ವಿರುದ್ಧ ’ರಾಜೀವ ಅಸ್ತ್ರ’ ಬಳಕೆಗೆ ಬಿಜೆಪಿ ರಣತಂತ್ರ.. ಊಹಾಪೋಹ ತಳ್ಳಿಹಾಕಿದ ಪಿ ರಾಜೀವ್​

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್​​ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಕಟ್ಟಿಹಾಕಲು ಬಿಜೆಪಿ ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ಈಗಿನಿಂದಲೇ ರಣತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.

author img

By

Published : Jan 24, 2023, 1:30 PM IST

Updated : Jan 24, 2023, 2:11 PM IST

BJP Planning Strategy to defeat Priyank Kharge
ಪ್ರಿಯಾಂಕ್​​ ಖರ್ಗೆ ಸೋಲಿಸಲು ಬಿಜೆಪಿ ಮಾಸ್ಟರ್ ಪ್ಲಾನ್
ಸ್ಪರ್ಧೆ ತಳ್ಳಿ ಹಾಕಿದ ಉಮೇಶ್ ಕಾರಜೋಳ, ಪಿ ರಾಜೀವ್​

ಚಿಕ್ಕೋಡಿ(ಬೆಳಗಾವಿ): ಕಾಂಗ್ರೆಸ್​ ನಾಯಕ ಪ್ರಿಯಾಂಕ್ ಖರ್ಗೆ ಅವರನ್ನು ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಟ್ಟಿಹಾಕಲು ಬಿಜೆಪಿ ವರಿಷ್ಠರು ರಾಜೀವ್ ಅಸ್ತ್ರ ಬಳಕೆಗೆ ಮುಂದಾಗಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಕುಡಚಿ ಶಾಸಕ ಪಿ. ರಾಜೀವ್ ಅವರನ್ನು ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಿ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ರಾಜಕೀಯವಾಗಿ ಕಟ್ಟಿ ಹಾಕಲು ಬಿಜೆಪಿ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಆದರೆ, ಈ ವದಂತಿಗಳನ್ನು ಸ್ವತಃ ಕುಡಚಿ ಶಾಸಕ ಪಿ ರಾಜೀವ್​ ತಳ್ಳಿಹಾಕಿದ್ದಾರೆ. ವರಿಷ್ಠರಿಂದ ಇದುವರೆಗೂ ಅಂತಹ ಯಾವುದೇ ಸೂಚನೆ ಬಂದಿಲ್ಲ ಎಂದು ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ ಮಾತನಾಡಿರುವ ಸಚಿವ ಗೋವಿಂದ್​ ಕಾರಜೋಳ ಅವರ ಪುತ್ರ ಕೂಡಾ ಕುಡುಚಿ ಕ್ಷೇತ್ರ ಖಾಲಿ ಇಲ್ಲ, ತಾವು ಆ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ ಊಹಾಪೋಹ ಅಷ್ಟೇ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಅಂದ ಹಾಗೆ ಪಿ.ರಾಜೀವ್ ಬಂಜಾರ ಸಮುದಾಯಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡು ತಾಂಡಾ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಒಂದು ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ್ ಗ್ರಾಮದಲ್ಲಿ ತಾಂಡಾ ಪ್ರದೇಶಗಳಿಗೆ ಹಕ್ಕು ಪತ್ರ ವಿತರಣೆ ಸಮಾರಂಭದಲ್ಲಿ ಪಿ.ರಾಜೀವ್ ವೇದಿಕೆಯಲ್ಲಿ ಗುರುತಿಸಿಕೊಂಡು ಅಲ್ಲಿನ ಜನರ ಗಮನ ಸೆಳೆದಿದ್ದರು. ಈ ವಿಚಾರವೇ ಈಗ ಹಲವು ವದಂತಿಗಳಿಗೆ ಕಾರಣವಾಗಿದೆ.

ಕ್ಷೇತ್ರ ಬದಲಾವಣೆಗೆ ಸಿದ್ಧತೆ ಮಾತು: ಎರಡು ಬಾರಿ ಕುಡಚಿ ಕ್ಷೇತ್ರದಿಂದ ಶಾಸಕರಾಗಿರುವ ಪಿ. ರಾಜೀವ್ ಅವರು ಈ ಬಾರಿ ಕ್ಷೇತ್ರ ಬದಲಾವಣೆಗೆ ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗುತ್ತಿದೆ. ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಆದರೆ ಇವೆಲ್ಲ ಮಾತುಗಳನ್ನು ಶಾಸಕ ರಾಜೀವ್ ಈಗಾಗಲೇ ತಳ್ಳಿ ಹಾಕಿದ್ದಾರೆ.

ಕುಡಚಿ ಮತಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ?: ಕುಡಚಿ ಕ್ಷೇತ್ರಕ್ಕೆ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪುತ್ರ ಉಮೇಶ್‌ ಕಾರಜೋಳ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ ಎಂಬ ಮಾತು ಕೇಳಿ ಬಂದಿವೆ. ಕಳೆದ ಕೆಲವು ದಿನಗಳಿಂದ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದು, ಸದ್ದಿಲ್ಲದೇ ಚುನಾವಣೆ ತಯಾರಿ ನಡೆಸಿದ್ದಾರೆ. ಮೀಸಲು ಕ್ಷೇತ್ರವಾದ ಕುಡಚಿ ವಿಧಾನಸಭೆಗೆ ಬಿಜೆಪಿಯಿಂದ ಸ್ಪರ್ಧಿಸಿದರೆ ಸುಲಭವಾಗಿ ಗೆಲ್ಲುವ ಲೆಕ್ಕಾಚಾರ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತುವ ಬಿಜೆಪಿ ಈ ಬದಲಾವಣೆಗೆ ಅವಕಾಶ ಕಲ್ಪಿಸುತ್ತದೆಯೇ ಎನ್ನುವುದು ಹಲವರ ಪ್ರಶ್ನೆ.

ಕುಡಚಿ ಕ್ಷೇತ್ರದಲ್ಲಿ ಉಮೇಶ್ ಕಾರಜೋಳ ಪ್ರತ್ಯಕ್ಷ: ಕಳೆದ ಎರಡು ಮೂರು ತಿಂಗಳಿನಿಂದ ಉಮೇಶ್ ಕಾರಜೋಳ ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಬೆಳೆಸಿ ಸ್ಥಳೀಯ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಕಳೆದ ಎರಡು ದಿನದ ಹಿಂದೆ ಮುಗಳಖೋಡ ಜಾತ್ರೆಯಲ್ಲಿ ತಮ್ಮ ಭಾವಚಿತ್ರ ಇರುವ ಕ್ಯಾಲೆಂಡರ್ ಬಿಡುಗಡೆ ಮಾಡಿ ಅಭಿಮಾನಿಗಳ ಮುಖಾಂತರ ಕ್ಷೇತ್ರದ ತುಂಬಾ ಹಂಚುತ್ತಿದ್ದಾರೆ. ಹಲವು ನಾಯಕರ ಹಾಗೂ ಕಾರ್ಯಕರ್ತರ ಕಾರ್ಯಗಳಲ್ಲೂ ಭಾಗವಹಿಸುತ್ತಿದ್ದಾರೆ.

ಕುಡಚಿ ಕ್ಷೇತ್ರದ ಸ್ಪರ್ಧೆ ತಳ್ಳಿ ಹಾಕಿದ ಉಮೇಶ್ : ಕುಡಚಿ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡೋದಿಲ್ಲ. ಈ ಸುದ್ದಿಗಳು ಊಹಾಪೋಹವಷ್ಟೇ. ಕ್ಷೇತ್ರದಲ್ಲಿ ಸ್ಥಾನ ಖಾಲಿಯಿಲ್ಲ ಪಕ್ಷ ಯಾವ ತಿರ್ಮಾನ ತೆಗೆದುಕೊಳ್ಳುತ್ತದೆಯೋ ಅದರ ಮೇಲೆ ನಿರ್ಣಯವಾಗುತ್ತದೆ ಎಂದು ಉಮೇಶ್ ಕಾರಜೋಳ ಮಾಧ್ಯಮಗಳ ಎದುರು ಸ್ಪಷ್ಟಪಡಿಸಿದ್ದಾರೆ.

ಅಕ್ಕಪಕ್ಕದ ವಿಧಾನಸಭಾ ಕ್ಷೇತ್ರಗಳಿವು: ಕುಡಚಿ ವಿಧಾನಸಭಾ ಮತ ಕ್ಷೇತ್ರ ಮುಧೋಳ ಮತಕ್ಷೇತ್ರಕ್ಕೆ ಹೊಂದಿಕೊಂಡಿರುವ ವಿಧಾನಸಭಾ ಕ್ಷೇತ್ರ. ಕಾರಜೋಳ ಕುಟುಂಬ ಕುಡಚಿ ಕ್ಷೇತ್ರದಲ್ಲಿ ಹಿಡಿತವನ್ನು ಸಾಧಿಸಿದೆ. ಜೊತೆಗೆ ಮೀಸಲು ಕ್ಷೇತ್ರವಾಗಿದೆ. ಕುಡಚಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಇಲ್ಲದೇ ಇರುವುದರಿಂದ ವಲಸಿಗರಿಗೆ ತೆರವಾದ ಸ್ಥಾನವನ್ನು ನೀಡುತ್ತಾರೆ ಎಂಬ ಮಾತುಗಳಿವೆ. ಆದರೆ ಈ ಊಹಾಪೋಹಗಳಿಗೆ ಶಾಸಕರ ರಾಜೀವ್​ ಮತ್ತು ಸಚಿವ ಗೋವಿಂದ್​ ಕಾರಜೋಳರ ಪುತ್ರ ಸ್ಪಷ್ಟನೆ ನೀಡಿ, ಅಂತಹ ಯಾವುದೇ ಚರ್ಚೆ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮುಂಬರುವ ಚುನಾವಣೆಗೆ ತಾರಾ ಮೆರುಗು ನೀಡಲು ಕಾಂಗ್ರೆಸ್ ಯತ್ನ.. ಸಿಗಲಿದೆಯಾ ಯಶಸ್ಸು?

Last Updated : Jan 24, 2023, 2:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.