ಬೆಳಗಾವಿ: ಕೊರೊನಾ ತಡೆಗೆ ಸರ್ಕಾರ ತಂದಿರುವ ಟಫ್ ರೂಲ್ಸ್ ಕೊರೊನಾಗಿಂತ ಕೆಟ್ಟ ಪರಿಸ್ಥಿತಿ ಆಗಿದ್ದು, ಕೊರೊನಾ ಬಂದರೂ ಅಡ್ಡಿಯಿಲ್ಲ ಇದು ಬೇಡ ಎಂದು ಬಿಜೆಪಿ ಶಾಸಕ ಅನಿಲ್ ಬೆನಕೆ ಸರ್ಕಾರದ ನಡೆಗೆ ಆಕ್ರೋಶ ಹೊರಹಾಕಿದರು.
ನಗರದ ಡಿಸಿ ಕಚೇರಿ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ಟಫ್ ರೂಲ್ಸ್ ಕೊರೊನಾಗಿಂತ ಕೆಟ್ಟ ಪರಿಸ್ಥಿತಿಯನ್ನು ತಂದಿಟ್ಟಿದೆ. ಇಡೀ ಬೆಳಗಾವಿಯಲ್ಲಿ ಅಂಗಡಿ ಬಂದ್ ಮಾಡಿದ್ದರಿಂದ ವ್ಯಾಪಾರಸ್ಥರಿಗೆ ತೊಂದರೆ ಆಗಿದೆ. ಕೋವಿಡ್ ಹೊಸ ಗೈಡ್‌ಲೈನ್ಸ್ ಚೇಂಜ್ ಮಾಡುವ ಬಗ್ಗೆ ಚರ್ಚೆ ಮಾಡಬೇಕು. ಬೇಕರಿ, ತಂಪು ಪಾನೀಯ, ವಾಹನಗಳ ಸ್ಪೇರ್ ಪಾರ್ಟ್ಸ್, ಸ್ವೀಟ್ ಮಾರ್ಟ್, ಬೀದಿ ಬದಿ ವ್ಯಾಪಾರಿಗಳಿಗೆ ಗೊಂದಲ ಇದೆ. ಜನರಿಗೆ ತೊಂದರೆಯಾಗದಂತೆ ಗೈಡ್‌ಲೈನ್ಸ್ ಜಾರಿ ತರಬೇಕು. ಜನರು ಚಿಕ್ಕ ಪುಟ್ಟ ವ್ಯವಸಾಯ ನಡೆಸುವ ಬಗ್ಗೆ ಸರ್ಕಾರ ಗಮನಿಸಬೇಕು ಎಂದರು.
ಶನಿವಾರ, ರವಿವಾರ ಲಾಕ್‌ಡೌನ್ ಮಾಡಿದ್ರೆ ಒಪ್ಪಿಕೊಳ್ಳುತ್ತಾರೆ. ಲಾಕ್ಡೌನ್ಗಿಂತ ಕೆಟ್ಟ ಪರಿಸ್ಥಿತಿ ಮಾಡಿದ್ದು, ಇದು ಸರಿಯಾದ ನಡೆಯಲ್ಲ. ಜನರ ಸಮಸ್ಯೆ ತಿಳಿದುಕೊಳ್ಳಿ. ಅನಾವಶ್ಯಕವಾಗಿ ಅಡ್ಡಾಡೋರನ್ನ ಬಿಡ್ತೀರಿ. ಕೆಲವು ಮಾಲ್‌ಗಳು ಸ್ಟಾರ್ಟ್ ಇದ್ದು ಸಣ್ಣ ಅಂಗಡಿಗಳನ್ನ ಬಂದ್ ಮಾಡಿಸಿದ್ದಾರೆ. ಪಾರದರ್ಶಕವಾಗಿ ಕೋವಿಡ್ ನಿಯಮ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗಾದರೂ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದರೂ ನಾವು ನೇರವಾಗಿ ಹೇಳೋರು. ಜನರ ಪರವಾಗಿ ನಾವು ನಿಲ್ಲಬೇಕಾಗುತ್ತೆ. ವ್ಯವಸಾಯ ನಡೀಬೇಕು. ಗೈಡಲೈನ್ಸ್ ಕನ್ಫ್ಯೂಷನ್‌ನಲ್ಲಿದೆ. ಜನರ ಪರವಾಗಿ ಗೈಡ್‌ಲೈನ್ಸ್ ಬರಬೇಕೆಂದು ತಮ್ಮದೇ ರಾಜ್ಯಸರ್ಕಾರಕ್ಕೆ ಬಿಜೆಪಿ ಶಾಸಕ ಅನಿಲ್ ಬೆನಕೆ ಒತ್ತಾಯಿಸಿದ್ದಾರೆ.