ETV Bharat / state

ಸತ್ಯಹರಿಶ್ಚಂದ್ರನಂತೆ ಮಾತನಾಡುವ ಡಿಕೆಶಿ ಈ ವಿಡಿಯೋ ನೋಡಲಿ : ರವಿಕುಮಾರ್ - ಮಿಕ್ಸರ್ ವಿತರಣೆ ವಿಡಿಯೋ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸತ್ಯಹರಿಶ್ಚಂದ್ರನ ರೀತಿಯಲ್ಲಿ ಮಾತನಾಡುತ್ತಿದ್ದಾರೆ- ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಕ್ರೋಶ.

ಬಿಜೆಪಿ ಪ್ರಧಾನಕಾರ್ಯದರ್ಶಿ ರವಿಕುಮಾರ್
ಬಿಜೆಪಿ ಪ್ರಧಾನಕಾರ್ಯದರ್ಶಿ ರವಿಕುಮಾರ್
author img

By

Published : Jan 25, 2023, 11:00 PM IST

ಬಿಜೆಪಿ ಪ್ರಧಾನಕಾರ್ಯದರ್ಶಿ ರವಿಕುಮಾರ್ ಅವರಿಂದ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ

ಬೆಳಗಾವಿ: ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ಯಾವುದೇ ನೈತಿಕತೆ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು ಯಾವ ಸಾಧನೆ ಮಾಡಿ ಜೈಲಿಗೆ ಹೋಗಿದ್ದರು?. ಶಿವಕುಮಾರ್​ ಬೇರೆಯವರತ್ತ ಬೆರಳು ಮಾಡಿ ತೋರಿಸುವ ಮುನ್ನ ತಮ್ಮ ಬಗ್ಗೆ ಯೋಚಿಸಲಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

ಅವರು ಬೆಳಗಾವಿ ನಗರದಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸತ್ಯಹರಿಶ್ಚಂದ್ರನ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರ ಮಾತನ್ನು ಕೇಳಿ ಭಗವಂತನೇ ನಗಬಹುದು. ಎಂತಹ ಸ್ವಚ್ಛ ಮನುಷ್ಯನಪ್ಪ ಅಂತ ಹೇಳಿ. ಜೈಲಿಗೆ ಏಕೆ ಹೋಗಿದ್ದೆ ಅಂತ ಗೊತ್ತಿದ್ದೂ ಆ ವಿಚಾರವನ್ನು ಮುಚ್ಚಿಟ್ಟುಕೊಂಡು ಬಿಜೆಪಿ ಬಗ್ಗೆ ಬಹಳ ಸತ್ಯ ಹರಿಶ್ಚಂದ್ರನಂತೆ ಮಾತನಾಡಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಭ್ರಷ್ಟಾಚಾರಿಗೆ ಆಶ್ರಯದಾತ. ಅವರ ಕಾಲದಲ್ಲಿ 35000 ಕೋಟಿಯಷ್ಟು ಭ್ರಷ್ಟಾಚಾರ ನಡೆಯಲು ಸಹಕರಿಸಿದ್ದಾರೆ. ಮರಳು ದಂಧೆ, ಪಠ್ಯಪುಸ್ತಕ ನೀಡುವ ವಿಚಾರ, ಒಂದಲ್ಲ ಎರಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ನ್ಯಾಯಮೂರ್ತಿಗಳಿಗೆ ಹೆಚ್ಚು ಒತ್ತಡ : ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅಭಿಪ್ರಾಯ

ರಮೇಶ್ ಜಾರಕಿಹೊಳಿ 6000 ರೂ. ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಮೇಶ್ ಜಾರಕಿಹೊಳಿ 6000 ರೂ ಹಣ ಕೊಟ್ಟಿದ್ದಕ್ಕೆ ಏನಾದ್ರೂ ದಾಖಲೆ ಇದೆಯಾ?. ಅವರು ಹಣವನ್ನು ಎಲ್ಲಿ ಬಿಡುಗಡೆ ಮಾಡಿದ್ದಾರೆ ಎಂಬುದರ ವಿಡಿಯೋವನ್ನು ಅವರು ಬಿಡುಗಡೆ ಮಾಡಲಿ. ನಾವು ಅವರು ಯಾವ ರೀತಿ ಜನರನ್ನು ಮರಳು ಮಾಡುತ್ತಿದ್ದಾರೆ ಎಂಬುದರ ಕುರಿತು ನಾವು ಕೂಡಾ ಕಂಪ್ಲೇಂಟ್​ ಅನ್ನು ಕೊಡುತ್ತಿದ್ದೇವೆ. ಗುರುವಾರ ನಾವು ಬೆಂಗಳೂರಿನಲ್ಲಿ ಈ ವಿಡಿಯೋ ಕ್ಲಿಪ್​ಗಳನ್ನು ತೆಗೆದುಕೊಂಡು ಹೋಗಿ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದೇವೆ. ಈ ರೀತಿ ಜನರನ್ನು ಮರಳು ಮಾಡುವುದು ಬೇಡ ಅವರು ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದರು.

ಮಿಕ್ಸರ್ ಹಂಚಿಕೆ ಹಿನ್ನೆಲೆ ನಾಳೆ ಬೆಂಗಳೂರಿನಲ್ಲಿ ದೂರು : ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿತರಣೆ ಮಾಡುತ್ತಿರುವ ಮಿಕ್ಸರ್ ವಿತರಣೆ ವಿಡಿಯೋವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಇಲ್ಲಿ ಯಾರು ಕೊಟ್ಟಿದ್ದಾರೆ ಎಂಬುದು ಹೇಳುತ್ತಿದ್ದಾರೆ. ನೋಡಿ ನಾವು ಸುಮ್ಮನೆ ಇಲ್ಲ. ನಮ್ಮ ಸುಧಾಕರ್ ಅವರು ಕಾಂಗ್ರೆಸ್ ಹೇಗೆ ಭ್ರಷ್ಟಚಾರ ಮಾಡಿದೆ ಎಂಬುದರ ಕುರಿತು ಪ್ರೆಸ್​ಮೀಟ್ ಮಾಡಿದ್ದಾರೆ.

ಇದನ್ನೂ ಓದಿ: ಹಣಕಾಸಿನ ಜಗಳ ಮಧ್ಯ ಪ್ರವೇಶಿಸಿದ ಪೊಲೀಸರ ಮೇಲೆ ಹಲ್ಲೆ.. ಮಹಾರಾಷ್ಟ್ರ ಮೂಲದ ಯುವತಿಯರ ವಿರುದ್ಧ ಪ್ರಕರಣ

ನಮ್ಮ ಸಿಟಿ ರವಿಯವರು ಮಾತನಾಡಿದ್ದಾರೆ. ಮುಖ್ಯಮಂತ್ರಿಯವರೂ ಮಾತನಾಡಿದ್ದರು. ಅವರ ಪ್ರತಿಭಟನೆ ವೇಳೆ 300 ಜನ ಭಾಗವಹಿಸುತ್ತಿದ್ದರು. ಆದರೆ ನಮ್ಮ ಪ್ರತಿಭಟನೆ ವೇಳೆ ಸಾವಿರಗಟ್ಟಲೆ ಜನ, ಲಕ್ಷಗಟ್ಟಲೆ ಜನ ಭಾಗವಹಿಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್​ಗೆ 'ನಾ ನಾಯಕಿ' ನಾ ನಾಯಕ ಎಂಬಂತಹ ಸ್ಥಿತಿ ಬಂದಿದೆ. ನಾಳೆ ಇನ್ನೊಬ್ಬರು ಇದೇ ರೀತಿ ನಾಯಕ ಎಂದು ಬರುತ್ತಾರೆ ಎಂದು ವ್ಯಂಗ್ಯವಾಡಿದರು.

ಬೆಳಗಾವಿಯಲ್ಲಿ ಮಿಕ್ಸರ್ ಹಂಚಿಕೆ ಬಗ್ಗೆ ನಾವು ಶೀಘ್ರದಲ್ಲಿಯೇ ದೂರು ದಾಖಲು ಮಾಡುತ್ತೇವೆ. ನಾಳೆ‌ ಬೆಳಿಗ್ಗೆ ಬೆಂಗಳೂರಿನಲ್ಲಿ ಈ ವಿಡಿಯೋ ತೆಗೆದುಕೊಂಡು ಹೋಗಿ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗುವುದು. ನಮ್ಮ ಬಿಜೆಪಿ ನಾಯಕರ ನೇತೃತ್ವದಲ್ಲಿ ದೂರು‌ ನೀಡಲಾಗುವುದು ಎಂದು ಹೇಳಿದರು.

ಓದಿ: ಆರ್.ಡಿ.ಪಾಟೀಲ್ ಒಬ್ಬ ಬುದ್ಧಿವಂತ ಕ್ರಿಮಿನಲ್, ಆತನ ವಿಚಾರಣೆ ನಡೆಯತ್ತಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.