ETV Bharat / state

ಬಿಜೆಪಿ ಭ್ರಷ್ಟಾಚಾರ ಗಿನ್ನೆಸ್​ ದಾಖಲೆ ಸೇರುವ ನಿರೀಕ್ಷೆ: ಸತೀಶ ಜಾರಕಿಹೊಳಿ‌ ವ್ಯಂಗ್ಯ

ರಾಜ್ಯದಲ್ಲಿ 40% ಕಮಿಷನ್ ತಾಂಡವವಾಡುತ್ತಿದೆ. ಮುಖ್ಯಮಂತ್ರಿಗಳು ಯಾವುದೇ ರಾಜ್ಯಕ್ಕೂ ಭೇಟಿ ನೀಡಿದರೂ ಕಮಿಷನ್ ಸರ್ಕಾರ ಎಂದು ಸ್ವಾಗತಿಸಲಾಗುತ್ತದೆ. ಬಿಜೆಪಿಯ ಭ್ರಷ್ಟಾಚಾರ ಗಿನ್ನಿಸ್​ ದಾಖಲೆ ಸೇರುವ ನಿರೀಕ್ಷೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.

bjp-corruption-is-expected-to-enter-the-guinness-record-says-sathish-jarkiholi
ನಮ್ಮದೇನೀದ್ದರೂ ಕೊನೆಯ ದಿನದ ಆಟ; ಬಿಜೆಪಿ ಭ್ರಷ್ಟಾಚಾರ ಗಿನ್ನಿಸ್ ದಾಖಲೆ ಸೇರುವ ನಿರೀಕ್ಷೆ: ಸತೀಶ ಜಾರಕಿಹೊಳಿ‌
author img

By

Published : Sep 18, 2022, 8:33 PM IST

ಬೆಳಗಾವಿ : ರಾಜ್ಯದಲ್ಲಿ 40% ಕಮಿಷನ್‌ ಬಿರುಗಾಳಿ ಇದೆ. ವಿವಿಧ ರಾಜ್ಯಗಳು ಸೇರಿದಂತೆ ಹೈದರಾಬಾದ್​ ಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿದಾಗ ಕಮಿಷನ್‌ ಸ್ವಾಗತ ಎಂದು ಬರಮಾಡಿಕೊಳ್ಳಲಾಗಿದೆ. ಹೀಗಾಗಿ, ಬಿಜೆಪಿ ಭ್ರಷ್ಟಾಚಾರ ಗಿನ್ನೆಸ್​ ದಾಖಲೆ ಸೇರುವ ನಿರೀಕ್ಷೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.

ನಗರದ ಕಾಂಗ್ರೆಸ್‌ ಭವನದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 40% ಕಮಿಷನ್‌ ತಾಂಡವಾಡುತ್ತಿದೆ. ಇದಕ್ಕೆ, ಓರ್ವ ಗುತ್ತಿಗೆದಾರ ಬಲಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಪ್ರಸಂಗ ರಾಜ್ಯದ ಸಿಎಂ ಅವರಿಗೆ ಎದುರಾಗಿದೆ. ಯಾವುದೇ ರಾಜ್ಯಕ್ಕೂ ಭೇಟಿ ನೀಡಿದರೂ 40% ಕಮಿಷನ್‌ ಸಿಎಂ ಸರ್ಕಾರ ಎಂದು ಸ್ವಾಗತಿಸಲಾಗುತ್ತಿದೆ ಎಂದರು.

ಬಿಜೆಪಿಗರು ಇತಿಹಾಸ ಅರಿತು ಮಾತನಾಡಲಿ.. ದೇಶವನ್ನು ಕಟ್ಟಿದವರು ಕಾಂಗ್ರೆಸ್‌ನವರು. ನಾವು ಒಡೆದಿಲ್ಲ, ಬಿಜೆಪಿಗರು ಇತಿಹಾಸ ಅರಿತು ಮಾತನಾಡಬೇಕಿದೆ. ಪಾಕ್‌-ಬಾಂಗ್ಲಾ ಒಗ್ಗಟ್ಟಿರುವ ವೇಳೆ ಮುಸ್ಲಿಂ ಸಮುದಾಯದ ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ ನಡೆದಿದೆ. ಹೀಗಾಗಿ ಮಹಿಳೆಯರಿಗೆ ಸುರಕ್ಷತೆ ನೀಡುವ ಉದ್ದೇಶದಿಂದ ಆಗಿನ ಪ್ರಧಾನಿ ಮಂತ್ರಿ ಇಂದಿರಾ ಗಾಂಧಿಯವರು ಪಾಕ್‌ ನಿಂದ ಬಾಂಗ್ಲಾ ವಿಭಜನೆ ಮಾಡುವ ಕೆಲಸ ಮಾಡಿದ್ದಾರೆ. ಇದನ್ನು ಬಿಜೆಪಿಗರು ಇತಿಹಾಸ ತಿರುಚುವ ಯತ್ನ ಮಾಡುತ್ತಿದ್ದಾರೆ. ಈ ದೇಶವನ್ನು ಮತ್ತೆ ಕಟ್ಟುವ ಸಲುವಾಗಿ ಕಾಂಗ್ರೆಸ್‌ ಭಾರತ ಜೊಡೋ ಯಾತ್ರೆ ಮಾಡುತ್ತಿದ್ದೇವೆ ಎಂದು ಮಾಧ್ಯಮಗಳಿಗೆ ಉತ್ತರಿಸಿದರು.

ನಮ್ಮದೇನಿದ್ದರೂ ಕೊನೆಯ ದಿನದ ಆಟ.. ಚಿಕ್ಕೋಡಿ ಭಾಗದಲ್ಲಿ ಪ್ರಕಾಶ ಹುಕ್ಕೇರಿ ಅವರು ಪ್ರಭಾವಿ ನಾಯಕರು. ಅವರ ಜತೆ ಚರ್ಚಿಸಿ ಕಾಂಗ್ರೆಸ್‌ ಚುನಾವಣೆ ಪ್ರಚಾರದ ಬಗ್ಗೆ ಹೆಜ್ಜೆ ಇಡಲಾಗುವುದು. ಅಭ್ಯರ್ಥಿಗಳ ಆಯ್ಕೆ ಕುರಿತು ಉತ್ತರಿಸಿದ ಶಾಸಕ ಸತೀಶ ಜಾರಕಿಹೊಳಿ, ನಮ್ಮಲ್ಲಿ ಯಾವುದೇ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗೊಂದಲಗಳಿಲ್ಲ, ನಮ್ಮದೇನಿದ್ದರೂ ಕೊನೆಯ ದಿನದ ಆಟ ಎಂದು ಹೇಳಿದರು.

ಇದನ್ನೂ ಓದಿ : ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತನ್ನಿ: ಹೆಚ್​ ಡಿ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.