ETV Bharat / state

ವಾಯವ್ಯ ಶಿಕ್ಷಕ, ಪದವೀಧರ ಕ್ಷೇತ್ರಕ್ಕೆ ಚುನಾವಣೆ: ಪಂಚಮಸಾಲಿ ಸಮಾಜಕ್ಕೆ ಕಾಂಗ್ರೆಸ್ ಮಣೆ!

author img

By

Published : Apr 22, 2022, 8:28 PM IST

Updated : Apr 22, 2022, 9:19 PM IST

ವಾಯವ್ಯ ಪದವೀಧರ ಹಾಗೂ ಶಿಕ್ಷಕರ‌ ಕ್ಷೇತ್ರದ ಪರಿಷತ್ ಚುನಾವಣೆ ಇನ್ನೂ ಘೋಷಣೆ ಆಗಿಲ್ಲವಾದರೂ ಈಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ‌ಈಗಾಗಲೇ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿವೆ. ಚುನಾವಣೆಗೆ ಸಿದ್ಧತೆ ನಡೆಸಿದೆ.

ವಾಯವ್ಯ ಶಿಕ್ಷಕ, ಪದವೀಧರ ಕ್ಷೇತ್ರಕ್ಕೆ ಚುನಾವಣೆ

ಬೆಳಗಾವಿ: ವಾಯವ್ಯ ಪದವೀಧರ ಹಾಗೂ ಶಿಕ್ಷಕರ‌ ಕ್ಷೇತ್ರದ ಪರಿಷತ್ ಚುನಾವಣೆ ಇನ್ನೂ ಘೋಷಣೆ ಆಗಿಲ್ಲ. ಆದರೆ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ‌ಈಗಾಗಲೇ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿವೆ. ಚುನಾವಣೆ ಘೋಷಣೆ ಮುನ್ನವೇ ಅಖಾಡಕ್ಕೆ ಇಳಿದಿರುವ ಅಭ್ಯರ್ಥಿಗಳು ಗೆಲುವಿಗೆ ತಂತ್ರ-ಪ್ರತಿತಂತ್ರ ರೂಪಿಸುತ್ತಿದ್ದಾರೆ.

ವಾಯವ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ನ್ಯಾಯವಾದಿ ಸುನೀಲ್ ಸಂಕ್‌ ಹೆಸರನ್ನು ಅಂತಿಮಗೊಳಿಸಿದ್ರೆ ಬಿಜೆಪಿ ಹಾಲಿ ಸದಸ್ಯ ಹಣಮಂತ ‌ನಿರಾಣಿಗೆ ಮತ್ತೊಮ್ಮೆ ಟಿಕೆಟ್ ನೀಡಿದೆ. ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ‌ಕಾಂಗ್ರೆಸ್ ಮಾಜಿ ಸಚಿವ ಪ್ರಕಾಶ್​ ಹುಕ್ಕೇರಿಗೆ ಟಿಕೆಟ್ ‌ನೀಡಿದ್ರೆ ಬಿಜೆಪಿ ಹಾಲಿ ಸದಸ್ಯ ಅರುಣ್ ಶಹಾಪುರಗೆ ಮತ್ತೊಮ್ಮೆ ‌ಟಿಕೆಟ್ ನೀಡಿದೆ. ಈ‌ ಎರಡೂ ಕ್ಷೇತ್ರಗಳು ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿ ಹೊಂದಿವೆ.

ವರ್ಕೌಟ್ ಆಗುತ್ತಾ ಕಾಂಗ್ರೆಸ್ ‌ಗೇಮ್ ಪ್ಲ್ಯಾನ್?: ಬೆಳಗಾವಿ, ವಿಜಯಪುರ ‌ಹಾಗೂ ಬಾಗಲಕೋಟೆ ಜಿಲ್ಲೆಗಳನ್ನು ಹೊಂದಿರುವ ಈ ಎರಡೂ ಕ್ಷೇತ್ರಗಳ ಪೈಕಿ ಶಿಕ್ಷಕ ಹಾಗೂ ಪದವೀಧರರ ಮತಗಳು ಹೆಚ್ಚಿರುವುದು ಬೆಳಗಾವಿ ಜಿಲ್ಲೆಯಲ್ಲೇ. ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿ‌ ಎಂದೇ ಬಿಂಬಿತವಾಗಿರುವ ಈ ಚುನಾವಣೆಯನ್ನು ಪ್ರತಿಪಕ್ಷ ಕಾಂಗ್ರೆಸ್ ‌ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಈ‌ ಕಾರಣಕ್ಕೆ ಕಾಂಗ್ರೆಸ್ ಅತಿಹೆಚ್ಚು ಮತಗಳಿರುವ ಬೆಳಗಾವಿ ಜಿಲ್ಲೆಯವರಿಗೆ ‌ಟಿಕೆಟ್ ಘೋಷಿಸಿದೆ. ಜೊತೆಗೆ ಪಂಚಮಸಾಲಿ ಸಮಾಜದ ಪ್ರಬಲ ನಾಯಕರಾಗಿರುವ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಹಾಗೂ ನ್ಯಾಯವಾದಿ ಸುನೀಲ್ ಸಂಕ್‌ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಮೂರು ಜಿಲ್ಲೆಗಳಲ್ಲಿ ಪಂಚಮಸಾಲಿ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿದೆ. ಜಾತಿ ಹಾಗೂ ಮತಗಳ ಆಧಾರದ ‌ಮೇಲೆ‌ ಟಿಕೆಟ್ ಹಂಚಿಕೆ‌ ಮಾಡಿರುವ ಕಾಂಗ್ರೆಸ್ ಗೇಮ್ ಪ್ಲ್ಯಾನ್‌ ಈ ಚುನಾವಣೆಯಲ್ಲಿ ‌ವರ್ಕೌಟ್ ಆಗುತ್ತಾ ಎಂಬುದೇ ಸದ್ಯದ ಕುತೂಹಲ.

ಇದನ್ನೂ ಓದಿ: 'ಕೆಎಚ್​ಬಿ ಫಲಾನುಭವಿಗಳಿಗೆ ಮೂಲಭೂತ ಸೌಲಭ್ಯ ನೀಡದೆ ದಂಡ ವಿಧಿಸುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ'

ಶಹಾಪುರ ಓಟಕ್ಕೆ ಬೀಳುವುದೇ ಬ್ರೇಕ್?: ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ಎರಡು ಸಲ ಗೆದ್ದಿರುವ ಅರುಣ್ ಶಹಾಪುರ ಹ್ಯಾಟ್ರಿಕ್ ಗೆಲುವಿನ ತವಕದಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಪ್ರಭಾವಿ ನಾಯಕ ಪ್ರಕಾಶ್​ ಹುಕ್ಕೇರಿಗೆ ಟಿಕೆಟ್ ನೀಡುತ್ತಿದ್ದಂತೆ ಬಿಜೆಪಿ ಶಾಕ್‌ಗೆ ಒಳಗಾಗಿದೆ. ಟಿಕೆಟ್ ಘೋಷಣೆಗೂ ಮುನ್ನವೇ ಪ್ರಕಾಶ್​ ಹುಕ್ಕೇರಿ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದಾರೆ. ಹುಕ್ಕೇರಿ ಎರಡು ಸಲ‌ ಸಚಿವರಾಗಿ, ಒಮ್ಮೆ ಸಂಸದರಾಗಿದ್ದು, ಮೂರು ಜಿಲ್ಲೆಗಳ ಮೇಲೆ ಹಿಡಿತ ಹೊಂದಿದ್ದಾರೆ. ಪ್ರಬಲ‌ ನಾಯಕ ಹುಕ್ಕೇರಿಯವರ ಸ್ಪರ್ಧೆಯಿಂದ ಅರುಣ್ ಶಹಾಪುರ ಅವರ ಗೆಲುವಿನ ಓಟಕ್ಕೆ ಬ್ರೇಕ್ ಬೀಳುವ ಆತಂಕ ಬಿಜೆಪಿಗೆ ಎದುರಾಗಿದೆ. ಎಬಿವಿಪಿ ಮೂಲಕ ರಾಜಕೀಯ ಪ್ರವೇಶ ಪಡೆದಿರುವ ಅರುಣ್ ಶಹಾಪುರ ಆರ್‌ಎಸ್‌ಎಸ್‌ ಬೆಂಬಲವೂ‌ ಇದೆ.‌ ಮೂರು ಜಿಲ್ಲೆಯ ಪಂಚಮಸಾಲಿ ಶಾಸಕರು ಪಕ್ಷಾತೀತವಾಗಿ ಹುಕ್ಕೇರಿ ಬೆನ್ನಿಗೆ ನಿಂತರೆ ಬಿಜೆಪಿಯ ಹಿನ್ನಡೆಗೆ ಕಾರಣವಾಗುವ ಸಾಧ್ಯತೆ ‌ಇದೆ. ಅಲ್ಲದೇ ತಿಂಗಳ ‌ಹಿಂದೆಯೇ ಬೆಳಗಾವಿಯಲ್ಲಿ ‌ಸಭೆ ನಡೆಸಿದ್ದ ಒಂದು ಸಾವಿರಕ್ಕೂ ‌ಅಧಿಕ ಶಿಕ್ಷಕರು ಬೆಳಗಾವಿ ಮೂಲದವರಿಗೆ ಟಿಕೆಟ್ ನೀಡಬೇಕು. ಯಾವ ಪಕ್ಷ ನಮ್ಮವರಿಗೆ ಟಿಕೆಟ್ ‌ನೀಡುತ್ತದೆಯೋ‌ ಆ ಪಕ್ಷವನ್ನು ಬೆಂಬಲಿಸುವುದಾಗಿಯೂ ಘೋಷಿಸಿದ್ದರು.

ವಾಯವ್ಯ ಶಿಕ್ಷಕ, ಪದವೀಧರ ಕ್ಷೇತ್ರಕ್ಕೆ ಚುನಾವಣೆ: ಪಂಚಮಸಾಲಿ ಸಮಾಜಕ್ಕೆ ಕಾಂಗ್ರೆಸ್ ಮಣೆ!

ನಿರಾಣಿಗೆ ಸಂಕ್ ಎದುರಾಳಿ: ಇನ್ನು ಕಳೆದ ಚುನಾವಣೆಯಲ್ಲಿ ವಾಯವ್ಯ ಪದವೀಧರ ‌ಕ್ಷೇತದಿಂದ‌ ಗೆದ್ದಿದ್ದ ಹಣಮಂತ ‌ನಿರಾಣಿ ಈ ಸಲವೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಹೋದರ ಮುರಗೇಶ ನಿರಾಣಿ ಸದ್ಯದ ಸರ್ಕಾರದಲ್ಲಿ ಸಚಿವರೂ ಆಗಿದ್ದು, ಹಣಮಂತ ‌ನಿರಾಣಿ ಗೆಲುವಿಗೆ ಸದ್ಯ ಪೂರಕ ವಾತಾವರಣವಿದೆ. ಇನ್ನು ಸುನೀಲ ಸಂಕ್ ನ್ಯಾಯವಾದಿ ಆಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಕೈ-ಕಮಲ ಅಭ್ಯರ್ಥಿಗಳಿಬ್ಬರೂ ಪಂಚಮಸಾಲಿ ಸಮಾಜಕ್ಕೆ ಸೇರಿದವರಾಗಿದ್ದು, ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಎಲ್ಲಿ ‌ಎಷ್ಟು ಮತಗಳು? ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ‌ಒಟ್ಟು 19,505 ಮತಗಳಿವೆ. ಬೆಳಗಾವಿಯಲ್ಲಿ 9,355, ವಿಜಯಪುರದಲ್ಲಿ 5,512 ಹಾಗೂ ಬಾಗಲಕೋಟೆಯಲ್ಲಿ 4,638 ಮತಗಳಿವೆ. ವಾಯವ್ಯ ಪದವೀಧರ ಕ್ಷೇತ್ರಕ್ಕೆ ‌ಒಟ್ಟು 72,674 ಮತಗಳಿವೆ. ಬೆಳಗಾವಿಯಲ್ಲಿ 31,489, ವಿಜಯಪುರದಲ್ಲಿ 14,846 ಹಾಗೂ ಬಾಗಲಕೋಟೆಯಲ್ಲಿ 26,342 ಮತಗಳಿವೆ. ಎರಡು ‌ಕ್ಷೇತ್ರಗಳಿಗೆ ಹೆಚ್ಚಿನ ‌ಮತಗಳಿರುವುದು ಬೆಳಗಾವಿಯಲ್ಲೇ ಎಂಬುದೇ ಇಲ್ಲಿ ಗಮನಿಸಬೇಕಾದ ಪ್ರಮುಖಾಂಶ.

Last Updated : Apr 22, 2022, 9:19 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.