ETV Bharat / state

ವಂಟಮೂರಿ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ: ಸಚಿವ ಸತೀಶ ಜಾರಕಿಹೊಳಿ ಆರೋಪ

ಈಗಾಗಲೇ ಸಂತ್ರಸ್ತ ಮಹಿಳೆಗೆ ಸರ್ಕಾರ ಪರಿಹಾರ ಘೋಷಿಸಿದೆ. ವಂಟಮೂರಿ ಪ್ರಕರಣ ಸಿಐಡಿಗೆ ಹಸ್ತಾಂತರಿಸುವ ಮುಂಚೆ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಇಬ್ಬರು ಆರೋಪಿಗಳ ಬಂಧನ ಆಗಬೇಕು. ಒತ್ತಡ ಪ್ರಭಾವ ಬೀರದಂತೆ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶ ನೀಡಿದೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

Minister Satish Jarkiholi spoke to the media.
ಸಚಿವ ಸತೀಶ ಜಾರಕಿಹೊಳಿ ಮಾಧ್ಯಮದವರ ಜೊತೆ ಮಾತನಾಡಿದರು.
author img

By ETV Bharat Karnataka Team

Published : Dec 19, 2023, 5:42 PM IST

Updated : Dec 19, 2023, 6:58 PM IST

ಸಚಿವ ಸತೀಶ ಜಾರಕಿಹೊಳಿ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಳಗಾವಿ: ವಂಟಮೂರಿ ಪ್ರಕರಣದಲ್ಲಿ ಬಿಜೆಪಿ ಆರೋಪ ಮಾಡುತ್ತಿರುವುದಕ್ಕೆ ತಿರುಗೇಟು ಕೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಇದರಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಗೃಹ ಸಚಿವರು ಸ್ಥಳಕ್ಕೆ ಭೇಟಿ ವಿಚಾರಣೆ ಮಾಡಿದ್ದಾರೆ. ಅವರು ಯಾಕೆ ರಾಜೀನಾಮೆ ಕೊಡಬೇಕು.? ಯಾರು ಕೂಡ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಏನು ಮಾಡಬೇಕು ಎಂದು ಸಲಹೆ ನೀಡಲಿ ಎಂದು ತಿಳಿಸಿದ್ದಾರೆ.

ವಂಟಮೂರಿ ಪ್ರಕರಣದಲ್ಲಿ ಬಿಜೆಪಿ ರಾಜಕೀಯ: ಬಿಜೆಪಿ ವಂಟಮೂರಿ ಪ್ರಕರಣಕ್ಕೆ ಹೆಚ್ಚು ಆಸಕ್ತಿ ತೋರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲದರಲ್ಲೂ ಬಿಜೆಪಿ ರಾಜಕೀಯ ಮಾಡ್ತಾರೆ. ಅದಕ್ಕೆ ಉತ್ತರ ಕೂಡಲಾಗಿದೆ. ಅವರು ರಾಜಕೀಯ ‌ಮಾಡ್ತಾರೆ ಎಂದು ನಾವು‌ ಮಾಡಲ್ಲ. ಅಲ್ಲಿ ಆಗಿದ್ದ ಘಟನೆ ಯಾರಿಗೆ ಚೇಂಜ್ ಮಾಡಲು ಸಾಧ್ಯವಿಲ್ಲ. ಇನ್ನೂ ಹತ್ತು ಸಾರಿ ಬಂದ್ರೂ ವಸ್ತು ಸ್ಥಿತಿ ಹಾಗೆ ಇರುತ್ತದೆ.

ಬಿಜೆಪಿಯವರು ಬೆಳಗಾವಿ ಘಟನೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ದೇಶದಲ್ಲಿ ಇಂಥ ಬಹಳಷ್ಟು ಘಟನೆಗಳು ಆಗಿವೆ, ಅಲ್ಲಿಗೂ ಹೋಗಬೇಕು, ಇಲ್ಲಿ ಅಷ್ಟೇ ಬಂದರೆ ಅದು ರಾಜಕೀಯ ಅನಿಸುತ್ತೆ. ಮಣಿಪುರದ ಘಟನೆ ಮೂರು ತಿಂಗಳು ಇಡೀ ಜಗತ್ತೇ ನೋಡಿತ್ತು. ಆದರೂ ಅಲ್ಲಿ ಯಾರು ಹೋಗಲಿಲ್ಲ ಎಂದು ಸತೀಶ ಜಾರಕಿಹೊಳಿ ತಿರುಗೇಟು ಕೊಟ್ಟರು.

ಜಮೀನು ಮಂಜೂರಾತಿ ಪತ್ರ ಹಸ್ತಾಂತರ: ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಗೆ ರಾಜ್ಯ ಸರ್ಕಾರವು 5 ಲಕ್ಷ ರೂ. ಪರಿಹಾರ ಘೋಷಿಸಿರುವ ಹಿನ್ನೆಲೆಯಲ್ಲಿ, ಸಂತ್ರಸ್ತ ಮಹಿಳೆಯ ಕುಟುಂಬಕ್ಕೆ ಪರಿಹಾರ ಚೆಕ್ ಹಸ್ತಾಂತರಿಸಲಾಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸಂತ್ರಸ್ತ ಮಹಿಳೆ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವರು, ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವ ಕುರಿತು ಭರವಸೆ ನೀಡಿದರು.

ಅಲ್ಲದೇ ಸಂತ್ರಸ್ತ ಕುಟುಂಬಕ್ಕೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಭೂ ಒಡೆತನ ಯೋಜನೆಯಡಿ ಮಂಜೂರಾಗಿರುವ 2.03 ಎಕರೆ ಜಮೀನು ಮಂಜೂರಾತಿ ಆದೇಶ ಪ್ರತಿ ಕೂಡ ಇದೇ ವೇಳೆ ಹಸ್ತಾಂತರಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಸವರಾಜ ಸೇರಿದಂತೆ ಮತ್ತಿತರ ಅಧಿಕಾರಿಗಳು ಇದ್ದರು.

ಸಾರ್ವಜನಿಕರ ಜವಾಬ್ದಾರಿಯೂ ಇದೆ: ಇಂತಹದ್ದೊಂದು ಘಟನೆ ನಮ್ಮ ಭಾಗದಲ್ಲಿ ಆಗಬಾರದಿತ್ತು, ಆಗಿದೆ. ಮುಂದೆ ಈ ರೀತಿ ಘಟನೆ ಆಗದಂತೆ ಎಲ್ಲರೂ ಪ್ರಯತ್ನ ಮಾಡೋಣ. ಇದರಲ್ಲಿ ನಾವಷ್ಟೆ ಅಲ್ಲ ಸಾರ್ವಜನಿಕ ಜವಾಬ್ದಾರಿಯೂ ಇದೆ. ಘಟನೆ ಆದಾಗ ಸಾರ್ವಜನಿಕರು ಇರ್ತಾರೆ, ಅವರು ಬಗೆಹರಿಸಲು ಮುಂದಾಗಬೇಕು. ನಿನ್ನೆ ಹೈಕೋರ್ಟ್ ಕೂಡ ಅದನ್ನೇ ಹೇಳಿದೆ. ಸಾರ್ವಜನಿಕರು ಸ್ಪಂದಿಸುವ ಕೆಲಸ ಮಾಡಬೇಕೆಂದು ಹೇಳಿದೆ. ಮುಂದಿನ ದಿನಗಳಲ್ಲಿ ಈ ರೀತಿ ಘಟನೆ ಆಗದಂತೆ ನೋಡಿಕೊಳ್ಳುವುದಷ್ಟೇ ನಮ್ಮ ಜವಾಬ್ದಾರಿ ಎಂದರು.

ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಹೆಸರು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಎಲ್ಲ ಕಡೆ ಅದು ಇದ್ದಿದ್ದೆ ಇಡೀ ದೇಶದಲ್ಲಿ ನಡೆಯುತ್ತೆ. ಎಂಎಲ್ಎ, ಸಚಿವರ ಹೆಸರು ಅಪಾಯಗಳು ಬಂದಾಗ ತರುತ್ತಾರೆ. ಇನ್ನು ನಮ್ಮ‌ ಗಮನಕ್ಕೂ ಕೆಲವು ಬಂದಿರುತ್ತವೆ. ನಮಗೆ ಗೌರವ ನೀಡುವುದಕ್ಕೋಸ್ಕರ ಪೊಲೀಸರು ಸುಮ್ಮನೆ ಕೂರಬಾರದು. ಹಾಗೆ ಸುಮ್ಮನೆ ಕುಳಿತರೆ ಅವರ ತಲೆ ದಂಡವಾಗುತ್ತೆ. ಅವರ ಕೆಲಸ ಅವರು ಮಾಡಬೇಕು ಎಂದು ಸತೀಶ ಜಾರಕಿಹೊಳಿ ಹೇಳಿದರು.

ಒಂದು ವಾಹನದ ಮೇಲೆ ಪೋಸ್ಟರ್ ಅಂಟಿಸಿಕೊಳ್ಳಲು ಸಹ ನಾವು ಬಿಡಲ್ಲ. ಹಿಡಿದು ಕಿತ್ತಾಕಿಸುತ್ತೇವೆ. ಈ ಘಟನೆಯಲ್ಲಿ ಸಾರ್ವಜನಿಕರು ಭಾಗಿಯಾಗಿ ತಡೆಯಬಹುದಿತ್ತು. ಪೊಲೀಸರು ಅಧಿಕಾರಿಗಳು ಬರೋದು ತಡವಾಗಬಹುದು. ಆದರೆ ಸಾರ್ವಜನಿಕರು ತಡೆಯಬಹುದಿತ್ತು ಎಂದು ಸತೀಶ ಜಾರಕಿಹೊಳಿ ಅಭಿಪ್ರಾಯ ಪಟ್ಟರು.

ಕೋವಿಡ್ ತಡೆಗೆ ಮುನ್ನೆಚ್ಚರಿಕೆ ಕ್ರಮ:ರಾಜ್ಯದಲ್ಲಿ ಕೋವಿಡ್ ಹರಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಡಿಸಿಯವರ ಜತೆಗೆ ಮೀಟಿಂಗ್ ಮಾಡಿ, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ಕುಟುಂಬದಿಂದ ಸದ್ಯ ಲೋಕಸಭೆಗೆ ಯಾರೂ ಸ್ಪರ್ಧೆ ಮಾಡುತ್ತಿಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಇದನ್ನೂಓದಿ: ಗ್ಯಾರಂಟಿಗಳ ಈಡೇರಿಸಲು ಹಣವಿಲ್ಲ ಎಂದ ಕರ್ನಾಟಕ ಸಿಎಂ' - ಕೆಟಿಆರ್ ಪೋಸ್ಟ್​ಗೆ ಸಿದ್ದರಾಮಯ್ಯ ತಿರುಗೇಟು

Last Updated : Dec 19, 2023, 6:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.